Report! ; ದೇಶದ 11 ಜಿಲ್ಲೆಗಳಲ್ಲಿ ಬರ,ಪ್ರವಾಹ ಅಬ್ಬರ!!
ಆಲಪ್ಪುಳ ಸೇರಿ 51 ಜಿಲ್ಲೆಗಳಿಗೆ 'ಅತಿ' ಪ್ರವಾಹ!
Team Udayavani, Dec 15, 2024, 12:05 PM IST
ಹೊಸದಿಲ್ಲಿ: ಪಟ್ನಾ, ಆಲಪ್ಪುಳ ಮತ್ತು ಕೇಂದ್ರಪಾರಾ ಸೇರಿ ಬಿಹಾರ, ಒಡಿಶಾ ಮತ್ತು ಕೇರಳ ರಾಜ್ಯಗಳ ಕನಿಷ್ಠ 11 ಜಿಲ್ಲೆಗಳು “ಪ್ರವಾಹ ಮತ್ತು ಬರ’ ಎರಡಕ್ಕೂ ತೀವ್ರತರದಲ್ಲಿ ತುತ್ತಾಗುವ ಅಪಾಯ ಹೆಚ್ಚಿದೆ. ಹೀಗಾಗಿ ಈಗಲೇ ಮಧ್ಯಪ್ರವೇಶಿಸುವ ತುರ್ತು ಅಗತ್ಯವಿದೆ ಎಂದು 2 ಐಐಟಿಗಳು ಸಿದ್ಧಪಡಿಸಿದ ಹವಾಮಾನ ಅಪಾಯ ಮೌಲ್ಯಮಾಪನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗುವಾಹಾಟಿ ಮತ್ತು ಮಂಡಿ ಐಐಟಿ ಬೆಂಗಳೂರಿನ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಆ್ಯಂಡ್ ಪಾಲಿಸಿ (ಸಿಎಸ್‌ಟಿಇಪಿ) ಸಹಯೋಗ ದೊಂದಿಗೆ ಸಿದ್ಧಪಡಿಸಿದ ವರದಿಯಲ್ಲಿ ಈ ಅಂಶಗಳಿವೆ.
ವರದಿ ಪ್ರಕಾರ, 51 ಜಿಲ್ಲೆಗಳು “ಅತಿ’ ಪ್ರವಾಹ ಅಪಾಯವನ್ನು ಎದುರಿಸುತ್ತಿದ್ದರೆ, 118 ಜಿಲ್ಲೆಗಳು ಹೆಚ್ಚು ಪ್ರವಾ ಹದ ಅಪಾಯಕ್ಕೆ ಒಳಗಾಗಿವೆ. ಬಿಹಾರ, ಅಸ್ಸಾಂ, ಝಾರ್ಖಂಡ್, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ 91 ಜಿಲ್ಲೆಗಳು “ಅತೀ ಹೆಚ್ಚಿನ’ ಬರ ಅಪಾಯ ಮತ್ತು 188 ಜಿಲ್ಲೆಗಳು “ಹೆಚ್ಚಿನ’ ಬರ ಅಪಾಯವನ್ನು ಎದುರಿಸುತ್ತಿವೆ. ಪಟ್ನಾ, ಅಲಪ್ಪುಳ ಮತ್ತು ಒಡಿಶಾದ ಕೇಂದ್ರಪಾರಾ ಸೇರಿ 11 ಜಿಲ್ಲೆಗಳು ಪ್ರವಾಹ ಮತ್ತು ಬರ ಎರಡರಲ್ಲೂ “ಹೆಚ್ಚಿನ’ ಅಪಾಯವನ್ನು ಹೊಂದಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.