ಆರ್‌ಎಸ್‌ಎಸ್‌ನಿಂದ ಗರ್ಭ ಸಂಸ್ಕಾರ ಅಭಿಯಾನ ಶುರು
Team Udayavani, Mar 7, 2023, 7:32 AM IST
ಹೊಸದಿಲ್ಲಿ: ಆರ್‌ಎಸ್‌ಎಸ್‌ನ ಸಹವರ್ತಿ ಸಂಸ್ಥೆ “ಸಂವರ್ಧಿನೀ ನ್ಯಾಸ’ ಗರ್ಭ ಸಂಸ್ಕಾರ ಅಭಿಯಾನವನ್ನು ಆರಂಭಿಸಿದೆ. ತಾಯಿ ಗರ್ಭಿಣಿಯಾಗಿರುವಾಗಲೇ ಆಕೆಗೆ ಸಂಸ್ಕಾರ ಕೊಡುವುದರ ಮೂಲಕ, ಮಗುವಿಗೂ ಸಂಸ್ಕೃತಿ ಮತ್ತು ಮೌಲ್ಯಗಳನ್ನು ನೀಡುವುದು ಉದ್ದೇಶ ಎಂದು ಸಂವರ್ಧಿನೀ ನ್ಯಾಸದ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಮಾಧುರಿ ಮರಾಠೆ ಹೇಳಿದ್ದಾರೆ.
ಈ ಅಭಿಯಾನದಲ್ಲಿ ಸ್ತ್ರೀರೋಗ ತಜ್ಞರು, ಆಯುರ್ವೇದ ವೈದ್ಯರು, ಯೋಗ ಶಿಕ್ಷಕರು ಇರಲಿದ್ದಾರೆ. ಸ್ತ್ರೀ ಗರ್ಭ ಧರಿಸಿದ ಸಮಯದಿಂದ ಒಟ್ಟು 2 ವರ್ಷಗಳವರೆಗೆ ಭಗವದ್ಗೀತೆ, ರಾಮಾಯಣವನ್ನು ಪಠಣ, ಯೋಗ ತರಬೇತಿ ನೀಡಲಾಗುತ್ತದೆ.
ಈ ಅಭಿಯಾನದ ಮೂಲಕ ಒಟ್ಟು 1000 ಮಹಿಳೆಯರನ್ನು ತಲುಪುವುದು ಸಂವರ್ಧಿನೀ ನ್ಯಾಸದ ಉದ್ದೇಶ. ಮಹಾಭಾರತದಲ್ಲಿ ಅಭಿಮನ್ಯು ಗರ್ಭದಲ್ಲಿರುವಾಗಲೇ ಚಕ್ರವ್ಯೂಹ ಭೇದಿಸುವುದನ್ನು ಶ್ರೀಕೃಷ್ಣನಿಂದಲೇ ಕಲಿತಿದ್ದ ಎಂಬ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಹೀಗೆ ಗರ್ಭದಲ್ಲಿರುವಾಗಲೇ ಮಗುವಿಗೆ ಶಿಕ್ಷಣ ನೀಡಲು ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.