ಜಾತಿ-ಧರ್ಮ ನಮೂದು ವದಂತಿಗಳನ್ನು ಹರಡಬೇಡಿ ಎಂದ ಹಣಕಾಸು ಸಚಿವಾಲಯ
ಬ್ಯಾಂಕ್ ಖಾತೆ ತೆರೆಯಲು ಜಾತಿ/ಧರ್ಮದ ಹೆಸರು ನಮೂದಿಸಬೇಕಾಗಿಲ್ಲ
Team Udayavani, Dec 22, 2019, 6:28 PM IST
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ದೇಶದೆಲ್ಲೆಡೆ ಹಲವಾರು ವದಂತಿಗಳು ಹರಡುತ್ತಿವೆ. ಪ್ರತಿಯೊಂದಕ್ಕೂ ಜಾತಿ/ಧರ್ಮ ನಮೂದಿಸಬೇಕಾದ ಅಗತ್ಯವಿದೆ ಎಂಬ ಊಹಾಪೋಹ ಕೇಳಿಬರುತ್ತಿದ್ದು, ಕಾಯ್ದೆ ಕುರಿತು ಜನರಲ್ಲಿರುವ ಗೊಂದಲಗಳನ್ನು ಸರಿಪಡಿಸಲು ಕೇಂದ್ರ ಸರಕಾರ ಮುಂದಾಗಿದೆ.
ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಅಥವಾ ಈಗಿರುವ ಖಾತೆಗೆ ಹೆಚ್ಚುವರಿ ಮಾಹಿತಿ ನೀಡಬೇಕೆನಿಸಿದರೆ ಜಾತಿ/ಧರ್ಮದ ಹೆಸರು ನಮೂದಿಸಬೇಕಾಗುತ್ತದೆ ಎಂದು ವದಂತಿ ಹರಡಿರುವ ಬೆನ್ನಲ್ಲೇ ಕೇಂದ್ರ ಸರಕಾರ ಈ ನಿಯಮವನ್ನು ಜಾರಿಯಲ್ಲಿ ಇಲ್ಲ ಎಂದು ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯದ ಕಾರ್ಯದರ್ಶಿ ರಾಜೀವ್ ಕುಮಾರ್, ಇಂಥ ಯಾವುದೇ ವದಂತಿಗಳನ್ನು ಸಾರ್ವಜನಿಕರು ನಂಬಬಾರದು. ಬ್ಯಾಂಕ್‌ಗಳು ಇದುವರೆಗೂ ಯಾವುದೇ ರೀತಿಯ ಸೂಚನೆಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಕೆವೈಸಿ (ಗ್ರಾಹಕರ ಮಾಹಿತಿ) ತುಂಬಬೇಕಾದರೆ ಈ ರೀತಿಯ ಮಾಹಿತಿ ನೀಡುವ ಅಗತ್ಯವೇ ಇಲ್ಲ. ವದಂತಿಗಳನ್ನು ಹರಡಬೇಡಿ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.