Panaji: ಅನ್ಮೋದ್ ಘಾಟ್‍ನಲ್ಲಿ ಭಾರಿ ಭೂಕುಸಿತ… ವಾಹನ ಸಂಚಾರ ಸ್ಥಗಿತ
Team Udayavani, Jul 19, 2024, 5:13 PM IST
ಪಣಜಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕಾರವಾರದಂತೆಯೇ ಗೋವಾದಲ್ಲಿಯೂ ಭೂಕುಸಿತ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ದೂಧ್ ಸಾಗರ ದೇವಸ್ಥಾನದ ಸಮೀಪವಿರುವ ಅನ್ಮೋದ್ ಘಾಟ್‍ನಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತವುಂಟಾಗಿದೆ. ಇಡೀ ರಸ್ತೆಯಲ್ಲಿ ಮಣ್ಣು ಹರಡಿರುವುದರಿಂದ ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅನಮೋಡ ಘಾಟ್ ರಸ್ತೆಯು ಗೋವಾ ಮತ್ತು ಬೆಳಗಾವಿ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.
ಪಶ್ಚಿಮಘಟ್ಟದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗುತ್ತಿದೆ. ಸದ್ಯ ಅನ್ಮೋದ್ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತದಿಂದಾಗಿ ಈ ಮಾರ್ಗವನ್ನು ತಾತ್ಕಾಲಿಕವಾಗಿ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ಬಂದ್ ಆಗಿರುವುದರಿಂದ ವಾಹನಗಳ ಸಂಚಾರ ಕಡಿಮೆಯಾಗಿದೆ. ಹೀಗಾಗಿ ವಾಹನ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗಿಲ್ಲ. ಸದ್ಯ ಬೆಳಗಾವಿ ಮಾರ್ಗಕ್ಕೆ ತೆರಳುವ ಹೆಚ್ಚಿನ ವಾಹನಗಳು ಚೋರ್ಲಾ ಘಾಟ್ ಮಾರ್ಗವಾಗಿ ಸಂಚರಿಸುತ್ತಿದೆ.
ಇದನ್ನೂ ಓದಿ: Chikkamagaluru: ಮಹಾಮಳೆಗೆ ರಾಕ್ಷಸ ಸ್ವರೂಪ ಪಡೆದಿರೋ ಕಲ್ಲತ್ತಿಗರಿ ಜಲಪಾತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ
Tragedy: ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಪೌರ ಕಾರ್ಮಿಕರ ದುರಂತ ಅಂತ್ಯ
Threat: ಬಾಬಾ ಸಿದ್ದಿಕ್‌ನಂತೆ ನಿಮ್ಮನ್ನೂ ಕೊಲ್ಲುತ್ತೇನೆ… ಸಿಎಂ ಯೋಗಿಗೆ ಬೆದರಿಕೆ ಸಂದೇಶ
MUST WATCH
ಹೊಸ ಸೇರ್ಪಡೆ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.