NDA ಮೈತ್ರಿಕೂಟಕ್ಕೆ ನೀಡಿದ ಬೆಂಬಲ ಹಿಂಪಡೆಯಿರಿ: ನಿತೀಶ್ ಗೆ ಅಖಿಲೇಶ್ ಒತ್ತಾಯ
Team Udayavani, Oct 11, 2024, 4:39 PM IST
ಲಕ್ನೋ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಶುಕ್ರವಾರ(ಅ11) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಎನ್‌ಡಿಎ ಮೈತ್ರಿಕೂಟಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರಕಾರ ಸಮಾಜವಾದಿ ಸಿದ್ಧಾಂತವಾದಿ ಜಯಪ್ರಕಾಶ್ ನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನೂ ನಿಲ್ಲಿಸಿದೆ ಎಂದು ಕಿಡಿ ಕಾರಿದ್ದಾರೆ.
ಜೈ ಪ್ರಕಾಶ್ ನಾರಾಯಣ್ ಇಂಟರ್ನ್ಯಾಷನಲ್ ಸೆಂಟರ್ (JPNIC) ಗೆ ‘ಸಮಾಜವಾದಿಗಳು’ ಭೇಟಿ ನೀಡುವುದನ್ನು ಬಿದಿರಿನ ಬ್ಯಾರಿಕೇಡ್‌ಗಳು ತಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಖಿಲೇಶ್ ಆಕ್ರೋಶ ಹೊರ ಹಾಕಿದ್ದಾರೆ.
ಅಖಿಲೇಶ್ ಗುರುವಾರ ರಾತ್ರಿ JPNIC ಗೆ ತೆರಳಿದ್ದು, ಪ್ರವೇಶಿಸದಂತೆ ತಡೆದಿದ್ದಕ್ಕಾಗಿ ಯೋಗಿ ಆದಿತ್ಯನಾಥ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
”ಜೆಪಿ ಅವರ ಚಳವಳಿಯು ನಿತೀಶ್ ಕುಮಾರ್ ಅವರು ರಾಜಕೀಯ ಹೊರಹೊಮ್ಮುವಿಕೆಗೆ ಕಾರಣವಾಗಿದ್ದು ಅದಕ್ಕೆ ಬಿಹಾರ ಸಿಎಂ ಋಣಿಯಾಗಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಹೇಳಿದ್ದಾರೆ.
”ಬಿಜೆಪಿಯವರು ವಿನಾಶಕಾರಿಯಾಗಿದ್ದಾರೆ. ಅವರಿಗೆ ಒಳ್ಳೆಯದನ್ನು ನೀಡಿ ಮತ್ತು ಅವರು ಅದನ್ನು ನಾಶಪಡಿಸುತ್ತಾರೆ. ಹಿಂದೆಯೂ ಸಮಾಜವಾದಿಗಳಾದ ನಮ್ಮನ್ನು ತಡೆದರು. ಇದು ನವರಾತ್ರಿಯ ಒಂಬತ್ತನೇ ದಿನ, ಹಬ್ಬದ ದಿನದಂದು ಅವರು ಯಾವ ರೀತಿಯ ‘ಅಧರ್ಮ’ ಮಾಡುತ್ತಿದ್ದಾರೆ”ಎಂದು ಕಿಡಿ ಕಾರಿದ್ದಾರೆ.
ಭದ್ರತೆಯ ಕಾರಣ ನೀಡಿ ಜೆಪಿ ಇಂಟರ್‌ನ್ಯಾಶನಲ್ ಸೆಂಟರ್‌ಗೆ ಭೇಟಿ ನೀಡುವುದನ್ನು ಅಧಿಕಾರಿಗಳು ತಡೆದ ನಂತರ ನೂರಾರು ಸಮಾಜವಾದಿ ಪಕ್ಷದ ಕಾರ್ಯಕರ್ತರು ಜಮಾಯಿಸಿ ನಿವಾಸದ ಹೊರಗೆ ವಾಹನದ ಮೇಲೆ ಜಯಪ್ರಕಾಶ ನಾರಾಯಣ್ ಅವರ ಪ್ರತಿಮೆಗೆ ಅಖಿಲೇಶ್ ಹಾರ ಹಾಕಿ ಗೌರವ ಸಮರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.