ನದಿ ಉಳಿವಿನ ಬಗ್ಗೆ ಅ.2ರಂದು ವರದಿ
Team Udayavani, Sep 6, 2017, 8:30 AM IST
ತಿರುವನಂತಪುರಂ: ನದಿಗಳ ಪುನರುಜ್ಜೀವನಕ್ಕೆ ಸಮಗ್ರ ಮತ್ತು ಸುಸ್ಥಿರ ಯೋಜನೆಯ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದ ಯೋಜನಾ ವರದಿಯನ್ನು ಅ.2ಕ್ಕೆ ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು ಎಂದು ನದಿ ಉಳಿಸಿ ಅಭಿಯಾನ ರೂವಾರಿ ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ. ನದಿಗಳನ್ನು ಉಳಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಸಮಗ್ರ ಯೋಜನೆಯೇ ಇಲ್ಲ. ನದಿಗಳನ್ನು ಮತ್ತೆ ಜೀವಂತವಾಗಿಸಿ, ಹರಿಯುವಂತೆ ಮಾಡಿದರೆ ನಮ್ಮ ಜನಜೀವನವೂ ಮತ್ತೆ ಹರಿದಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿರುವ ನದಿಗಳಲ್ಲಿ ಶೇ.96ರಷ್ಟು ಅರಣ್ಯ ಪ್ರದೇಶಗಳಿಂದ ಹರಿಯುವಂಥವು. ಶೇ. 25ರಷ್ಟು ಭೂಮಿ ಸರ್ಕಾರಕ್ಕೆ ಸೇರಿದ್ದು, ಅಲ್ಲಿ ಕಾಡು ಬೆಳೆಸಿದರೆ ನದಿಗಳ ಉಳಿವಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು. ಜೊತೆಗೆ ರೈತರು ತಮ್ಮ ಆದಾಯಗಳನ್ನು ಹೆಚ್ಚಿಸಲು ವಿವಿಧ ಮಾದರಿಯ ಬೆಳೆ ಆಧಾರಿತ ಕೃಷಿಯ ಮಾದರಿಗಳನ್ನು ಪ್ರಸ್ತುತ ಪಡಿಸುತ್ತೇವೆ. ಇದರ ನಂತರ ಕೈಗಾರಿಕೆಗಳಿಗೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವ ಮಾದರಿಯಲ್ಲಿ ಮೂಲಸೌಕರ್ಯ ನಿರ್ಮಿಸುವಂತೆ ಕೈಗೊಳ್ಳಲು ಮನವಿ ಮಾಡಲಾಗುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.