ಹೈವೇ ರಿಪೇರಿಗೆ ರೋಬೋ
Team Udayavani, Jan 25, 2018, 8:44 AM IST
ಹೊಸದಿಲ್ಲಿ: ಸದ್ಯದಲ್ಲೇ ನೀವು ಹೈವೇ ಗಳಲ್ಲಿ ಸಂಚರಿಸುವಾಗ ರಸ್ತೆ ರಿಪೇರಿ ನಡೆ ಯುತ್ತಿದೆ.”ಬದಿಯಲ್ಲಿ ಸಂಚರಿಸಿ’ ಎಂದು ರೋಬೋಟ್ ಸೂಚಿಸಿದರೆ ಅಚ್ಚರಿಯೇನಿಲ್ಲ! ಏಕೆಂದರೆ, ಈಗಾಗಲೇ ಹೈವೇ ನಿರ್ಮಾಣ, ರಿಪೇರಿ ಗುತ್ತಿಗೆ ಪಡೆದಿರುವ ಕೆಲ ನಿರ್ಮಾಣ ಸಂಸ್ಥೆಗಳು ಈ “ಫ್ಲಾಗ್‌ಮನ್’ ಕೆಲಸ ನಿಭಾಯಿಸಲು ಯಂತ್ರಮಾನವರನ್ನು ಅಳವಡಿಸಿವೆ.
ಇದಕ್ಕಿನ್ನೂ ಕೇಂದ್ರದಿಂದ ಅನುಮತಿ ಸಿಕ್ಕಿಲ್ಲ. ಇದಕ್ಕೆ ಒಪ್ಪಿಗೆ ಸಿಕ್ಕಿದರೆ ಇನ್ನು ದೇಶದ ಹಲವಾರು ಹೈವೆಗಳಲ್ಲಿ ಯಾವುದಾದರೂ ಕಾಮಗಾರಿ ಕಣ್ಣಿಗೆ ಬೀಳುವ ಮೊದಲೇ ನಿಮಗೆ ರೋಬೋ ದರುಶನವಾಗಲಿದೆ!
ಹೇಗಿವೆ ಈ ರೋಬೋಗಳು?: ಈ ರೋಬೋಗಳನ್ನು ಪ್ಲಾಸ್ಟಿಕ್ ಹಾಗೂ ಭಾರವಿಲ್ಲದ ಲೋಹಗಳಿಂದ ತಯಾರಿಸಲಾ ಗಿರುತ್ತದೆ. ಹಗುರ ಲೋಹದ ಅಸ್ಥಿಪಂಜರ ಮೇಲೆ ಪ್ಲಾಸ್ಟಿಕ್ ಮಾದರಿಯ ಪದರದ ಮಾಂಸಖಂಡ, ಚರ್ಮ ಇರುವ ರೋಬೋಗಳಿವು. ಈ ಮಾದರಿಯ ರೋಬೋಗಳು ಸ್ಥಾನಿಕವಾಗಿದ್ದರೆ, ಮತ್ತೆ ಕೆಲವಕ್ಕೆ ಚಕ್ರಗಳನ್ನು ಅಳವಡಿಸಲಾಗಿದೆ.
ರೋಬೋಟ್ ಯಾಕೆ?: ಹೆದ್ದಾರಿಯಲ್ಲಿ ಕೆಲವೊಮ್ಮೆ ವೇಗವಾಗಿ ಬರುವ ವಾಹನಗಳು ಫ್ಲಾಗ್‌ಮನ್‌ಗಳಿಗೆ ಢಿಕ್ಕಿ ಹೊಡೆದು ಅವರನ್ನು ಗಾಯಗೊಳಿಸಿರುವ ಘಟನೆಗಳು ಸಾಕಷ್ಟು ನಡೆದಿದ್ದು, ಹೀಗಾಗಿಯೇ, ಮನುಷ್ಯರ ಬದಲಿಗೆ ರೋಬೋಗಳನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸದ್ಯಕ್ಕೆ ಈ ಮಾದರಿಯ ರೋಬೋಗಳನ್ನು ಉಪಯೋ ಗಿಸುತ್ತಿರುವ ಪ್ರಮುಖ ಕಂಪೆನಿಗಳು ಹೇಳಿವೆ ಎಂದು “ಬ್ಯುಸಿನೆಸ್ ಸ್ಟಾಂಡರ್ಡ್’ ಹೇಳಿದೆ.
ಮಾನವ ಫ್ಲಾಗ್‌ಮನ್‌ಗಳ ಬದಲಿಗೆ ಯಂತ್ರ ಮಾನವರು
ಹೆದ್ದಾರಿ ಕಾಮಗಾರಿ, ರಿಪೇರಿ ವೇಳೆ ಗುರುತರ ಸಹಾಯ
ಸಂಭಾವ್ಯ ಅಪಘಾತಗಳನ್ನು ತಪ್ಪಿಸಲು ಈ ಕ್ರಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.