ನೀವು ತಿನ್ನುವ ಆಹಾರ ಮತ್ತು ಬೆಳೆಯುವ ರೈತರನ್ನು ಗೌರವಿಸಿ: ರೈತರ ಪರ ನಿಂತ ವಿಶಾಲ್ ದದ್ಲಾನಿ
Team Udayavani, Mar 24, 2021, 6:52 PM IST
ನವ ದೆಹಲಿ : ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ, ರೈತರ ಪ್ರತಿಭಟನೆಗೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮತ್ತೆ ಇಂದು(ಬುಧವಾರ. ಮಾ. 24) ಸೂಚಿಸಿದ್ದಾರೆ.
ಓದಿ : ಗುಯಾನಾದಿಂದ ಭಾರತಕ್ಕೆ ತೈಲ ಹೊತ್ತ ನೌಕೆಯ ಪಯಣ! ಹೊಸ ತೈಲ ಉತ್ಪಾದಕ ದೇಶದಿಂದ ತೈಲ ಖರೀದಿ
ದದ್ಲಾನಿ ಅವರು ಬೆಳೆದ ಸಾವಯವ ಟೊಮೆಟೊಗಳ ಛಾಯಾಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ನೀವು ತಿನ್ನುವ ಆಹಾರ ಮತ್ತು ಬೆಳೆಯುವ ರೈತರನ್ನು ಗೌರವಿಸಿ. ನೀವು ಭೂಮಿಯೊಂದಿಗಿದ್ದರೆ, ನಿಮಗೆ ಇದು ಎಷ್ಟು ತಾಳ್ಮೆಯ, ಕಷ್ಟದ ಕೆಲಸ ಎನ್ನುವುದು ನಿಮಗೆ ಗೊತ್ತಾಗುತ್ತದೆ. #FarmerProtests #FarmersProtest #JaiKisaan #IStandWithFarmers. ” ಎಂದು ಬರೆದುಕೊಂಡಿದ್ದಾರೆ.
View this post on Instagram
ಇನ್ನು, ಜನವರಿ 26ರಂದು ರೈತರ ಪ್ರತಿಭಟನೆ ಹಿಂಸೆಗೆ ತಿರುಗಿದೆ ಎಂದು ಸುದ್ದಿಯಾದ ಹಿನ್ನಲೆಯಲ್ಲಿಯೂ ದದ್ಲಾನಿ ಅವರು ಟ್ವೀಟ್ ಮಾಡಿದ್ದರು, “ಇದು ನಿಮಗೆ ಅರ್ಥವಾಗುತ್ತದೆಯೇ? ಇಷ್ಟು ತಿಂಗಳು ಶಾಂತಿಯುತವಾಗಿ ಪ್ರತಿಭಟಿಸಿದ ರೈತರು, ಹಿಂಸಾತ್ಮಕ್ಕೆ ತಿರುಗಿದ್ದು ಏಕೆ..? ಮೊದಲು ಅಧಿಕಾರದಲ್ಲಿರುವವರು ಇದನ್ನು ಮಾಡುವುದನ್ನು ನಾವು ನೋಡಿದ್ದೇವೆ. Typical play: Send violent stooges, discredit movement.” ಎಂದು ದಾದ್ಲಾನಿ ಬರೆದುಕೊಂಡಿದ್ದರು.
ಈ ಹಿಂದೆ ರೈತರ ಪ್ರತಿಭಟನೆಗೆ ಬಾಲಿವುಡ್ ಸೆಲೆಬ್ರಿಟಿಗಳಾದ ಧರ್ಮೇಂದ್ರ, ಪ್ರಿಯಾಂಕಾ ಚೋಪ್ರಾ, ತಾಪ್ಸೀ ಪನ್ನು, ಅಭಯ್ ಡಿಯೋಲ್, ಸೋನಾಕ್ಷಿ ಸಿನ್ಹಾ, ಸೋನು ಸೂದ್, ಸನ್ನಿ ಡಿಯೋಲ್, ಸೋನಮ್ ಕಪೂರ್, ದಿಲ್ಜಿತ್ ದೋಸಾಂಜ್, ಪ್ರೀತಿ ಜಿಂಟಾ, ಗುಲ್ ಪನಾಗ್, ರಿತೀಶ್ ದೇಶ್ ಮುಖ್, ಸ್ವರಾ ಭಾಸ್ಕರ್, ವೀರ್ ದಾಸ್, ಒನಿರ್ ಮತ್ತು ಸುಶಾಂತ್ ಸಿಂಗ್ ಸೇರಿ ಹಲವರು ಬೆಂಬಲ ಸೂಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.