ಸಬ್‌ಮರಿನ್ ಜಂಟಿ ನಿರ್ಮಾಣ
Team Udayavani, Jul 7, 2018, 6:00 AM IST
ನವದೆಹಲಿ: ಅತ್ಯಾಧುನಿಕ ಸಬ್‌ಮರಿನ್ ವಿನ್ಯಾಸ ಹಾಗೂ ನಿರ್ಮಾಣವನ್ನು ಜಂಟಿಯಾಗಿ ನಡೆಸುವ ಪ್ರಸ್ತಾಪವನ್ನು ಭಾರತಕ್ಕೆ ರಷ್ಯಾ ಸಲ್ಲಿಸಿದೆ. ಜಲಾಂತರ್ಗಾಮಿ ನಿರ್ಮಾ ಣದ ನಂತರ ಸಂಪೂರ್ಣ ತಂತ್ರಜ್ಞಾನ ವನ್ನು ಭಾರತಕ್ಕೆ ವರ್ಗಾಯಿಸ ಲಾಗುತ್ತದೆ. ಅಷ್ಟೇ ಅಲ್ಲ, ಇದು ಭಾರತೀಯ ನೌಕಾ ಪಡೆ ಖರೀದಿಸಲು ನಿರ್ಧರಿಸಿದ್ದ ವೆಚ್ಚಕ್ಕಿಂತ ಅತ್ಯಂತ ಕಡಿಮೆ ಮೊತ್ತದಲ್ಲಿ ಲಭ್ಯವಾಗಲಿದೆ. 68 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆರು ಡೀಸೆಲ್ ಎಲೆಕ್ಟ್ರಿಕ್ ಸಬ್‌ಮರಿನ್ ಅನ್ನು ಖರೀದಿಸಲು ನೌಕಾಪಡೆ ನಿರ್ಧರಿಸಿತ್ತು. ಆದರೆ ರಷ್ಯಾ ಪ್ರಸ್ತಾಪ ಮಾಡಿದ ಈ ಯೋಜನೆಯ ಅಡಿಯಲ್ಲಿ ಕೇವಲ 1360 ಕೋಟಿ ರೂ. ವೆಚ್ಚದಲ್ಲಿ ತಂತ್ರಜ್ಞಾನ ಭಾರತಕ್ಕೆ ಸಿಗಲಿದೆ.
ಕಳೆದ ಮೇ ತಿಂಗಳಲ್ಲಿ ಸೋಚಿಯಲ್ಲಿ ಉಭಯ ದೇಶಗಳು ನಡೆಸಿದ ಚರ್ಚೆಯ ವೇಳೆ ಈ ಪ್ರಸ್ತಾಪ ಮಾಡಲಾಗಿದ್ದು, ಈಗ ಇದಕ್ಕೆ ಅಂತಿಮ ರೂಪ ಲಭ್ಯವಾಗಿದೆ. ಈ ಯೋಜನೆ ಅಡಿಯಲ್ಲಿ ತಂತ್ರಜ್ಞಾನವು ಭಾರತಕ್ಕೆ ಲಭ್ಯವಾಗಲಿದ್ದು, ಎಷ್ಟು ಬೇಕಾದರೂ ಸಬ್‌ಮರಿನ್‌ಗಳನ್ನು ಭಾರತ ನಿರ್ಮಿಸಬಹುದಾಗಿದೆ. ಈ ಯೋಜನೆ ಜಾರಿಗೆ ಬಂದಲ್ಲಿ, ರಷ್ಯಾ ಸಹಭಾಗಿತ್ವದಲ್ಲಿ ಭಾರತದಲ್ಲಿ ನಿರ್ಮಿಸಲಾದ ಅಣ್ವಸ್ತ್ರ ಸಜ್ಜಿತ ಐಎನ್‌ಎಸ್ ಅರಿಹಂತ್‌ಗೂ ಮಹತ್ವದ ನೆರವು ಸಿಕ್ಕಂತಾಗಲಿದೆ.
ಸಬ್‌ಮರಿನ್‌ಗಳನ್ನು ಭಾರತದ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗುತ್ತದೆ. ಬ್ರಹ್ಮೋಸ್ ಅಣ್ವಸ್ತ್ರ ಕ್ಷಿಪಣಿಗಳನ್ನೂ ಅಳವಡಿಸಬಹುದಾದ ರೀತಿಯಲ್ಲಿ ವಿನ್ಯಾಸ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.