Sabarimala: ಮೂರು ಅನ್ನದಾನ ಮಂಟಪ ಆರಂಭ
Team Udayavani, Dec 5, 2024, 6:55 AM IST
ಶಬರಿಮಲೆ: ಶಬರಿಮಲೆಗೆ ಹರಿದು ಬರುತ್ತಿರುವ ಭಕ್ತರಿಗೆ ಉಚಿತ ಅನ್ನದಾನಕ್ಕಾಗಿ ಮೂರು ಅನ್ನದಾನ ಮಂಟಪಗಳನ್ನು ಆರಂಭಿಸಲಾಗಿದೆ. ಭಕ್ತರಿಗೆ ತಿರು ವಿದಾಂಕೂರು ಮುಜರಾಯಿ ಮಂಡಳಿ ಅನ್ನದಾನ ನೀಡುತ್ತಿದೆ.
ಅನ್ನದಾನದಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡಿ.1ರ ತನಕದ ಲೆಕ್ಕಾಚಾರದಂತೆ ಮಂಡಲ ಕಾಲದ ತೀರ್ಥಾಟನೆ ಆರಂಭಗೊಂಡ ಬಳಿಕ 3.52 ಲಕ್ಷ ಭಕ್ತರು ಅನ್ನದಾನ ಸ್ವೀಕರಿಸಿದ್ದಾರೆ.
ಸನ್ನಿಧಾನ, ಪಂಪಾ ಮತ್ತು ನೀಲಕ್ಕಲ್‌ನಲ್ಲಿ ಅನ್ನದಾನ ಮಂಟಪ ಏರ್ಪಡಿಸಲಾಗಿದೆ. ಈ ಪೈಕಿ ಸನ್ನಿಧಾನದಲ್ಲಿ ಡಿ.1ರ ತನಕ 2.60 ಲಕ್ಷ, ಪಂಪಾದಲ್ಲಿ 62 ಸಾವಿರ ಹಾಗೂ ನೀಲಕ್ಕಲ್‌ನಲ್ಲಿ 30 ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಅನ್ನದಾನ ಮಂಟಪದಲ್ಲಿ ಪ್ರತಿದಿನ ಮೂರು ಹೊತ್ತು ಆಹಾರ ನೀಡಲಾಗುತ್ತದೆ.
ಬೆಳಗ್ಗೆ 6.30ರಿಂದ 11ರ ವರೆಗೆ ಸಜ್ಜಿಗೆ, ಕಡಲೆ ಪದಾರ್ಥ ಹಾಗೂ ಶುಂಠಿ ಕಾಫಿ ನೀಡಲಾಗುತ್ತಿದೆ. 11.45ರ ಬಳಿಕ ಊಟ ಆರಂಭಗೊಂಡು ಸಂಜೆ 4 ಗಂಟೆಯ ವರೆಗೆ ನೀಡಲಾಗುತ್ತಿದೆ. ಸಂಜೆ 6.30ರಿಂದ ಮಧ್ಯರಾತ್ರಿ ತನಕ ಗಂಜಿಯೂಟ ವಿತರಿಸಲಾಗುತ್ತಿದೆ. ಪಂಪಾದಲ್ಲಿ 130 ಮಂದಿ,ಸನ್ನಿಧಾನದಲ್ಲಿ 1,000 ಮಂದಿ ಮತ್ತು ನೀಲಕ್ಕಲ್‌ನಲ್ಲಿ 100 ಮಂದಿ ಒಂದೇ ಬಾರಿ ಕುಳಿತು ಆಹಾರ ಸೇವಿಸಲು ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Car Crash: ಕಾರು ರೇಸ್ ತರಬೇತಿ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ!
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.