ಸಹಕಾರ ಸಂಘಗಳಿಂದ “ಬ್ಯಾಂಕ್’ ಬಳಕೆ: ಆರ್‌ಬಿಐ ಎಚ್ಚರಿಕೆ
Team Udayavani, Nov 23, 2021, 6:31 AM IST
ಹೊಸದಿಲ್ಲಿ: ಸಹಕಾರ ಸಂಘಗಳು ತಮ್ಮ ಹೆಸರಿನ ಜತೆಗೆ “ಬ್ಯಾಂಕ್’ ಪದವನ್ನು ಉಪಯೋಗಿಸುವುದು ಮತ್ತು ತಮ್ಮ ಸದಸ್ಯ ರಲ್ಲದವರಿಂದಲೂ ಠೇವಣಿ ಸ್ವೀಕರಿಸಿಕೊಳ್ಳುತ್ತಿರುವ ವಿಚಾರದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸಲಹೆ ನೀಡಿದೆ.
2020ರ ಸೆ. 29ರಂದು ಜಾರಿಗೆ ಬಂದಿರುವ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಕಾಯ್ದೆಯ ಅನ್ವಯ ಕಾಯಿದೆಯ ನಿಯಮಗಳ ಅನುಸಾರ ಅಥವಾ ಆರ್‌ಬಿಐಯಿಂದ ಅನುಮತಿ ಹೊಂದಿರುವ ಸಹಕಾರ ಸಂಘಗಳನ್ನು ಹೊರತು ಪಡಿಸಿ ಇತರ ಸಹಕಾರ ಸಂಘಗಳು “ಬ್ಯಾಂಕ್’, “ಬ್ಯಾಂಕರ್’ ಅಥವಾ “ಬ್ಯಾಂಕಿಂಗ್’ ಪದ ವನ್ನು ತಮ್ಮ ಹೆಸರಿನ ಜತೆಗೆ ಬಳಸುವಂತಿಲ್ಲ.
ಆದರೂ ಕೆಲವು ಸಹಕಾರಿ ಸಂಘಗಳು ಬ್ಯಾಂಕ್ ಪದವನ್ನು ಉಪಯೋಗಿಸುತ್ತಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಆರ್‌ಬಿಐ ಸಲಹೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.