ಸರಕಾರ ವಿಪಕ್ಷದ ನಡುವೆ ನಿಯಮ ಕದನ: 2ನೇ ದಿನವೂ ಸಂಸತ್ ಕಲಾಪ ವ್ಯರ್ಥ
Team Udayavani, Jul 22, 2023, 6:34 AM IST
ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರ ವಣಿಗೆ ನಡೆಸಿದ ವಿಚಾರ ಸಂಸತ್‌ನಲ್ಲಿ 2ನೇ ದಿನವೂ ಕೋಲಾಹಲಕ್ಕೆ ಕಾರಣವಾಗಿ ಕಲಾಪ ನಡೆಸಲು ಅಸಾಧ್ಯವಾಗಿದೆ. ಹೀಗಾಗಿ, ಸೋಮವಾರಕ್ಕೆ ಎರಡೂ ಸದನಗಳ ಕಲಾಪ ಮುಂದೂಡಿಕೆಯಾಗಿದೆ.
ರಾಜ್ಯಸಭೆಯಲ್ಲಿ ಶುಕ್ರವಾರ ಕಲಾಪ ನಡೆಸಲು ಸಾಧ್ಯವೇ ಆಗಲಿಲ್ಲ. ಮಹಿಳೆಯರ ಮೆರವಣಿಗೆ ವಿಚಾರದಲ್ಲಿ ವಿಪಕ್ಷಗಳು ಪದೇ ಪದೆ ಗದ್ದಲ ಎಬ್ಬಿಸಿದ್ದರಿಂದ ಸಭಾಪತಿ ಜಗದೀಪ್ ಧನ್ಕರ್ ಸೋಮವಾರಕ್ಕೆ ಮುಂದೂಡಿಕೆ ಮಾಡಿದರು. ಜತೆಗೆ ಕೆಲವೊಂದು ಪದಗಳನ್ನು ಕಡತದಿಂದ ತೆಗೆದು ಹಾಕುವ ಬಗ್ಗೆ ತೀರ್ಮಾನ ಕೈಗೊಂಡದ್ದೂ ವಿಪಕ್ಷಗಳ ಆಕ್ಷೇಪಕ್ಕೆ ಕಾರಣವಾಯಿತು.
ಈಶಾನ್ಯ ರಾಜ್ಯದಲ್ಲಿ ಉಂಟಾ ಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ರಾಜ್ಯ ಸಭೆಯ ನಿಯಮ 267 ಅಥವಾ 176ರ ಅನ್ವಯ ಚರ್ಚೆ ನಡೆ ಸಬೇಕೋ ಎಂಬ ಬಗ್ಗೆ ಕೇಂದ್ರ ಸರಕಾರ ಹಾಗೂ ವಿಪಕ್ಷಗಳ ನಡುವೆ ಜಟಾಪಟಿಯೂ ಉಂಟಾಗಿದೆ.
ರೂಲ್ 267 ಪ್ರಕಾರ, ಇತರೆ ಎಲ್ಲ ವಿಚಾರಗಳನ್ನೂ ಬದಿಗಿಟ್ಟು ಇಡೀ ದಿನ ಮಣಿಪುರದ ವಿಚಾರವನ್ನೇ ಚರ್ಚಿಸಬೇಕು ಎಂದು ವಿಪಕ್ಷಗಳ ಪಟ್ಟು ಹಿಡಿದವು. ಆದರೆ ಕೇಂದ್ರ ಸರಕಾರ ನಿಯಮ 176ರ ಅನ್ವಯ ಮಣಿಪುರದ ಕುರಿತು ಅಲ್ಪಕಾಲದ ಚರ್ಚೆ ನಡೆಯಬೇಕು ಎಂದು ಪ್ರತಿಪಾದಿಸಿತು. ಅದರ ಅನ್ವಯ ಎರಡೂವರೆ ಗಂಟೆಗಳ ಕಾಲ ಚರ್ಚೆ ಮಾಡಲು ಮಾತ್ರ ಅವಕಾಶ ಇದೆ.
ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಮೋದ್ ತಿವಾರಿ, ರಂಜಿತ್ ರಂಜನ್, ಕರ್ನಾಟಕದ ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್, ಸಹಿತ 12 ಮಂದಿ ಸಂಸದರು ನಿಯಮ 267ರ ಅನ್ವಯ ನೋಟಿಸ್ ನೀಡಿ ಮಣಿಪುರ ವಿಚಾರದ ಬಗ್ಗೆ ಚರ್ಚೆ ನಡೆಸಬೇಕು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ದ್ದಾರೆ. ಆದರೆ ಇದಕ್ಕೆ ಸರಕಾರಒಪ್ಪದ ಕಾರಣ ಗದ್ದಲ ಏರ್ಪಟ್ಟಿತು.
ಲೋಕಸಭೆಯಲ್ಲಿ: ಲೋಕಸಭೆ ಯಲ್ಲೂ ಮಣಿಪುರ ಹಿಂಸಾಚಾರ ಘಟನೆ ಖಂಡಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿವೆ.
ರಾಜಸ್ಥಾನದ ಸಚಿವರ ವಜಾ
ರಾಜ್ಯದಲ್ಲಿನ ಮಹಿಳೆಯರ ಸ್ಥಿತಿಗತಿ ಕುರಿತು ಬೆಳಕು ಚೆಲ್ಲಿದ ರಾಜಸ್ಥಾನದ ಸಚಿವರೊಬ್ಬರು ವಜಾ ಶಿಕ್ಷೆ ಅನುಭವಿಸಿದ್ದಾರೆ. ಶುಕ್ರವಾರ ರಾಜಸ್ಥಾನ ಅಸೆಂಬ್ಲಿಯಲ್ಲಿ ಮಾತನಾಡುವ ವೇಳೆ ಸಚಿವ ರಾಜೇಂದ್ರ ಗುಧಾ ಅವರು, “ಮಣಿಪುರದ ಪರಿಸ್ಥಿತಿ ಕುರಿತು ಚರ್ಚಿಸುವ ಬದಲು ನಮ್ಮ ರಾಜ್ಯದಲ್ಲಿ ನಾವು ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ವಿಫಲ ರಾಗಿದ್ದೇವೆ. ರಾಜಸ್ಥಾನದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಜಾಸ್ತಿಯಾಗಿದೆ’ ಎಂದಿದ್ದಾರೆ. ಇದರಿಂದ ಕ್ರುದ್ಧರಾದ ಸಿಎಂ ಅಶೋಕ್ ಗೆಹೊÉàಟ್, ಕೂಡಲೇ ರಾಜೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.