ಮನೋರೋಗಿಗಳ ಸಂಕಷ್ಟಕ್ಕೆ ಸ್ಪಂದನೆ
ಸೋಂಕಿತ ಮನೋರೋಗಿಗಳ ಚಿಕಿತ್ಸಾ ನಿರ್ವಹಣೆಗೆ ಕೇಂದ್ರ ಸರಕಾರದ ಮಾರ್ಗಸೂಚಿ
Team Udayavani, Nov 3, 2020, 6:12 AM IST
ಸಾಮಾಜಿಕ ಅಂತರ ನಿಯಮ ಉಲ್ಲಂ ಸಿ ದಿಲ್ಲಿಯ ಸದಾರ್ ಬಜಾರ್‌ನಲ್ಲಿ ನೆರೆದಿರುವ ಜನ.
ಹೊಸದಿಲ್ಲಿ: ದೈಹಿಕ- ಮಾನಸಿಕವಾಗಿ ಎಲ್ಲ ಸರಿ ಇದ್ದವರನ್ನು ಕೊರೊನಾದ ಕಪಿಮುಷ್ಟಿಯಿಂದ ಮುಕ್ತಗೊಳಿಸುವುದು ವೈದ್ಯರಿಗೆ ಸವಾಲು. ಇನ್ನು ಮನೋರೋಗಿಗಳ ಚಿಕಿತ್ಸೆಯ ಪಡಿಪಾಟಲು ಕೇಳಬೇಕೇ? ಕೊರೊನಾಕ್ಕೆ ತುತ್ತಾದ ಮನೋರೋಗಿಗಳ ಚಿಕಿತ್ಸಾ ನಿರ್ವಹಣೆಯ ಸಂಕಷ್ಟಕ್ಕೆ ಆರೋಗ್ಯ ಸಚಿವಾಲಯ ಕಿವಿಗೊಟ್ಟಿದೆ.
ಈ ಸಂಬಂಧ ಪ್ರತ್ಯೇಕ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಮಾನಸಿಕ ಅನಾರೋಗ್ಯ ದಿಂದ ಬಳಲುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಲಭ್ಯ ಕಲ್ಪಿಸಬೇಕು. ದೈಹಿಕವಾಗಿ ಅಥವಾ ಟೆಲಿ ಸಮಾಲೋಚನೆ ಮೂಲಕ ಮನೋರೋಗ ತಜ್ಞರು ಅವರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಇಲಾಖೆ ಸೂಚಿಸಿದೆ.
ನಿಯಮಗಳೇನು?: “ಸೈಕಿಯಾಟ್ರಿಸ್ಟ್‌ಗಳ ಸಲಹೆ ಇಲ್ಲದೆ ಯಾವುದೇ ಮನೋರೋಗಕ್ಕೆ ಸಂಬಂಧಿ ಸಿದ ಔಷಧ ನಿಲ್ಲಿಸುವಂತಿಲ್ಲ. ಮಾರಣಾಂತಿಕ ತುರ್ತು ಸಂದರ್ಭದಲ್ಲಿ ಇದು ಅನ್ವಯವಾಗದು’ ಎಂದು ಹೇಳಿದೆ. “ನರ್ಸಿಂಗ್ ಕೇಂದ್ರದ ಸಮೀಪವೇ ಮಾನಸಿಕ ರೋಗಿಗೆ ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕು. ದಾದಿಯರು ಪ್ರತಿಕ್ಷಣ ಆ ಸೋಂಕಿತನ ಮೇಲೆ ನಿಗಾ ಇಡಬೇಕು. ಚಿಕಿತ್ಸಾ ಕೊಠಡಿಯ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿರಬೇಕು. ದೈಹಿಕ ಹಾನಿಗೊಳಿಸುವಂಥ ಯಾವುದೇ ಉಪಕರಣ ಅಲ್ಲಿ ಲಭ್ಯವಿರದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದೆ.
“ಅತ್ಯಂತ ಸರಳ ಭಾಷೆಯಲ್ಲಿ ಅವರಿಗೆ ಮಾಹಿತಿ ನೀಡಬೇಕು. ಸಚಿತ್ರ, ದೃಶ್ಯಗಳ ವೀಡಿಯೋ ಮತ್ತು ವೀಡಿಯೋ ಕಾಲ್ ಮೂಲಕ ಮಾರ್ಗದರ್ಶನ ನೀಡಬೇಕು. ಅವರ ದೈಹಿಕ- ಮಾನಸಿಕ ಆರೋಗ್ಯದ ಬೆಳವಣಿಗೆಗಳನ್ನು ನಿತ್ಯ ದಾಖಲಿಸುತ್ತಿರಬೇಕು’ ಎಂದು ಮಾರ್ಗಸೂಚಿಯಲ್ಲಿ ವಿವರಿಸಿದೆ.
“ಕೆಲವು ರೋಗಿಗಳು ಆತ್ಮಹತ್ಯೆ ಅಥವಾ ಹಿಂಸಾ ಚಾರ ಅಪಾಯಕ್ಕೆ ಯತ್ನಿಸುತ್ತಿರುತ್ತಾರೆ. ಹೀಗಾಗಿ ಆರೋಗ್ಯ ಸಿಬಂದಿ ನಿರಂತರವಾಗಿ ಅವರ ವರ್ತನೆ ಗಳನ್ನು ಗಮನಿಸುತ್ತಿರಬೇಕು’ ಎಂದೂ ಸೂಚಿಸಿದೆ. ಅನಗತ್ಯ ಭೇಟಿ ಬೇಡ: ತುರ್ತು ಸಂದರ್ಭ ಉದ್ಭವಿಸದ ಹೊರತು ಮಾನಸಿಕ ರೋಗಿಗಳು, ಆರೈಕೆದಾರರು ಒಪಿಡಿಗೆ ಅನಗತ್ಯ ಭೇಟಿ ನೀಡದೇ ಇರಲು ಸೂಚಿಸಬೇಕು. ಸ್ಥಳೀಯವಾಗಿ ಇವರಿಗೆ ಔಷಧ ಲಭ್ಯವಾಗದೆ ಇದ್ದಲ್ಲಿ, ರಾಜ್ಯ ಅಥವಾ ರಾಷ್ಟ್ರೀಯ ಸಹಾಯವಾಣಿಗಳನ್ನು ಸಂಪರ್ಕಿಸಿ, ಅವರು ಸಲಹೆ ಪಡೆಯಬಹುದು ಎಂದೂ ತಿಳಿಸಿದೆ.
ಗುಣಮುಖ ಪ್ರಮಾಣ ಶೇ.91.68ಕ್ಕೇರಿಕೆ
ದೇಶದಲ್ಲಿ ಭಾನುವಾರ ಬೆಳಗ್ಗೆ 8ರಿಂದ ಸೋಮವಾರ ಬೆಳಗ್ಗೆ 8ರವರೆಗೆ 45,231 ಮಂದಿಗೆ ಸೋಂಕು ದೃಢಪಟ್ಟು, 496 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 82 ಲಕ್ಷ ದಾಟಿದೆ. ಆದರೆ, ಈ ಪೈಕಿ 75 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.91.68ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ ಮರಣ ಪ್ರಮಾಣ ಶೇ.1.49ರಷ್ಟಿದೆ.
ಸೋಂಕು ಹೆಚ್ಚಲು ಹಬ್ಬಗಳೇ ಕಾರಣ
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದ್ದು, ಪ್ರಕರಣಗಳು ಹೆಚ್ಚಲು ಹಬ್ಬಗಳೇ ಕಾರಣ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಹಬ್ಬಗಳ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಳ ಹಾಗೂ ಸುರಕ್ಷಾ ಕ್ರಮಗಳ ಪಾಲನೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇತೃತ್ವದಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಜತೆಗೆ, ಮೆಟ್ರೋ ಸಂಚಾರದ ವೇಳೆ ಮಾರ್ಗಸೂಚಿ ಪಾಲನೆಯಾಗುವಂತೆ ಎಚ್ಚರ ವಹಿಸಿ ಎಂದು ಸೂಚಿಸಲಾಗಿದೆ.
ಜರ್ಮನಿಯಲ್ಲೂ ಲಾಕ್‌ಡೌನ್
ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಮತ್ತೆ ಲಾಕ್‌ಡೌನ್‌ನ ಮೊರೆ ಹೋಗುತ್ತಿವೆ. ಐರೋಪ್ಯ ರಾಷ್ಟ್ರಗಳ ಪೈಕಿ ಜರ್ಮನಿಯೂ ಸೋಮವಾರದಿಂದ ಭಾಗಶಃ ಲಾಕ್‌ಡೌನ್ ಘೋಷಿಸಿದೆ. ರೆಸ್ಟಾರೆಂಟ್, ಬಾರ್, ಥಿಯೇಟರ್, ಜಿಮ್ ಮತ್ತಿತರ ಚಟುವಟಿಕೆಗಳಿಗೆ 4 ವಾರಗಳ ಕಾಲ ನಿಷೇಧ ಹೇರಲಾಗಿದೆ. ಕಳೆದ 2 ವಾರಗಳಲ್ಲಿ ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ಒಂದಾಗಿ ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕಲೇಬೇಕಿದೆ ಎಂದು ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಹೇಳಿದ್ದಾರೆ. ಗುರುವಾರದಿಂದ ಯುಕೆಯಲ್ಲೂ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಆಸ್ಟ್ರಿಯಾ ಕೂಡ ಈ ವಾರದಲ್ಲೇ ಹೊಸ ನಿರ್ಬಂಧ ಹೇರಲು ಚಿಂತನೆ ನಡೆಸಿದೆ.
ಕೊರೊನಾ ಟೆಸ್ಟ್‌ಗೆ ಸಹಕರಿಸದಿದ್ರೆ?
ಗಂಟಲು ದ್ರವ ಪರೀಕ್ಷೆ, ಕೊರೊನಾ ಸಂಬಂಧಿತ ಇತರ ಪರೀಕ್ಷೆಗೆ ಕೆಲವು ಮಾನಸಿಕ ರೋಗಿಗಳು ಸಹಕರಿಸದಿರುವ ಸಾಧ್ಯತೆಯಿದೆ.
ಸೂಕ್ತ ಪರೀಕ್ಷೆಗಳು ವಿಳಂಬವಾಗಲೂ ಬಹುದು. ಇಂಥ ವೇಳೆ ನಿದ್ರಾಜನಕ ನೀಡಬೇಕಾದ ಅವಶ್ಯಕತೆ ಬೀಳಬಹುದು ಎಂದೂ ಮಾರ್ಗಸೂಚಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
MUST WATCH
ಹೊಸ ಸೇರ್ಪಡೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.