ಚುನಾವಣಾ ವೆಚ್ಚಕ್ಕಾಗಿ 1,600 ಕೋಟಿ ಪ್ರಸ್ತಾವನೆ
Team Udayavani, Feb 11, 2019, 12:30 AM IST
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ, ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಸರಬರಾಜು ಮಾಡುವ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆಗಳಿಗೆ 1,600 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ನೀಡಬೇಕಿದ್ದು, ಹಾಲಿ ಬಜೆಟ್ ಅಧಿವೇಶನದಲ್ಲೇ ಇದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಸರಕಾರ ತೀರ್ಮಾನಿಸಿದೆ.
ಹಾಗಾಗಿ, “ಹೆಚ್ಚುವರಿ ಅನುದಾನದ ಬೇಡಿಕೆ’ಯನ್ನು (ಸಪ್ಲಿಮೆಂಟರಿ ಡಿಮ್ಯಾಂಡ್ಸ್ ಫಾರ್ ಗ್ರಾಂಟ್ಸ್) ಸದ್ಯದಲ್ಲೇ ಲೋಕಸಭೆಯಲ್ಲಿ ಮಂಡಿಸಲು ತೀರ್ಮಾನಿಸಿದೆ. ಹಾಲಿ ಬಜೆಟ್ ಅಧಿವೇಶನದ ಕೊನೆಯ ದಿನವಾದ ಫೆ. 13ರಂದು ಈ ಬೇಡಿಕೆ ಮಂಡನೆಯಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.