“ಚಮ್ಮಕ್‌ಚಲ್ಲೋ’ಗೆ 1ರೂ. ದಂಡ!
Team Udayavani, Sep 5, 2017, 8:45 AM IST
ಥಾಣೆ: ಶಾರುಖ್ ಖಾನ್‌ರ “ರಾ ಒನ್’ ಚಿತ್ರದಲ್ಲಿ ಅಮೆರಿಕನ್ ಗಾಯಕ ಏಕಾನ್ “ವನ್ನ ಬಿ ಮೈ ಚಮ್ಮಕ್ ಚಲ್ಲೋ’ ಎಂದು ಹಾಡಿರುವುದನ್ನು ನೀವು ಸಾಕಷ್ಟು ಬಾರಿ ಕೇಳಿರಬಹುದು. ರಸ್ತೆಯಲ್ಲಿ ಎದುರಿನಿಂದ ಚಂದದ ಹುಡುಗಿ ಪಾಸಾದಾಗ “ಓಯ್ ಚಮ್ಮಕ್ ಚಲ್ಲೋ’ ಎಂದು ತಮಾಷೆಗೆ ರೇಗಿಸಿಯೂ ಇರಬಹುದು. ಆದರೆ ಇನ್ಮುಂದೆ ಹಾಗೇನಾದರೂ ರೇಗಿಸಿದರೆ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ!
ಹೌದು. “ಚಮ್ಮಕ್ ಚಲ್ಲೋ’ ಎಂದು ಕರೆಯುವುದು “ಮಹಿಳೆಯರ ಘನತೆಗೆ ಮಾಡುವ ಅವಮಾನ’ ಎಂದು ಮಹಾ ರಾಷ್ಟ್ರದ ಥಾಣೆಯ ಸ್ಥಳೀಯ ನ್ಯಾಯಾಲಯವೊಂದು ಹೇಳಿದೆ. 2009ರ ಜನವರಿ 9ರಂದು ಥಾಣೆಯ ಕಿಡಿಗೇಡಿಯೊಬ್ಬ, ರಸ್ತೆಯಲ್ಲಿ ಪತಿಯೊಂದಿಗೆ ನಡೆದು ಹೋಗುತ್ತಿದ್ದ ಮಹಿಳೆಯನ್ನು “ಚಮ್ಮಕ್ ಚಲ್ಲೋ’ ಎಂದು ಕರೆದಿದ್ದ. ಮಹಿಳೆ ಆತನ ವಿರುದ್ಧ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಕೋರ್ಟ್ ಮೊರೆ ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಥಾಣೆ ನ್ಯಾಯಾಲಯ, ಬರೋಬ್ಬರಿ ಎಂಟು ವರ್ಷಗಳ ನಂತರ ತೀರ್ಪು ಪ್ರಕಟಿಸಿದೆ. ಮಹಿಳೆಯರನ್ನು “ಚಮ್ಮಕ್ ಚಲ್ಲೋ’ ಎಂದು ಕರೆದಿರುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ಹೇಳಿರುವ ನ್ಯಾಯಾಲಯ, ಹಾಗೆ ಕರೆದಿರುವಂಥ ಕಿಡಿಗೇಡಿಗೆ ಸಾದಾ ಜೈಲು ಶಿಕ್ಷೆ ಹಾಗೂ ಒಂದು ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…