ರೈಲು ಸೇವೆ ಅಭಿವೃದ್ಧಿಗೆ 18 ಸಾವಿರ ಕೋಟಿ ರೂ
Team Udayavani, Oct 22, 2019, 8:50 PM IST
ಹೊಸದಿಲ್ಲಿ: ರೈಲ್ವೇ ಸಚಿವಾಲಯ ಈಗಿರುವ ರೈಲು ಸೇವೆಗೆ ವೇಗ ನೀಡಲು ಸುಮಾರು 18 ಸಾವಿರ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆ ದಿಲ್ಲಿ-ಮುಂಬಯಿ ಮತ್ತು ದಿಲ್ಲಿ-ಕಲ್ಕತಾ ನಡುವಿನ ರೈಲು ಸೇವೆಯ ವೇಗವನ್ನು ಹೆಚ್ಚಿಸಲಿದೆ. ಈ ಉಭಯ ರೈಲು ಮಾರ್ಗಗಳಲ್ಲಿ ಗಂಟೆಗೆ 160 ಕಿ.ಮೀ. ವೇಗ ಕಲ್ಪಿಸಲು ಇದು ಅನುವು ಮಾಡಿಕೊಡಲಿದೆ.
ಈ ಯೋಜನೆ ಪೂರ್ಣಗೊಳ್ಳಲು 4 ವರ್ಷಗಳು ಬೇಕಾಗುವ ಸಾಧ್ಯತೆ ಇದೆ. ಈ ಯೋಜನೆಯಲ್ಲಿ ದಿಲ್ಲಿ-ಮುಂಬಯಿ ಮತ್ತು ದಿಲ್ಲಿ-ಕಲ್ಕತಾ ಮಾರ್ಗಗಳಲ್ಲಿ ಗಂಟೆಗೆ 160 ಕಿ.ಮೀ. ವೇಗದ ಜತೆಗೆ ಮುಂಬಯಿ ಅಹಮದಬಾದ್ ನಡುವೆ ಸಂಚರಿಸಲಿರುವ ಬುಲೆಟ್ ರೈಲು ಯೋಜನೆಯೂ ಇದರಲ್ಲಿ ಸೇರಿದೆ. ಬುಲೆಟ್ ರೈಲು ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಮುಂದಿನ 3 ವರ್ಷಗಳಲ್ಲಿ 68 ಸಾವಿರ ಬ್ರಾಡ್‌ಗೆàಜ್ ರೈಲು ಪಥ ವಿದ್ಯುತೀಕರಣಗೊಳ್ಳಲಿದೆ. ರೈಲುಗಳಲ್ಲಿ ಬಯೋ ಟಾಯ್ಲೆಟ್ ಸೇವೆ ವಿಸ್ತರಿಸಲಿದೆ.
ಈಗ ರೈಲುಗಳ ಗರಿಷ್ಠ ವೇಗ 99 ಕಿ.ಮೀ. ಇದ್ದು, ದಿಲ್ಲಿ-ವಾರಣಸಿ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಮಾತ್ರ ಗಂಟೆಗೆ 104 ಕಿ.ಮೀ. ವೇಗದೊಂದಿಗೆ ಚಲಿಸುತ್ತಿದೆ. 160 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಬೇಕಾದರೆ ಈಗಿರುವ ಪಥಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಇದರಲ್ಲಿ ಲೆವೆಲ್ ಕ್ರಾಸಿಂಗ್‌ಗಳು, ಸಿಗ್ನಲ್‌ಗಳು ಎಲ್ಲವೂ ಬದಲಾಗಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.