ಆದಾಯ 5 ಲಕ್ಷಕ್ಕಿಂತ ಕಡಿಮೆಯಿದ್ದರೂ ರಿಟರ್ನ್ಸ್ ಫೈಲಿಂಗ್ ಕಡ್ಡಾಯ
Team Udayavani, Feb 3, 2019, 1:11 AM IST
ನವದೆಹಲಿ: ‘ಅಂತೂ, ಬಜೆಟ್ನಲ್ಲಿ 5 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ. ನನ್ನ ಸಂಬಳವಂತೂ 5 ಲಕ್ಷದೊಳಗೇ ಇದೆ. ಹಾಗಾಗಿ, ಇನ್ನು ಮುಂದೆ ರಿಟರ್ನ್ಸ್ ಸಲ್ಲಿಸುವ ತಲೆಬಿಸಿ ಇಲ್ಲ.’ ಹೀಗೇನಾದರೂ ನೀವು ಅಂದುಕೊಂಡಿದ್ದರೆ ಅದು ತಪ್ಪು. 5 ಲಕ್ಷದೊಳಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಘೋಷಿಸಿರುವುದು ನಿಜ. ಆದರೆ, ಈ ವಿನಾಯ್ತಿಯ ಮಿತಿ 60 ವರ್ಷದೊಳಗಿನ ಎಲ್ಲ ನಾಗರಿಕರಿಗೆ ಈಗಲೂ 2.5 ಲಕ್ಷ ರೂ.ಗಲೇ ಆಗಿದೆ. ಈ ಮಿತಿಯಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ, ನಿಮ್ಮ ಆದಾಯ 5 ಲಕ್ಷಕ್ಕಿಂತ ಕಡಿಮೆಯಿದ್ದರೂ ನೀವು ಐಟಿ ರಿಟರ್ನ್ಸ್ ಸಲ್ಲಿಸಲೇಬೇಕು. ವಿನಾಯ್ತಿಯಿದೆ ಎಂದು ತಿಳಿದು ರಿಟರ್ನ್ಸ್ ಸಲ್ಲಿಸದೇ ಇದ್ದರೆ, ಐಟಿ ಇಲಾಖೆಯಿಂದ ನೋಟಿಸ್ ಬರುವುದು ಖಚಿತ. ಮೂಲ ವಿನಾಯ್ತಿ ಮಿತಿ ಈಗಲೂ 2.5 ಲಕ್ಷ ರೂ.ಗಳೇ ಆಗಿದೆ. ಹಾಗಾಗಿ, ಎರಡೂವರೆ ಲಕ್ಷಕ್ಕಿಂತ ಹೆಚ್ಚಿನ ವೇತನವನ್ನು ಹೊಂದಿರುವ ಎಲ್ಲರೂ ರಿಟರ್ನ್ಸ್ ಸಲ್ಲಿಸಬೇಕು.
ಮೊದಲು ಐಟಿ ರಿಟರ್ನ್ಸ್ ಸಲ್ಲಿಸುವ ಮೂಲಕ ನಿಮ್ಮ ಒಟ್ಟು ಆದಾಯವನ್ನು ಘೋಷಿಸಬೇಕು (ಇದರಲ್ಲಿ ನಿಮ್ಮ ವೇತನ, ಉಳಿತಾಯ ಖಾತೆಯಿಂದ ಬಂದ ಬಡ್ಡಿ, ನಿಶ್ಚಿತ ಠೇವಣಿ ಇತ್ಯಾದಿ ಆದಾಯದ ಮೂಲಗಳು ಒಳಗೊಂಡಿರಬೇಕು). ನಂತರ ಮನೆ ಬಾಡಿಗೆ ಭತ್ಯೆ(ಎಚ್ಆರ್ಎ), ಸ್ಟಾಂಡರ್ಡ್ ಡಿಡಕ್ಷನ್, ಸೆಕ್ಷನ್ 80ಸಿ, 80ಡಿ ಅನ್ವಯ ಬರುವ ಡಿಡಕ್ಷನ್ಗಳು, ಗೃಹ ಸಾಲದ ಬಡ್ಡಿ… ಮುಂತಾದವು ಗಳನ್ನು ತೋರಿಸಿ ವಿನಾಯ್ತಿಯನ್ನು ಕ್ಲೇಮ್ ಮಾಡ ಬೇಕು. ಈ ಎಲ್ಲ ಡಿಡಕ್ಷನ್ಗಳನ್ನು ಕಳೆದ ನಂತರ, ನಿಮ್ಮ ನಿವ್ವಳ ತೆರಿಗೆಯುಕ್ತ ಆದಾಯ 5 ಲಕ್ಷ ರೂ.ಗಳನ್ನು ಮೀರದೇ ಇದ್ದರೆ, ಆಗ ಮಾತ್ರ ನೀವು ಸೆಕ್ಷನ್ 87ಎ ಅನ್ವಯ ರಿಬೇಟ್ ಪಡೆಯಲು ಅರ್ಹ ರಾಗಿರುತ್ತೀರಿ.
ನಿಮ್ಮ ಆದಾಯ 5 ಲಕ್ಷ ರೂ. ದಾಟಿದ್ದರೆ?: ಈ ಬಜೆಟ್ನಲ್ಲಿ ಆದಾಯ ತೆರಿಗೆಯ ಸ್ಲ್ಯಾಬ್ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ, ನಿಮ್ಮ ಆದಾಯವು 5 ಲಕ್ಷ ರೂ.ಗಳನ್ನು ದಾಟಿದ್ದರೆ, ನಿಮಗೆ ರಿಬೇಟ್ನ ಲಾಭ ಸಿಗುವುದಿಲ್ಲ. ಅಂದರೆ, ನಿಮ್ಮ ಆದಾಯ 5 ಲಕ್ಷ ರೂ.ಗಳಿಗಿಂತ 1 ರೂ. ಹೆಚ್ಚಿದ್ದರೂ ನೀವು ಈ ಹಿಂದೆ ಇದ್ದ ಸ್ಲ್ಯಾಬ್ನಂತೆಯೇ ಶೇ.20ರಷ್ಟು ತೆರಿಗೆ ಪಾವತಿಸಲೇಬೇಕು (ಅಂದರೆ, 2.5 ಲಕ್ಷ ರೂ.ಗಳಿಂದಲೇ ನಿಮ್ಮ ತೆರಿಗೆ ಆರಂಭವಾಗುತ್ತದೆ).
ಗ್ರಾಚುಟಿ ಮಿತಿಯೂ ಏರಿಕೆ: ಬಜೆಟ್ನಲ್ಲಿ ನೌಕರರಿಗೆ ನೀಡಲಾಗಿರುವ ಮತ್ತೂಂದು ಸಿಹಿಸುದ್ದಿಯೆಂದರೆ ಗ್ರಾಚುಟಿ ಮಿತಿ ಏರಿಕೆ. ಈವರೆಗೆ 10 ಲಕ್ಷ ರೂ.ಗಳಿದ್ದ ಗ್ರಾಚುಟಿ ಮಿತಿಯನ್ನು ಈಗ 20 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ 10 ನೌಕರರನ್ನು ಹೊಂದಿರುವ ಯಾವುದೇ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷ ಕಾರ್ಯನಿರ್ವಹಿಸುವ ನೌಕರನಿಗೆ ಗ್ರಾಚುಟಿಯ ಲಾಭ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.