ನಾಗೇಶ್ವರ ರಾವ್‌ಗೆ “ಮೂಲೆ’ ಶಿಕ್ಷೆ
Team Udayavani, Feb 13, 2019, 12:30 AM IST
ಹೊಸದಿಲ್ಲಿ: “ನ್ಯಾಯಾಂಗ ನಿಂದನೆ’ಯ ಬಲೆಯಲ್ಲಿ ಸಿಲುಕಿದ್ದ ಸಿಬಿಐಯ ಮಾಜಿ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್ ಮತ್ತು ಸಿಬಿಐ ಕಾನೂನು ಸಲಹೆಗಾರ ಎಸ್.ಬಿ. ಭಸುರಾಮ್ ಅವರಿಗೆ ಸುಪ್ರೀಂ ಕೋರ್ಟ್ ತಲಾ ಒಂದು ಲಕ್ಷ ರೂ. ದಂಡ ವಿಧಿಸಿದೆ. ಜತೆಗೆ ಮಂಗಳ ವಾರದ ನ್ಯಾಯಾಲಯದ ಕಲಾಪ ಮುಗಿ ಯುವವರೆಗೂ ವಿಚಾರಣ ಕೊಠಡಿಯ ಮೂಲೆಯಲ್ಲಿ ಕುಳಿತುಕೊಳ್ಳುವ ಶಿಕ್ಷೆ ನೀಡಿ, ಬಳಿಕ ವಾಪಸ್ ಕಳುಹಿಸಿದೆ.
ರಾವ್ ಅವರು ಇತ್ತೀಚೆಗೆ ಸಿಬಿಐ ಹಂಗಾಮಿ ಮುಖ್ಯಸ್ಥರಾಗಿದ್ದಾಗ ಬಿಹಾರದ ಬಾಲಿಕಾಶ್ರಮದ ಲೈಂಗಿಕ ಹಗರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಶರ್ಮಾ ಅವರನ್ನು ಸುಪ್ರೀಂ ಆದೇಶ ಗಣನೆಗೆ ತೆಗೆದುಕೊಳ್ಳದೆ ವರ್ಗ ಮಾಡಿ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದರು.
ಸೋಮವಾರ ನ್ಯಾಯಾಲಯಕ್ಕೆ ಅಫಿ ದವಿತ್ ಸಲ್ಲಿಸಿದ್ದ ರಾವ್, “ಶರ್ಮಾರ ವರ್ಗಾವಣೆ ಅಚಾ ತುರ್ಯ ದಿಂದ ಆಗಿದ್ದಷ್ಟೇ, ಉದ್ದೇಶ ಪೂರ್ವಕವಲ್ಲ’ ಎಂಬ ಸ್ಪಷ್ಟನೆ ನೀಡಿ, ನ್ಯಾಯಾಲಯದ ಕ್ಷಮೆ ಕೋರಿದ್ದರು. ಮಂಗಳ ವಾರದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ| ರಂಜನ್ ಗೊಗೊಯ್ ಅವರುಳ್ಳ ನ್ಯಾಯ ಪೀಠವು ಈ ಮನವಿಯನ್ನು ಮಾನ್ಯ ಮಾಡಲಿಲ್ಲ. ಈ ಸಂದರ್ಭದಲ್ಲಿ ರಾವ್-ಭಸು ರಾಮ್ ಅವರನ್ನು ಬಚಾವು ಮಾಡಲು ಅಟಾರ್ನಿ ಜನರಲ್ ವೇಣು ಗೋಪಾಲ್ ನಡೆಸಿದ ಪ್ರಯತ್ನ ಗಳೆಲ್ಲವೂ ವಿಫಲವಾದವು.
ಕೊನೆಗೆ ತಲಾ 1 ಲಕ್ಷ ರೂ.ಗಳ ದಂಡ ಮತ್ತು ಕೋರ್ಟ್ ಕೊಠಡಿಯ ಮೂಲೆಯಲ್ಲಿ ಕುಳಿತುಕೊಳ್ಳುವ ಶಿಕ್ಷೆ ವಿಧಿಸಲಾಯಿತು. ಸಂಜೆ ಕಲಾಪ ಮುಗಿದ ಬಳಿಕ ಇಬ್ಬರೂ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.