ಲಾಲು ಸೇವೆಗೆ ಬಂಟರು ಜೈಲಿಗೆ
Team Udayavani, Jan 10, 2018, 6:30 AM IST
ಪಾಟ್ನಾ: ಮೇವು ಹಗರಣದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಜೈಲು ಸೇರುವ ವಿಚಾರ ಗೊತ್ತಾಗುತ್ತಲೇ, ಅವರಿಗೂ ಮೊದಲೇ ಅವರ ಮನೆಯ ಕೆಲಸದಾಳುಗಳು ಜೈಲಲ್ಲಿ ಕಾಯುತ್ತಿದ್ದರು!
ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ? ತಮ್ಮ ಒಡೆಯ ಇರುವಲ್ಲೇ ನಾವೂ ಇರಬೇಕು ಎಂದು ತೀರ್ಮಾನಿಸಿದ್ದ ನಂಬಿಕಸ್ಥ ಆಳುಗಳು ಇದಕ್ಕಾಗಿ “ಮಾಸ್ಟರ್ ಪ್ಲಾನ್’ ಅನ್ನೇ ರೂಪಿಸಿದ್ದು ಈಗ ಬೆಳಕಿಗೆ ಬಂದಿದೆ. ಲಾಲುಗೆ ಅಡುಗೆ ಮಾಡುವ ಲಕ್ಷ್ಮಣ್ ಮತ್ತು ಸೇವಕ ಮದನ್ ಯಾದವ್ ತಮ್ಮ ವಿರುದ್ಧ ನೆರೆಮನೆ ಯಾತನಿಂದ ಪೊಲೀಸರಿಗೆ ದೂರು ಕೊಡಿಸಿ, ಜೈಲು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಲು ಜೈಲು ಸೇರುವುದು ಖಚಿತವಾಗುತ್ತಲೇ ಲಕ್ಷ್ಮಣ್ ಮತ್ತು ಮದನ್ ತಮ್ಮ ನೆರೆಮನೆಯಾತನ ಮೇಲೆ ಹಲ್ಲೆ ಮಾಡಿ, ಆತನಲ್ಲಿದ್ದ 10 ಸಾವಿರ ರೂ.ಗಳನ್ನು ದೋಚಿದ್ದಾರೆ. ಹೀಗಾಗಿ, ಸಹಜವಾಗಿಯೇ ನೆರೆಮನೆಯಾತ ಪೊಲೀಸರಿಗೆ ದೂರು ನೀಡಿದ್ದಾನೆ. ಇದಾದ ಬಳಿಕ ಆರೋಪಿಗಳು ರಾಂಚಿಯಲ್ಲಿನ ಸ್ಥಳೀಯ ಕೋರ್ಟ್ ಮುಂದೆ ಶರಣಾಗಿದ್ದಾರೆ. ನಂತರ ಅವರನ್ನು ಆರ್‌ಜೆಡಿ ನಾಯಕ ಲಾಲು ಯಾದವ್ ಇರುವ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಯಿತು ಎಂದು “ನ್ಯೂಸ್ 18′ ವರದಿ ಮಾಡಿದೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಎಸ್‌ಐ ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ.
ಆದರೆ, ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು, ಲಾಲು ಅವರ ಸೇವೆ ಮಾಡಲೆಂದೇ ಕೆಲಸದಾಳುಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದೆ. ಆದರೆ, ಇದು ಕೇವಲ ಕಾಕತಾಳೀಯ ಘಟನೆ ಎಂದು ಆರ್‌ಜೆಡಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.