ಆರ್ಜೆಡಿ ಶಾಸಕನಿಗೆ ಅಪರಿಚಿತನಿಂದ 20 ಲಕ್ಷ ರೂ. ಸುಲಿಗೆ ಕರೆ
Team Udayavani, Sep 12, 2017, 4:26 PM IST
ಮೋತಿಹಾರಿ : ಅನಾಮಧೇಯ ವ್ಯಕ್ತಿಯೋರ್ವನಿಂದ ತನಗೆ 20 ಲಕ್ಷ ರೂ.ಗಳ ಸುಲಿಗೆ ಕರೆಯೊಂದು ಬಂದಿರುವುದಾಗಿ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಆರ್ಜೆಡಿ ಶಾಸಕ ಫೈಸಲ್ ರೆಹಮಾನ್ ಹೇಳಿದ್ದಾರೆ.
ಪೂರ್ವ ಚಂಪಾರಣ್ ಜಿಲ್ಲೆಯ ಧಾಕಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಫೈಸಲ್ ರೆಹಮಾನ್ ಅವರು “ಇಂದು ಮಂಗಳವಾರ ಬೆಳಗ್ಗೆ 9.56ರ ಹೊತ್ತಿಗೆ ನನಗೆ ಅನಾಮಧೇಯ ವ್ಯಕ್ತಿಯೊಬ್ಬನಿಂದ ಬೆದರಿಕೆ ಕರೆ ಬಂದಿದ್ದು ಆತ ನನ್ನಿಂದ 20 ಲಕ್ಷ ರೂ. ಕೇಳಿದ್ದಾನೆ’ ಎಂದು ಹೇಳಿದರು.
“ನನಗೆ ಕರೆ ಮಾಡಿದ ವ್ಯಕ್ತಿಯು ಮೊದಲು ನನ್ನ ಹೆಸರು ಕೇಳಿದ. ಬಳಿಕ ಒಂದು ವಾರದೊಳಗೆ ತನಗೆ 20 ಲಕ್ಷ ರೂ. ಸುಲಿಗೆ ಹಣ ಕೊಡಬೇಕು ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಅತ್ಯಂತ ಕೆಟ್ಟ ಭಾಷೆಯನ್ನು ಬಳಿಸಿ ನನಗೆ ಎಚ್ಚರಿಕೆ ಕೊಟ್ಟ’ ಎಂದು ಫೈಸಲ್ ಹೇಳಿದರು.
ಎಸ್ಪಿಗೆ ಮತ್ತು ಎಸ್ಡಿಪಿಓಗೆ ಈ ಸಂಬಂಧ ದೂರು ಕೊಟ್ಟಿದ್ದೇನೆ ಮತ್ತು ಧಾಕಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ ಎಂದು ಫೈಸಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.