ರಿವಾಲ್ವರ್ ರಾಣಿ! ಮಂಟಪಕ್ಕೆ ನುಗ್ಗಿ ವರನನ್ನೇ ಅಪಹರಿಸಿದ ಪ್ರೇಯಸಿ
Team Udayavani, May 17, 2017, 1:37 PM IST
ಬುಂದೇಲ್ ಖಂಡ್: ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬೀಳುವುದು, ವರ, ವಧು ಹಿಂದಿನ ದಿನ ನಾಪತ್ತೆಯಾಗೋದು, ವಿವಾಹ ವೇಳೆಯಲ್ಲೇ ರಂಪಾಟ ನಡೆಯುವ ಘಟನೆ ಬಗ್ಗೆ ಗೊತ್ತಿದೆ. ಆದರೆ ಇದು ಅವೆಲ್ಲಕ್ಕಿಂತ ಭಿನ್ನವಾದದ್ದು! ನೇರವಾಗಿಯೇ ಮದುವೆ ಮಂಟಪಕ್ಕೆ ಬಂದ ಯುವತಿಯೊಬ್ಬಳು ವರನ ತಲೆಗೆ ರಿವಾಲ್ವರ್ ಇಟ್ಟು ಕಿಡ್ನಾಪ್ ಮಾಡಿಕೊಂಡು ಹೋದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಏನಿದು ರಿವಾಲ್ವರ್ ರಾಣಿ ಘಟನೆ!
25 ವರ್ಷದ ಯುವತಿಯೊಬ್ಬಳು ಇಬ್ಬರು ಯುವಕರ ಜೊತೆ ನೇರವಾಗಿ ಮದುವೆ ಮಂಟಪಕ್ಕೆ ಬಂದು, ವರನ ತಲೆಗೆ ರಿವಾಲ್ವರ್ ಇಟ್ಟು…ಈ ವ್ಯಕ್ತಿ ನನ್ನ ಪ್ರೀತಿಸಿದ್ದಾನೆ. ಈಗ ನನಗೆ ವಿಶ್ವಾಸದ್ರೋಹ ಎಸಗಿ, ಬೇರೊಬ್ಬಳ ಜೊತೆ ಹಸೆಮಣೆ ಏರಲು ಹೊರಟಿದ್ದಾನೆ. ಆದರೆ ನಾನು ಅದಕ್ಕೆ ಅವಕಾಶ ಕೊಡಲ್ಲ ಎಂದು ಸಿನಿಮಾ ಶೈಲಿಯಲ್ಲಿ ಆವಾಜ್ ಹಾಕಿದ್ದಾಳೆ.
ವರನನ್ನು ಮಂಟಪದಿಂದಲೇ ಕಿಡ್ನಾಪ್ ಮಾಡಿಕೊಂಡು ಹೋಗಿ ತನ್ನ ಒತ್ತೆಯಾಳನ್ನಾಗಿ ಇರಿಸಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಉತ್ತರಪ್ರದೇಶದ ಬುಂದೇಲ್ ಖಂಡ್ ನಲ್ಲಿ ನಡೆದಿದೆ ಎಂದು ವರದಿ ವಿವರಿಸಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಅಶೋಕ್ ಯಾದವ್ ಎಂಬ ವರ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಯಾದವ್ ಪ್ರೇಮದ ಸುಳಿಗೆ ಸಿಲುಕಿದ್ದಾನೆ ಎಂದು ಹೇಳಿರುವ ಸ್ಥಳೀಯರು ಆತ ರಹಸ್ಯವಾಗಿ ಮದುವೆಯಾಗಿರುವುದಾಗಿ ಆರೋಪಿಸುತ್ತಾರೆ. ಆದರೆ ಕುಟುಂಬಸ್ಥರ ಒತ್ತಡದ ಮೇರೆಗೆ ಯಾದವ್ ಮತ್ತೊಬ್ಬಾಕೆ ಜೊತೆ ಮದುವೆಗೆ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
ದಂಗುಬಡಿದು ನಿಂತಿದ್ದ ಅತಿಥಿಗಳು ವರನ ತಂದೆ ರಾಮಹೆತ್ ಯಾದವ್ ಬಳಿ ವಿಚಾರಿಸಿದಾಗ, ಹೌದು ನನ್ನ ಮಗನ ಬಗ್ಗೆ ನನಗೆ ಸಂದೇಶ ಇದ್ದಿತ್ತು. ನನ್ನ ಮಗ ಕೆಲಸ ಮಾಡುತ್ತಿರುವ ನಗರಕ್ಕೆ ಹೋದಾಗ ಆತ ನನ್ನ ಮನೆಗೆ ಕರೆಯಲಿಲ್ಲ. ಒಂದು ದೇವಾಲಯದಲ್ಲಿ ಭೇಟಿಯಾಗಿ, ಮಾತನಾಡಿ ಕಳುಹಿಸಿದ್ದ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಮದುವೆ ಮಂಟಪದಿಂದ ವರನನ್ನು ಅಪಹರಿಸಿರುವುದಾಗಿ ಆರೋಪಿಸಿ ವಧುವಿನ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಅರೇ ಈಕೆ ರಿವಾಲ್ವರ್ ರಾಣಿಯೇ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.