MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
ಹೈಟೆಕ್ ಕೆಮರಾ ಹೊಂದಿರುವ 3 ಅಗ್ನಿಶಾಮಕ ರೋಬೋ
Team Udayavani, Nov 27, 2024, 7:00 AM IST
ಪ್ರಯಾಗ್‌ರಾಜ್: ಅಗ್ನಿ ಅವಘಡಗಳು ಸಂಭವಿಸಿದಾಗ ಅಗ್ನಿಶಾಮಕ ದಳದ ಬದಲು ರೊಬೋಟ್‌ಗಳೇ ಧಾವಿಸಿ ಬೆಂಕಿ ನಂದಿಸಿದರೆ ಹೇಗಿರುತ್ತದೆ?
ಹೌದು, ಮುಂದಿನ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳದಲ್ಲಿ ಅಗ್ನಿ ಅವಘಡ ತಡೆಗೆ ಇಂತಹ ರೊಬೋಟ್‌ಗಳನ್ನು ನಿಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಬೆಂಕಿ ನಂದಿಸಲು ರೋಬೋ ಬಳಕೆ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶ ಅಗ್ನಿಶಾಮಕ ಸೇವೆಗಳ ಹೆಚ್ಚುವರಿ ನಿರ್ದೇಶಕ ಪದ್ಮಜಾ ಚೌಹಾಣ್ ಹೇಳಿದ್ದಾರೆ.
ಉದ್ದೇಶಿತ ರೊಬೋಟ್‌ಗಳು 20ರಿಂದ 25 ಕೆ.ಜಿ. ತೂಕವನ್ನು ಹೊಂದಿವೆ. ಅವುಗಳು ಅಗ್ನಿಶಾಮಕ ಸಿಬಂದಿ ತೆರಳಲು ಸಾಧ್ಯವಾಗದ ಸೂಕ್ಷ್ಮ ಸ್ಥಳಗಳಿಗೆ ತೆರಳಿ ಬೆಂಕಿಯನ್ನು ತಹಬದಿಗೆ ತರಲು ನೆರವಾಗಲಿವೆ. ಅತ್ಯಂತ ವೇಗವಾಗಿ ಮೆಟ್ಟಿಲುಗಳನ್ನು ಏರಿ ನಿಗದಿತ ಅವಧಿಯಲ್ಲಿ ಬೆಂಕಿಯನ್ನು ನಂದಿಸುವ ಚಾಕಚಕ್ಯತೆಯನ್ನು ಈ ಆಗ್ನಿಶಾಮಕ ರೊಬೋಟ್‌ಗಳು ಹೊಂದಿವೆ. ಜತೆಗೆ ಹೈಟೆಕ್ ಕೆಮರಾ ಹೊಂದಿದ್ದು, 35 ಮೀ. ಎತ್ತರದಿಂದ ಬೆಂಕಿಯನ್ನು ನಂದಿಸುವ ಸಾಮರ್ಥ್ಯವಿದೆ ಎಂದು ಚೌಹಾಣ್ ಹೇಳಿದ್ದಾರೆ. ಇವುಗಳನ್ನು ಬೇಕಾದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಕಾರ್ಯಾಚರಣೆ ನಡೆಸಲು ಸುಲಭ ಎಂದರು.
ಇದಲ್ಲದೆ ಕುಂಭಮೇಳಕ್ಕೆಂದೇ 200 ಮಂದಿ ಅಗ್ನಿಶಾಮಕ ಕಮಾಂಡೋಗಳಿಗೆ ಎನ್‌ಡಿಆರ್‌ಎಫ್ ಮತ್ತು ಸಿಐಎಸ್‌ಎಫ್ ತರಬೇತಿಯನ್ನು ನೀಡಲಾಗಿದೆ. 67 ಕೋಟಿ ರೂ. ಅನುದಾನ ನೀಡಲಾಗಿದ್ದು, ಕಳೆದ ಕುಂಭ ಮೇಳದ ವೇಳೆ ಅಗ್ನಿ ಸುರಕ್ಷೆಗಾಗಿ ಕೇವಲ 6 ಕೋಟಿ ರೂ. ನಿಗದಿಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.