ಶಬರಿಮಲೆ: ಮಹಿಳಾ ಭಕ್ತರಿಗೆ ಹೆಲಿಕಾಪ್ಟರ್ ಸೇವೆ!
Team Udayavani, Nov 11, 2018, 6:00 AM IST
ತಿರುವನಂತಪುರ: ಶಬರಿ ಮಲೆ ದೇಗುಲಕ್ಕೆ ಎಲ್ಲ ವಯೋ ಮಿತಿಯ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ಕೇರಳ ಪೊಲೀಸ್ ಇಲಾಖೆ ಮಿಲಿಟರಿ ಹೆಲಿ ಕಾಪ್ಟರ್‌ಗಳ ಬಳಕೆಗೆ ನಿರ್ಧರಿಸಿದೆ ಎಂದು ಹೇಳಲಾಗಿದೆ.
ತಿರುವನಂತಪುರ ಅಥವಾ ಕೊಚ್ಚಿಯಿಂದ ಹೆಲಿಕಾಪ್ಟರ್ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಹಿಂದೂ’ ಪತ್ರಿಕೆ ವರದಿ ಮಾಡಿದೆ. ನ.17ರಿಂದ 41 ದಿನಗಳ ಕಾಲ ಮಂಡಲ ಪೂಜೆ ಮತ್ತು ಮಕರವಿಳಕ್ಕು ಸಂದರ್ಭಕ್ಕೆ ದೇಗುಲ ತೆರೆಯಲಿರುವಂತೆಯೇ ಹೆಲಿಕಾಪ್ಟರ್ ಬಳಕೆಯ ಸಾಧ್ಯತೆ ಬಗ್ಗೆ ಕೇರಳ ಪೊಲೀಸ್ ಇಲಾಖೆ ವರಿಷ್ಠರು ಚಿಂತನೆ ನಡೆಸುತ್ತಿದ್ದಾರೆ. ಕೇರಳ ಅರಣ್ಯ ಇಲಾಖೆ ಅನು ಮೋದನೆ ನೀಡಬೇಕಾಗಿದ್ದು, ಅದಕ್ಕಾಗಿ ಕಾಯಲಾಗುತ್ತಿದೆ ಎನ್ನ ಲಾಗಿದೆ. 1980ರ ದಶಕದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕಾಪ್ಟರ್ ಮೂಲಕ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಕಾರಣಾಂತರ ಗಳಿಂದ ಇದು ಸಾಧ್ಯವಾಗಿರಲಿಲ್ಲ.
ಗುರುತು ಚೀಟಿ ಕಡ್ಡಾಯ
ಮತ್ತೂಂದು ಮಹತ್ವದ ಬೆಳ ವಣಿಗೆಯಲ್ಲಿ ಕೇರಳ ಪೊಲೀಸ್ ಇಲಾಖೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಿದೆ. ದೇಗುಲಕ್ಕೆ ಭೇಟಿ ನೀಡುವ ಪ್ರತಿ ಯೊಂದು ಖಾಸಗಿ ವಾಹನವನ್ನು ಆಮೂಲಾಗ್ರವಾಗಿ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಭಕ್ತರು ಗುರುತಿನ ಚೀಟಿ ಹೊಂದುವುದನ್ನು ಕಡ್ಡಾಯ ಮಾಡಲಾಗಿದೆ.
ಪೊಲೀಸ್ ಪಾಸ್ ಬೇಕು
ನೀಲಕ್ಕಲ್‌ನಲ್ಲಿ ನಿಲುಗಡೆ ಬಯಸುವ ವಾಹನಗಳು ಪೊಲೀಸರು ನೀಡುವ ಪಾಸ್‌ಗಳನ್ನು ಕಡ್ಡಾಯ ವಾಗಿ ಹೊಂದಿರಬೇಕು. ಆದರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಯಾತ್ರಾರ್ಥಿ ಗಳಿಗೆ ಹೇಗೆ ಪಾಸ್ ನೀಡಲಾಗುತ್ತದೆ ಎಂಬ ಬಗ್ಗೆ ಸದ್ಯಕ್ಕೆ ಆದೇಶ ದಲ್ಲಿ ಸ್ಪಷ್ಟತೆ ಹೊಂದಿಲ್ಲ.
48 ಗಂಟೆಗಳು ಮಾತ್ರ
ನೀಲಕ್ಕಲ್‌ನಲ್ಲಿ ಕಾಯ್ದಿರಿಸದ ಟಿಕೆಟ್ ನೀಡುವ ಕೇಂದ್ರವನ್ನು ಶೀಘ್ರ ಸ್ಥಾಪಿಸಲಾಗುತ್ತದೆ. ಪ್ರತಿ ಯಾತ್ರಾರ್ಥಿ 48 ಗಂಟೆ ಒಳಗಾಗಿ ನೀಲಕ್ಕಲ್ -ಪಂಪಾ- ನೀಲಕ್ಕಲ್ ಮೂಲಕವೇ ದೇಗುಲಕ್ಕೆ ಹೋಗಿ ಬರಬೇಕು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.