ಸೋಮನಾಥ ಪ್ರವೇಶ: ಹಿಂದುಯೇತರ ರಿಜಿಸ್ಟರ್‌ಗೆ ರಾಹುಲ್ ಸಹಿ ?
Team Udayavani, Nov 29, 2017, 7:28 PM IST
ಹೊಸದಿಲ್ಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಬುಧವಾರ ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ನೀಡಿದ ಭೇಟಿ ಹೊಸ ವಿವಾದವನ್ನು ಸೃಷ್ಟಿಸಿದೆ.
ಸೋಮನಾಥ ದೇವಾಲಯವನ್ನು ಪ್ರವೇಶಿಸುವಾಗ ಸಂದರ್ಶಕರು ಸಹಿ ಮಾಡುವ ರಿಜಿಸ್ಟರ್‌ನಲ್ಲಿ ರಾಹುಲ್ ಗಾಂಧಿ ಮಾಡಿರುವ ದಾಖಲಾತಿ ಪುಟದ ಚಿತ್ರವನ್ನು ಕಾಂಗ್ರೆಸ್ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, “ಇದಕ್ಕೆ ಹೊರತಾಗಿ ಈಗ ಚಲಾವಣೆಯಲ್ಲಿರುವ ಬೇರೆ ಯಾವುದೇ ಪ್ರವೇಶ ದಾಖಲಾತಿಗಳು ಕೃತಕವಾಗಿ ಸೃಷ್ಟಿಸಲ್ಪಟ್ಟದ್ದು ‘ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಕಾಂಗ್ರೆಸ್ ಟ್ವಿಟರ್‌ನಲ್ಲಿ ಸ್ಪಷ್ಟೀಕರಣವಾಗಿ ಬರೆದಿರುವುದು ಈ ರೀತಿ ಇದೆ :
“ಸೋಮನಾಥ ದೇವಾಲಯದಲ್ಲಿ ಇರುವುದು ಕೇವಲ ಒಂದೇ ಒಂದು ಸಂದರ್ಶಕರ ಪುಸ್ತಕ. ಅದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಹಿ ಮಾಡಿದ್ದಾರೆ.ಇದಕ್ಕೆ ಹೊರತಾಗಿ ಬೇರೆ ಯಾವುದೇ ಬಗೆಯ ಇಮೇಜ್‌ಗಳು ಚಲಾವಣೆಯಲ್ಲಿದ್ದರೆ ಅದು ಕೃತಕವೆಂದು ತಿಳಿಯತಕ್ಕದ್ದು. ಹತಾಶ ಸಮಯವು ಹತಾಶ ಕ್ರಮಗಳಿಗೆ ಕಾರಣವಾಗುತ್ತವೆಯೇ ?’.
ರಾಹುಲ್ ಗಾಂಧಿ ಅವರ ಸೋಮನಾಥ ದೇವಸ್ಥಾನ ಭೇಟಿಯ ಬಗ್ಗೆ ಅವರ ಮಾಧ್ಯಮ ಸಂಚಾಲಕ ಮನೋಜ್ ತ್ಯಾಗಿ ಮಾಡಿದ್ದಾರೆ ಎನ್ನಲಾದ ರಿಜಿಸ್ಟರ್ ಎಂಟ್ರಿಯು ವಿವಾದವನ್ನು ಸೃಷ್ಟಿಸಿದೆ.
ರಾಹುಲ್ ಗಾಂಧಿ ಅವರು ಇಂದು ಬುಧವಾರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುವ ಸ,ದರ್ಭದಲ್ಲಿ ರಾಹುಲ್ ಒಳಗೆ ಹೋಗುತ್ತಿದ್ದಂತೆಯೇ ರಿಜಿಸ್ಟರ್ ಎಂಟ್ರಿ ಮಾಡಲಾಯಿತು. ಅದೇ ರೀತಿ ರಿಜಿಸ್ಟರ್‌ನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಹೆಸರನ್ನೂ ಎಂಟ್ರಿ ಮಾಡಲಾಯಿತು.
ವರದಿಗಳ ಪ್ರಕಾರ ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲಿರುವ ಈ ದೇವಾಲಯಕ್ಕೆ ಹಿಂದುಯೇತರರು ಭೇಟಿ ನೀಡುವಾಗ ರಿಜಿಸ್ಟರ್ ಎಂಟ್ರಿ ಮಾಡುವುದು ಕ್ರಮ ಎಂದು ವರದಿಗಳು ಹೇಳಿವೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್‌ಜೇವಾಲಾ ಅವರು, “ರಾಹುಲ್ ಗಾಂಧಿ ಅವರ ದೇವಳ ಭೇಟಿಯ ಬಗ್ಗೆ ಬಿಜೆಪಿಗೆ ಆದೇಕೋ ಸಮಸ್ಯೆ ಇದೆ. ದೇವರ ಹೆಸರಿನಲ್ಲಿ ಕೊಳಕು ರಾಜಕಾರಣ ಮಾಡಬಾರದೆಂದು ನಾವು ಅವರಲ್ಲಿ ವಿನಂತಿಸುತ್ತೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.