ಹಿಂದೂಗಳ ಮಾರಣಹೋಮ
Team Udayavani, May 24, 2018, 6:00 AM IST
ಮ್ಯಾನ್ಮಾರ್: ಕಳೆದ ವರ್ಷ ಮ್ಯಾನ್ಮಾರ್ನ ರಖೈನ್ನಲ್ಲಿ ನೂರಾರು ಹಿಂದೂಗಳನ್ನು ರೊಹಿಂಗ್ಯಾ ಬಂಡುಕೋರರು ಮಾರಣಹೋಮ ನಡೆಸಿರುವುದನ್ನು ಅಮ್ನೆಸ್ಟಿ ಇಂಟರ್ನ್ಯಾಷನಲ್ ಖಚಿತಪಡಿಸಿದೆ. ಈ ಹಿಂದೆಯೇ ಈ ಮಾರಣಹೋಮದ ಬಗ್ಗೆ ವರದಿಯಾಗಿತ್ತಾದರೂ, ದೃಢಪಟ್ಟಿರಲಿಲ್ಲ. 2017 ಆ.25ರಂದು ಹತ್ಯೆ ನಡೆದಿದೆ ಎಂದು ಅಮ್ನೆಸ್ಟಿ ವರದಿ ಹೇಳಿದೆ.
ಮೌಂಗ್ಡ್ ಎಂಬ ಒಂದೇ ಪ್ರದೇಶದಲ್ಲಿ 53 ಹಿಂದೂಗಳನ್ನು ಹತ್ಯೆಗೈಯಲಾಗಿದ್ದು, ಈ ಪೈಕಿ ಹೆಚ್ಚಿನವರು ಮಕ್ಕಳು ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ನ ವಿಪತ್ತು ಪ್ರತಿಕ್ರಿಯೆ ವಿಭಾಗದ ನಿರ್ದೇಶಕಿ ತಿರಾನಾ ಹಸನ್ ಹೇಳಿದ್ದಾರೆ. ಇನ್ನೊಂದೆಡೆ, ಯೆ ಬೌಕ್ ಕ್ಯಾರ್ ಎಂಬ ಹಳ್ಳಿ ಯಲ್ಲಿ 46 ಜನ ಒಂದೇ ದಿನ ನಾಪತ್ತೆಯಾಗಿದ್ದಾರೆ. ಅವರನ್ನೂ ಬಂಡುಕೋರರು ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಆಗಸ್ಟ್ನಲ್ಲಿ ದೇಶಾದ್ಯಂತ ರೊಹಿಂಗ್ಯಾ ಬಂಡುಕೋರರು ಪೊಲೀಸ್ ಠಾಣೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಇದಕ್ಕೆ ಮ್ಯಾನ್ಮಾರ್ ಸೇನೆ ತೀವ್ರ ಪ್ರತಿದಾಳಿ ನಡೆಸಿ, ಸುಮಾರು 7 ಲಕ್ಷ ರೊಹಿಂಗ್ಯಾಗಳನ್ನು ಗಡೀಪಾರು ಮಾಡಿತ್ತು.
ಹತ್ಯೆ ಮಾಡಿದ್ದು ಹೇಗೆ?: ಉತ್ತರ ರಖೈನ್ ಪ್ರಾಂತ್ಯದಲ್ಲಿ ಹಳ್ಳಿಗಳ ಜನರನ್ನು ಸುತ್ತುವರಿದು, ಕಣ್ಣಿಗೆ ಬಟ್ಟೆ ಕಟ್ಟಿ ಮೆರವಣಿಗೆ ಮಾಡಿಸಲಾಗುತ್ತಿತ್ತು. ಅನಂತರ ಅವರನ್ನು ಬಹಿರಂಗವಾಗಿ ಶಿರಚ್ಛೇದ ಮಾಡಲಾಗುತ್ತಿತ್ತು ಎಂದು ಅಮ್ನೆಸ್ಟಿ ವರದಿ ವಿವರಿಸಿದೆ. ರಖೈನ್ ಪ್ರಾಂತ್ಯವು ಹೆಚ್ಚಾಗಿ ಬೌದ್ಧರು ಮತ್ತು ಮುಸ್ಲಿಮರು ವಾಸಿಸುವ ಪ್ರದೇಶವಾಗಿದ್ದು, ಇಲ್ಲಿ ಹಿಂದೂಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.