ತೆಂಗಿನ ಕಾಯಿಗೆ 50 ರೂ
Team Udayavani, Jan 29, 2018, 6:20 AM IST
ಪಣಜಿ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಒಂದು ತೆಂಗಿನಕಾಯಿ ಬೆಲೆ 30 ರೂ.ಗಳಿಂದ 40 ರೂ. ತಲುಪಿದೆ. “ತೆಂಗು ಬೆಳೆಯುವ ನಾಡು’ ಎಂಬ ಖ್ಯಾತಿ ಗಳಿಸಿರುವ ನೆರೆಯ ಗೋವಾದ ಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿ ತೆಂಗಿನಕಾಯಿ ದರವೂ ಗಗನಮುಖೀಯಾಗಿದೆ. ಗೋವಾ ಕೃಷಿ ಇಲಾಖೆಯ ಮಾಹಿತಿ ಪ್ರಕಾರ 25,700 ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇತ್ತೀಚೆಗೆ ಆ ರಾಜ್ಯದ ರೈತರೂ ತೆಂಗಿನ ಬೆಳೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ನುಸಿ ಪೀಡೆಯಂಥ ಸಮಸ್ಯೆಗಳು ರೈತರನ್ನು ಹೈರಾಣಾಗಿಸಿದೆ. ಹೀಗಾಗಿ ಮಾರುಕಟ್ಟೆಗೆ ಬರುವ ಉತ್ತಮ ದರ್ಜೆಯ ತೆಂಗಿನಕಾಯಿಗೆ ತಲಾ 40 ರೂ.ಗಳಿಂದ 50 ರೂ. ನಿಗದಿಯಾಗಿದೆ. ಹೀಗಾಗಿ ಗೋವಾ ಸರ್ಕಾರ ರಿಯಾಯಿತಿ ದರದಲ್ಲಿ ಮಾರಾಟ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ತೆಂಗು ಬೆಳೆಗಾರರ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ ಪ್ರೇಮಾನಂದ್ ಮಹಾಂಬ್ರೆ, ಹಲವಾರು ವಿಚಾರಗಳು ತೆಂಗಿನ ಬೆಳೆಯ ಮೇಲೆ ಪರಿಣಾಮ ಬೀರಿದೆ. ಎರಿಯೋಫಿಡ್ ಎಂಬ ಹುಳವು 12 ವರ್ಷಗಳಿಂದ ತೆಂಗಿನ ಬೆಳೆಗೆ ಹಾನಿಕಾರಕವಾಗಿ ಪರಿಣಮಿಸಿದೆ. ಇದರ ಜತೆಗೆ ಸರಿಯಾದ ಸಮಯಕ್ಕೆ ಕಾಯಿ ಕೊಯ್ಯಲು ಕಾರ್ಮಿಕರ ಕೊರತೆ ಬಾಧಿಸುತ್ತಿದೆ. ಇದರ ಜತೆಗೆ ಎಳನೀರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇರುವುದರಿಂದ ಬೆಳೆಗಾರರು ಅದರತ್ತ ಹೆಚ್ಚು ಆಸಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಗೋವಾದ ಕೃಷಿ ಇಲಾಖೆ ನಿರ್ದೇಶಕ ನಿಲ್ಸನ್ ಫಿಗೆರೆಡೋ ಪ್ರತಿಕ್ರಿಯೆ ನೀಡಿ, ಇತ್ತೀಚಿನ ವರ್ಷಗಳಲ್ಲಿ ಏರಿಕೆ ಪ್ರಮಾಣ ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ. ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ರೈತರು ಹೆಚ್ಚಿನ ಉತ್ಸಾಹ ತೋರುತ್ತಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.