ರೊಹಿಂಗ್ಯಾ ವಲಸಿಗರು ಭದ್ರತೆಗೆ ಮಾರಕ
Team Udayavani, Sep 15, 2017, 7:10 AM IST
ನವದೆಹಲಿ/ಯಾಂಗೂನ್: ದೇಶದಲ್ಲಿ ವಲಸಿಗರಾಗಿ ಇರುವ ರೊಹಿಂಗ್ಯಾ ಮುಸ್ಲಿಮರು ದೇಶದ ಭದ್ರತೆಗೆ ಮಾರಕ. ಉಗ್ರ ಸಂಘಟನೆ ಐಸಿಸ್ ಅವರನ್ನು ದುರ್ಬ ಳಕೆ ಮಾಡಿಕೊಂಡು ಕುಕೃತ್ಯ ನಡೆಸಲು ಪ್ರೇರಣೆ ನೀಡಬಹುದು. ಹೀಗಾಗಿ ಅವರನ್ನು ಗಡಿಪಾರು ಮಾಡುವ ಕೇಂದ್ರದ ನಿರ್ಧಾರದ ಬಗ್ಗೆ ತಡೆಯೊಡ್ಡ ಬೇಡಿ. ಹೀಗೆಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.
“ರೊಹಿಂಗ್ಯಾ ಮುಸ್ಲಿಮರು ಜಮ್ಮು, ನವದೆಹಲಿ, ಹೈದರಾಬಾದ್ ಮತ್ತು ಮೇವಾತ್ನಲ್ಲಿನ ಉಗ್ರ ಸಂಘಟನೆ ಗಳೊಂದಿಗೆ ಸಂಪರ್ಕ ಹೊಂದಿರುವುದು ಗುಪ್ತಚರ ಮಾಹಿತಿಯಿಂದ ದೃಢಪಟ್ಟಿದೆ. ಅವರನ್ನು ಭಾರತದಲ್ಲಿ ಇರಲು ಬಿಟ್ಟರೆ ಮುಂದೆ ಐಸಿಸ್ ಉಗ್ರರು ಅವರನ್ನು ನಮ್ಮ ವಿರುದ್ಧವೇ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ,’ ಎಂದು ಕೇಂದ್ರ ಸುಪ್ರೀಂ ಕೋರ್ಟ್ಗೆ ಹೇಳಿದೆ. ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ವಲಸಿಗರಿಗೆ ಭಾರತದಲ್ಲಿ ನಿಲ್ಲಲು ಅರ್ಹತೆಯೇ ಇಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡಿದೆ. ಅಕ್ರಮ ವಲಸಿಗರನ್ನು ದೇಶದಿಂದ ಹೊರದೂ ಡುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಇಬ್ಬರು ರೊಹಿಂಗ್ಯಾ ವಲಸಿಗರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆ ಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದ ಬೆನ್ನಲ್ಲೇ ಕೇಂದ್ರ ಪ್ರಮಾಣಪತ್ರ ಸಲ್ಲಿಸಿದೆ. ತನ್ನ ಈ ನಿರ್ಧಾರ “ವಲಸಿಗರ ಮೂಲಭೂತ ಹಕ್ಕುಗಳ ಉಲ್ಲಂಘನೆ ಯಾ ಗುತ್ತದೆ’ ಎಂಬ ಪ್ರಶ್ನೆ ಉದ್ಭವಿಸು ವುದಿಲ್ಲ ಎಂದು ಪ್ರತಿಪಾದಿಸಿದೆ.
ಉಗ್ರರ ನಂಟಿಲ್ಲ: ಮತ್ತೂಂದೆಡೆ, ಜಗತ್ತಿನ ಯಾವುದೇ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿಲ್ಲ ಎಂದು ರೊಹಿಂಗ್ಯಾ ಉಗ್ರರು ಹೇಳಿಕೊಂಡಿದ್ದಾರೆ. “ಮುಸ್ಲಿ ಮರು ತಮ್ಮ “ಉದ್ದೇಶ’ ಕ್ಕೆ ಬದ್ಧರಾಗಿರಬೇಕು’ ಎಂದು ಅಲ್-ಖೈದಾ ಮನವಿ ಮಾಡಿದ ಬೆನ್ನಲ್ಲೇ ರೊಹಿಂಗ್ಯಾ ವಲಸಿಗರು ಈ ಹೇಳಿಕೆ ನೀಡಿದ್ದಾರೆ. ಈ ನಡುವೆ ಮ್ಯಾನ್ಮಾರ್ನಿಂದ ತಪ್ಪಿಸಿಕೊಂಡು ಬಾಂಗ್ಲಾ ಕ್ಕೆ ಬಂದಿರುವ ರೊಹಿಂಗ್ಯಾ ವಲಸಿಗರ ಸಂಖ್ಯೆ 3.89 ಲಕ್ಷ ತಲುಪಿದೆ. ಇದೇ ವೇಳೆ ಈ ವಲಸಿಗರ ನೆರವಿಗೆ ಮುಂದಾಗಿರುವ ಕೇಂದ್ರ, ಸುಮಾರು 53 ಟನ್ನಷ್ಟು ಪರಿಹಾರ ಸಾಮಗ್ರಿ ಕಳುಹಿಸಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.