ಉಪಗ್ರಹ ಆಧರಿತ ಸುರಕ್ಷಿತ ಕ್ವಾಂಟಮ್ ಸಂವಹನದ ಪ್ರದರ್ಶನ
ಇಸ್ರೋ ಸಹಭಾಗಿತ್ವದಲ್ಲಿ ರಾಮನ್ ಸಂಶೋಧನಾ ಸಂಸ್ಥೆಯ ಸಾಧನೆ
Team Udayavani, Apr 3, 2023, 6:40 AM IST
ನವದೆಹಲಿ:ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆ(ಆರ್‌ಆರ್‌ಐ)ಯ ಸಂಶೋಧಕರು ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್(ಕ್ಯೂಕೆಡಿ) ಅನ್ನು ಬಳಸಿಕೊಂಡು ಒಂದು ಸ್ಥಿರವಾಗಿರುವ ಮೂಲ ಮತ್ತು ಚಲಿಸುತ್ತಿರುವ ರಿಸೀವರ್ ನಡುವೆ ಸುರಕ್ಷಿತ ಸಂವಹನವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಈ ಪ್ರಯೋಗವು ಭವಿಷ್ಯದಲ್ಲಿ ಭೂಮಿಯಿಂದ ಉಪಗ್ರಹಕ್ಕೆ ಸುರಕ್ಷಿತ ಕ್ವಾಂಟಮ್ ಸಂವಹನವನ್ನು ಸಾಧಿಸಲು ದಾರಿಮಾಡಿಕೊಡಲಿದೆ.
ಇದು ಉಪಗ್ರಹ ತಂತ್ರಜ್ಞಾನಗಳನ್ನು ಬಳಸಿಕೊಂಡು ಕ್ವಾಂಟಮ್ ಪ್ರಯೋಗಗಳನ್ನು ನಡೆಸುವ ಯೋಜನೆಯ ಒಂದು ಭಾಗವಾಗಿದೆ. ಇದಕ್ಕಾಗಿ ರಾಮನ್ ಸಂಶೋಧನಾ ಸಂಸ್ಥೆಯು 2017ರಿಂದಲೂ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅನುಕೂಲತೆಯೇನು?
ಆರ್‌ಆರ್‌ಐ ಕಂಡುಕೊಂಡಿರುವ ಸುರಕ್ಷಿತ ಸಂವಹನ ವಿಧಾನದಿಂದ, ದೇಶದ ರಕ್ಷಣೆ ಮತ್ತು ವ್ಯೂಹಾತ್ಮಕ ಉದ್ದೇಶಗಳಿಗಾಗಿ ಸುರಕ್ಷಿತತವಾದ ಸಂವಹನ ಮಾಧ್ಯಮವನ್ನು ವಿನ್ಯಾಸಗೊಳಿಸಿ, ಒದಗಿಸಲು ಭಾರತಕ್ಕೆ ಸಾಧ್ಯವಾಗಲಿದೆ. ಜತೆಗೆ, ಸೈಬರ್ ಭದ್ರತೆಯನ್ನು ಹೆಚ್ಚಿಸಲು, ಆನ್‌ಲೈನ್ ವಹಿವಾಟುಗಳನ್ನು ಈಗಿರುವುದಕ್ಕಿಂತಲೂ ಹೆಚ್ಚು ಸುರಕ್ಷಿತವಾಗಿ ನಡೆಸಲು ಸಾಧ್ಯವಾಗಲಿದೆ.
ಸ್ಥಿರವಾಗಿರುವಂಥ ಮೂಲಗಳು ಮತ್ತು ಚಲಿಸುತ್ತಿರುವಂಥ ರಿಸೀವರ್‌ಗಳ ನಡುವೆ ಸುರಕ್ಷಿತ ಸಂವಹನ ಮಾಧ್ಯಮವು ರಕ್ಷಣಾ ವಲಯಕ್ಕೆ ಹೆಚ್ಚಿನ ಬಲವನ್ನು ತಂದುಕೊಡಲಿದೆ. ಭಾರತೀಯ ನೌಕಾಪಡೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ತೀರದಲ್ಲಿರುವ ವ್ಯಕ್ತಿಯು ಚಲಿಸುತ್ತಿರುವ ನೌಕೆಯೊಂದಿಗೆ ಸುರಕ್ಷಿತ ಸಂವಹನ ಸಾಧಿಸುವಂಥ ಕ್ರಿಯೆ ಇದಾಗಿದೆ. ಈ ಸಂವಹನವನ್ನು ಯಾರಿಗೂ ಕದ್ದಾಲಿಸಲೂ ಸಾಧ್ಯವಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.