Security Upgraded: ಭಾಗವತ್ಗೆ ಈಗ ಅಮಿತ್ ಶಾ, ರಾಹುಲ್ ಗಾಂಧಿಗೆ ಸರಿಸಮ ಭದ್ರತೆ
Team Udayavani, Aug 29, 2024, 9:08 AM IST
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಭದ್ರತೆಯನ್ನು ಈಗ ಅತ್ಯುನ್ನತ ಮಟ್ಟಕ್ಕೆ ಏರಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ್ ಸಿಂಗ್, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ನೀಡುವ ಭದ್ರತೆಯಾದ ಎಎಸ್ಎಲ್ (ಅತ್ಯುನ್ನತ ಭದ್ರತಾ ವ್ಯವಸ್ಥೆ) ಅನ್ನು ಈಗ ಭಾಗವತ್ ಅವರಿಗೂ ನೀಡಲಾಗಿದೆ ಎಂಬ ಮಾಹಿತಿ ಇತ್ತೀಚೆಗಿನ ಭದ್ರತಾ ಪರಿಶೀಲನೆಯಲ್ಲಿ ತಿಳಿದುಬಂದಿದೆ.
ಈಗಾಗಲೇ ಭಾಗವತ್ಗೆ ಝಡ್+ ಭದ್ರತೆ ನೀಡಲಾಗಿತ್ತು. ಅದನ್ನೀಗ ಇನ್ನಷ್ಟು ಹೆಚ್ಚಿಸಲಾಗಿದೆ. ಎಎಸ್ಎಲ್ನಲ್ಲಿ ಕೆಲವು ಹೆಚ್ಚುವರಿ ಬಿಗಿಕ್ರಮಗಳಿರುತ್ತವೆ. ಯಾವ ಜಾಗಕ್ಕೆ ಭದ್ರತೆಗೊಳಗಾದ ವ್ಯಕ್ತಿ ಹೋಗುತ್ತಾರೋ, ಅಲ್ಲಿಗೆ ಮೊದಲೇ ಒಂದು ತಂಡ ತೆರಳುತ್ತದೆ. ಅಲ್ಲಿನ ಭದ್ರತಾ ಪರಿಸ್ಥಿತಿಯನ್ನು ಗಮನಿಸುತ್ತದೆ. ಸ್ಥಳ ಪರಿಶೀಲನೆ, ಸ್ಥಳೀಯ ಪೊಲೀಸರೊಂದಿಗೆ ಸಹಕಾರ-ಸಂಯೋಜನೆ, ಮುಂಚಿತವಾಗಿ ವ್ಯವಸ್ಥೆ, ಅಪಾಯ ಎಷ್ಟಿದೆ ಎಂಬ ಪರಿಶೀಲನೆಗಳು ನಡೆಯುತ್ತದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿಗೂ ಎಎಸ್ಎಲ್ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ: YouTube Premium: ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆ ಶುಲ್ಕ ಹೆಚ್ಚಳ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.