ವಿಶೇಷ ಭದ್ರತೆ ನಡುವೆ ಗಣರಾಜ್ಯ ಸಂಭ್ರಮ
Team Udayavani, Jan 26, 2020, 6:40 AM IST
ಹೊಸದಿಲ್ಲಿ: ದೇಶದ ರಕ್ಷಣಾ ಪಡೆಗಳ ಶಕ್ತಿ, ಸಾಮರ್ಥ್ಯಗಳ ಪ್ರದರ್ಶನ, ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಅನಾವರಣಕ್ಕೆ 71ನೇ ಗಣರಾಜ್ಯೋತ್ಸವ ಸಾಕ್ಷಿಯಾಗಲಿದೆ.
ರಾಜಧಾನಿ ಹೊಸದಿಲ್ಲಿಯ ರಾಜ್‌ಪಥ್‌ನಲ್ಲಿ ಭಾರೀ ಭದ್ರತೆಯೊಂದಿಗೆ ನಡೆಯಲಿರುವ 90 ನಿಮಿಷಗಳ ಸಂಭ್ರಮದ ಕಾರ್ಯಕ್ರಮ ಕಣ್ತುಂಬಿ ಕೊಳ್ಳಲು ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪೊಲೀಸರು ಮತ್ತು ಅರೆಸೇನಾ ಪಡೆ ಯೋಧರು ಸೇರಿ 10 ಸಾವಿರ ಸಿಬ್ಬಂದಿಯ ಹದ್ದಿನ ಕಣ್ಣಿನ ಭದ್ರತೆ ಕಾರ್ಯಕ್ರಮಕ್ಕೆ ಇರಲಿದ್ದು, ಈ ಬಾರಿ ಬಾನಂಗಳಕ್ಕೂ ಭದ್ರತೆಯನ್ನು ವಿಸ್ತರಿಸಿರುವುದು ವಿಶೇಷ. ಕೆಂಪುಕೋಟೆ, ಚಾಂದಿನಿ ಚೌಕ್, ಯಮುನಾ ಖದರ್ ಭಾಗಗಳಲ್ಲಿ 150ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಉಪಗ್ರಹ ನಿಗ್ರಹ ಶಸ್ತ್ರ “ಶಕ್ತಿ’, ಭಾರತೀಯ ಸೇನೆಯ ಸಮರ ಟ್ಯಾಂಕ್ “ಭೀಷ್ಮ’, ಯುದ್ಧ ವಾಹನಗಳು ಮತ್ತು ವಾಯು ಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ “ಚಿನೂಕ್’ ಮತ್ತು “ಅಪಾಚೆ’ ಹೆಲಿಕಾಪ್ಟರ್‌ಗಳು ಈ ಬಾರಿಯ ಮಿಲಿಟರಿ ಪರೇಡ್‌ನ ಪ್ರಮುಖ ಆಕರ್ಷಣೆಗಳಾಗಿವೆ.
16 ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಆರು ಸಚಿವಾಲಯ ಗಳು ಮತ್ತು ಇಲಾಖೆಗಳು ರೂಪಿಸಿರುವ ಸ್ತಬ್ಧ ಚಿತ್ರಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಮೂಲಕ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಳ್ಳ ಲಿದೆ. ಇದೇ ವೇಳೆ ಕರ್ನಾಟಕದ 7 ವಿದ್ಯಾರ್ಥಿಗಳು ಸೇರಿದಂತೆ ಸಿಬಿಎಸ್‌ಇ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಅಗ್ರ ಶ್ರೇಯಾಂಕ ಪಡೆದ ದೇಶದ ವಿವಿಧ ರಾಜ್ಯಗಳ 105 ಮಂದಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕುಳಿತು ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.