
ಸೂರ್ಯಗ್ರಹಣ ಮೋಕ್ಷ: ಬಾನಂಗಳದಲ್ಲಿ ಕಂಕಣ ಸೂರ್ಯಗ್ರಹಣದ ನೆರಳು ಬೆಳಕಿನಾಟ
ಭಾರತದಲ್ಲಿ ಅತ್ಯಪರೂಪದ ಕಂಕಣ ಸೂರ್ಯಗ್ರಹಣ ಮೊದಲು ಗೋಚರವಾಗಿದ್ದು ಕೇರಳದ ಚೆರ್ವತ್ತೂರಿನಲ್ಲಿ
Team Udayavani, Dec 26, 2019, 12:42 PM IST

ನವದೆಹಲಿ:ಅಪರೂಪದ ಕಂಕಣ ಸೂರ್ಯಗ್ರಹಣ ಗುರುವಾರ ಬೆಳಗ್ಗೆ 8ಗಂಟೆಗೆ ಆರಂಭವಾಗಿದ್ದು, 11.15ಕ್ಕೆ ಸೂರ್ಯಗ್ರಹಣ ಮುಕ್ತಾಯವಾಯಿತು. ಈ ಬಾರಿ ಅತಿ ಹೆಚ್ಚು ಸ್ಪಷ್ಟವಾಗಿ ಗ್ರಹಣ ಕರ್ನಾಟಕದ ಮಂಗಳೂರು, ಮೈಸೂರು ಹಾಗೂ ಮಡಿಕೇರಿ ಭಾಗದಲ್ಲಿ ಗೋಚರಿಸಿದ್ದು ವಿಶೇಷವಾಗಿತ್ತು.
ಸೌದಿ ಅರೇಬಿಯಾದ ರಿಯಾದ್ ನಲ್ಲಿ ಆರಂಭಿಕವಾಗಿ ಭಾಗಶಃ ಸೂರ್ಯಗ್ರಹಣ ಗೋಚರಿಸಿತ್ತು. ಭಾರತದಲ್ಲಿ ಅತ್ಯಪರೂಪದ ಕಂಕಣ ಸೂರ್ಯಗ್ರಹಣ ಮೊದಲು ಗೋಚರವಾಗಿದ್ದು ಕೇರಳದ ಚೆರ್ವತ್ತೂರಿನಲ್ಲಿ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಜನರು ಬಾನಂಗಳದಲ್ಲಿ ನಡೆದ ಕಂಕಣ ಸೂರ್ಯಗ್ರಹಣದ ಕೌತುಕವನ್ನು ಸೌರ ಕನ್ನಡಕಗಳನ್ನು ಧರಿಸಿ ಕಣ್ತುಂಬಿಕೊಂಡರು.
ವರ್ಷದ ಕಂಕಣ ಸೂರ್ಯಗ್ರಹಣ ಬೆಳಗ್ಗೆ 9.04 ನಿಮಿಷಕ್ಕೆ ಗೋಚರವಾಗಿದ್ದು, ಗರಿಷ್ಠ ಪ್ರಮಾಣದಲ್ಲಿ 10.47ರ ಸುಮಾರಿಗೆ ಗೋಚರವಾಗತೊಡಗಿತ್ತು. ಪೂರ್ಣ ಪ್ರಮಾಣದಲ್ಲಿ ಫೆಸಿಪಿಕ್ ಓಸಿಯನ್ಸ್ ನ ಗುವಾಂನಲ್ಲಿ 12.30ಕ್ಕೆ ಕೊನೆಯದಾಗಿ ಸೂರ್ಯಗ್ರಹಣ ಗೋಚರವಾಗಿ ಮುಕ್ತಾಯವಾಗಿತ್ತು.
ಕಂಕಣ ಸೂರ್ಯಗ್ರಹಣ ಪೂರ್ಣ, ಭಾಗಶಃ ಹಾಗೂ ಉಂಗುರಾಕೃತಿ ಸೇರಿದಂತೆ ಮೂರು ವಿಧದಲ್ಲಿ ಗೋಚರವಾಗಿತ್ತು. ಸೂರ್ಯಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಹೋಮ, ಹವನ ನಡೆಯಿತು. ಬಹುತೇಕ ದೇವಾಲಯಗಳು ಸೂರ್ಯಗ್ರಹಣ ಸಮಯದಲ್ಲಿ ಮುಚ್ಚಲಾಗಿದ್ದು, ಸೂರ್ಯಗ್ರಹಣ ಮೋಕ್ಷದ ಬಳಿಕ ಶುದ್ದಿಕಾರ್ಯ ನಡೆಸಿ ಪೂಜೆ, ಪುನಸ್ಕಾರ ಆರಂಭಿಸಿದ್ದವು.
ದಕ್ಷಿಣ ಕನ್ನಡ ಬಹುತೇಕ ಮಸೀದಿಗಳಲ್ಲಿ ನಮಾಜ್ ಮಾಡಲಾಯಿತು. ಮಂಗಳೂರು ಬಂದರಿನ ಜುಮ್ಮಾ ಮಸೀದಿಯಲ್ಲಿ ಖತೀಬ್ ಸ್ವದಕತುಲ್ಲಾಹ್ ಫೈಝಿ ನೇತೃತ್ವದಲ್ಲಿ ನಮಾಜ್ ನಡೆಯಿತು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ

Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ

Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.