ಜೆಡಿಯುನಿಂದ ಶರದ್ ಉಚ್ಚಾಟನೆ; ರಾಜ್ಯಸಭಾ ಸದಸ್ಯತ್ವಕ್ಕೆ ಸಂಚಕಾರ?
Team Udayavani, Aug 10, 2017, 11:59 AM IST
ಹೊಸದಿಲ್ಲಿ : ತನ್ನ ಹಳೇ ಮಿತ್ರ ಬಿಜೆಪಿಯ ಬೆಂಬಲದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಹೊಸ ಸರಕಾರವನ್ನು ರಚಿಸಿ ಎರಡು ವಾರ ಆಗುವಷ್ಟರಲ್ಲಿ ಇದೀಗ ಬಿಹಾರ ಇನ್ನೊಂದು ರಾಜಕೀಯ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ.
ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ನಿತೀಶ್ ನೇತೃತ್ವದ ಜೆಡಿಯು ಇದೀಗ ಪಕ್ಷದ ಹಿರಿಯ ಸದಸ್ಯ ಶರದ್ ಯಾದವ್ ಅವರ ವಿರುದ್ಧ ಚಾಟಿ ಬೀಸಲಿದೆ ಮತ್ತು ಅವರಿಂದ ರಾಜ್ಯಸಭಾ ಸದಸ್ಯತ್ವವನ್ನು ಹಿಂಪಡೆಯುವ ಸಿದ್ಧತೆಯಲ್ಲಿದೆ.
ಶರದ್ ಯಾದವ್ ಅವರು ಒಂದೊಮ್ಮೆ ತಾನೇ ತನ್ನ ಸ್ಥಾನವನ್ನು ಬಿಟ್ಟುಕೊಡದಿದ್ದಲ್ಲಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಯಾದವ್ ಅವರು ತಾನು ಇದೇ ಆ.10ರಿಂದ 12ರ ತನಕ, ಬಿಹಾರದ 10 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಜೆಡಿಯು ಮತ್ತು ಆರ್‌ಜೆಡಿ ಮಹಾಘಟಬಂಧನದಿಂದ ಹಿಂದೆಗೆದುಕೊಂಡಿರುವುದರ ಪರಿಣಾಮಗಳನ್ನು ಜನರೊಡನೆ ಸುವುದಾಗಿ ಪ್ರಕಟಿಸಿದ್ದರು.
ನಿನ್ನೆ ಬುಧವಾರ ಬೆಳಗ್ಗೆ ಶರದ್ ಯಾದವ್ ಅವರು, ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಅಭಿನಂದಿಸಿದ್ದರು.
ಯಾದವ್ ಅವರು ಈಚೆಗೆ “ನನ್ನ ಪ್ರಾಣಕ್ಕೆ ಅಪಾಯವಿದೆ’ ಎಂದು ಹೇಳಿಕೊಂಡಿದ್ದರು. ನಿತೀಶ್ ಮತ್ತು ಯಾದವ್ ಬೇರ್ಪಡುತ್ತಾರೆಂಬ ವದಂತಿಗಳು ಈಚೆಗೆ ಜೋರಾಗಿ ಹಬ್ಬಿಕೊಂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.