Bird Flu: ಸದ್ಯವೇ ಕೋವಿಡ್‌ಗಿಂತ 100 ಪಟ್ಟು ಅಪಾಯಕಾರಿ ಹಕ್ಕಿ ಜ್ವರ ?
ಎಚ್ಚರಿಕೆ ನೀಡಿದ ಹಕ್ಕಿ ಜ್ವರ ತಜ್ಞ ಡಾ| ಸುರೇಶ್ ಕೂಚುಪುಡಿ ಹಕ್ಕಿ ಜ್ವರ ಸೋಂಕು ತಗಲಿದವರ ಮರಣ ದರ ಅರ್ಧಕ್ಕಿಂತ ಹೆಚ್ಚು ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳಬೇಕು: ತಜ್ಞರ ಸಲಹೆ
Team Udayavani, Apr 6, 2024, 1:14 PM IST
ಹೊಸದಿಲ್ಲಿ: ಮನುಕುಲಕ್ಕೆ ಮತ್ತೂಂದು ಸಂಚಕಾರ ಕಾದಿದೆಯಾ?
ಹೌದು. ಕೋವಿಡ್‌ಗಿಂತೂ 100 ಪಟ್ಟು ಹೆಚ್ಚು ಮಾರಣಾಂತಿಕ ವಾಗಬಲ್ಲ ಹಕ್ಕಿ ಜ್ವರ (ಎಚ್5ಎನ್1)ಸಾಂಕ್ರಾಮಿಕ ಎದುರಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸಂಶೋಧಕರು ಈ ಹಕ್ಕಿ ಜ್ವರದ ಕುರಿತು ನೀಡಿರುವ ಮಾಹಿತಿಯನ್ನು ಆಧರಿಸಿ ಇಂಗ್ಲೆಂಡ್ ಮೂಲದ “ಡೈಲಿ ಮೇಲ್’ ವರದಿ ಮಾಡಿದೆ. ಎಚ್5ಎನ್1 ತಳಿಯು ಈಗ ಗಂಭೀರ ಹಂತಕ್ಕೆ ತಲುಪಿದ್ದು, ಯಾವುದೇ ಹಂತದಲ್ಲಿ ಅದು ಸಾಂಕ್ರಾಮಿಕವಾಗಿ ಪರಿವರ್ತಿತವಾಗಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿರುವ ಪಿಟ್ಸ್‌ಬರ್ಗ್‌ನಲ್ಲಿರುವ ಹಕ್ಕಿಜ್ವರ ತಜ್ಞ ಭಾರತ ಮೂಲದ ಡಾ| ಸುರೇಶ್ ಕೂಚುಪುಡಿ ಅವರು, ಎಚ್5 ಎನ್1 ಸಾಂಕ್ರಾಮಿಕಾಗಿ ಬದಲಾಗುವ ಎಲ್ಲ ಸಾಮರ್ಥ್ಯವನ್ನು ಹೊಂದಿದೆ. ಮಾನವರು ಸೇರಿದಂತೆ ಎಲ್ಲ ಪ್ರಾಣಿಗಳಿಗೂ ಅದು ವೇಗದಲ್ಲಿ ಹರಡುವ ಸೋಂಕುಕಾರಕ ಗುಣಗಳನ್ನು ಹೊಂದಿದೆ. ಹಾಗಾಗಿ ಸಂಭಾವ್ಯ ಮಾರಣಾಂತಿಕ ಈ ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.
ಸಿದ್ಧತೆ ಕೈಗೊಳ್ಳಬೇಕಾಗಿದೆ: ಮಾನವನಿಗೆ ಸೋಂಕು ತಗಲುವ ಬಗ್ಗೆ ಮಾತನಾಡುತ್ತಿಲ್ಲ. ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಸೋಂಕಿನ ಬಗ್ಗೆ ಹೇಳುತ್ತಿದ್ದೇವೆ. ಈಗಾಗಲೇ ಸಸ್ತನಿಗಳಲ್ಲಿ ಸೋಂಕು ಹರಡಿದ್ದು ಮತ್ತು ಪ್ರಸರಣವಾಗುತ್ತಿದೆ. ಹಾಗಾಗಿ ಸಿದ್ಧತೆ ಕೈಗೊಳ್ಳುವ ಸಮಯ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಫಾರ್ಮಾಸ್ಯುಟಿಕಲ್ ಉದ್ಯಮದ ಕನ್ಸಲ್ಟಂಟ್ ಮತ್ತು ಬಯೋ ನಿಯಾಗರಾ ಸ್ಥಾಪಕ ಜಾನ್ ಪಲೂrನ್ ಅವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಇದು ಕೋವಿಡ್‌ಗಿಂತಲೂ 100 ಪಟ್ಟು ಹೆಚ್ಚು ಅಪಾಯಕಾರಿ. ಒಂದು ವೇಳೆ ಅದು ರೂಪಾಂತರಗೊಂಡು, ಅದೇ ಸ್ಥಿತಿಯಲ್ಲಿ ಮುಂದುವರಿದರೆ ಹೆಚ್ಚು ಮಾರಣಾಂತಿಕವಾಗಬಹುದು ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದೇವೆ ಎಂದು ಶ್ವೇತಭವನವು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?
ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಕಾರ, 2003ರಲ್ಲಿ ಎಚ್5ಎನ್1 ಹಕ್ಕಿ ಜ್ವರ ತಗಲಿದ ಪ್ರತೀ 100 ಜನರ ಪೈಕಿ 52 ಮಂದಿ ಮೃತಪಟ್ಟಿದ್ದಾರೆ. 887ರ ಪ್ರಕರಣಗಳಲ್ಲಿ 462 ಮಂದಿ ಸಾವಿಗೀಡಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಸಕ್ತ ಕೋವಿಡ್‌ನ ಮರಣ ಪ್ರಮಾಣವು ಶೇ.0.1ರಷ್ಟಿದೆ. ಕೋವಿಡ್ ತೀವ್ರಗತಿಯಲ್ಲಿದ್ದಾಗ ಮರಣ ಪ್ರಮಾಣ ಶೇ.20ರಷ್ಟಿತ್ತು
ಏನಿದು ಹಕ್ಕಿ ಜ್ವರ?
ಎಚ್5ಎನ್1 ಹಕ್ಕಿ ಜ್ವರ ಗುಂಪಿಗೆ ಸೇರಿದ ವೈರಸ್. ಈ ಸೋಂಕು ಕೋಳಿಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಹಕ್ಕಿಗಳಲ್ಲಿ ಕಾಣಿಸಿ ಕೊಳ್ಳುವ ಈ ಸೋಂಕು, ಮಾನವರು ಸೇರಿದಂತೆ ಪ್ರಾಣಿಗಳಿಗೂ ತಗಲ ಬಹುದು. ಹಕ್ಕಿಯೇತರ ಜೀವಿಗಳಿಗೆ ಈ ಸೋಂಕು ತಗಲಿದರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಇದು ತೀರಾ ಅಷ್ಟೇನೂ ಅಪಾಯಕಾರಿಯೂ ಆಗಿರುವುದಿಲ್ಲ. ಎಚ್5ಎನ್1 ಚೀನದಲ್ಲಿ 1996ರಲ್ಲಿ ಮೊದಲಿಗೆ ಕಾಣಿಸಿಕೊಂಡಿತು. ಮಾರನೇ ವರ್ಷವೇ ಹಾಂಕಾಂಗ್‌ನಲ್ಲಿ ಮಾನವರಿಗೆ ಸೋಂಕು ತಗಲಿದ 16 ಪ್ರಕರಣಗಳು ಪತ್ತೆಯಾದವು ಮತ್ತು 6 ರೋಗಿಗಳು ಮೃತಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.