ನವಜೋತ್‌ರನ್ನು ಕಿತ್ತು ಬಿಸಾಕಿ : ಪಂಜಾಬ್ ಅಸೆಂಬ್ಲಿಯಲ್ಲಿ ಕೋಲಾಹಲ
Team Udayavani, Feb 18, 2019, 10:07 AM IST
ಹೊಸದಿಲ್ಲಿ : ಪುಲ್ವಾಮಾ ಜಿಲ್ಲೆಯ ಆವಂತಿಪೋರಾ ದಲ್ಲಿ ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆ ನಡೆಸಿದ್ದ ಉಗ್ರ ದಾಳಿಗೆ ಸಂಬಂಧಿಸಿ ಪಾಕ್ ಪರ ಪ್ರತಿಕ್ರಿಯೆ ನೀಡಿ ವ್ಯಾಪಕ ವಿವಾದ, ಟೀಕೆ, ಖಂಡನೆಗೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ, ಸಚಿವ ನವಜೋತ್ ಸಿಂಗ್ ಸಿಧು ಅವರನ್ನು ಹುದ್ದೆಯಿಂದ ಮಾತ್ರವಲ್ಲದೆ ಪಕ್ಷದಿಂದಲೇ ಕಿತ್ತು ಹಾಕಬೇಕೆಂಬ ಆಗ್ರಹ ಇಂದು ಪಂಜಾಬ್ ವಿಧಾನಸಭೆಯಲ್ಲಿ ಬಲವಾಗಿ ಕೇಳಿ ಬಂತು.
ಆರಂಭದಲ್ಲಿ ತನ್ನ ವಿರುದ್ಧದ ಆರೋಪಗಳಿಗೆ ಕಲ್ಲು ಮುಖದ ಮೌನ ಪ್ರದರ್ಶಿಸಿದ ಸಿಧು, ಅನಂತರ ಸಿಟ್ಟಿನಿಂದಲೇ ಪ್ರತ್ಯುತ್ತರ ನೀಡಲು ಮುಂದಾದಾಗ ಅವರ ವಿರುದ್ಧದ ಪ್ರತಿಭಟನೆ, ಘೋಷಣೆಗಳು ಮುಗಿಲು ಮುಟ್ಟಿದವು.
ಸಿಧು ಅವರು ಪುಲ್ವಾಮಾ ದಾಳಿ ಬಳಿಕ ಪ್ರತಿಕ್ರಿಯೆ ನೀಡುತ್ತಾ, “ಒಬ್ಬ ಉಗ್ರ ನಡೆಸಿದ ದುಷ್ಕೃತ್ಯಕ್ಕೆ ಇಡಿಯ ಒಂದು ದೇಶವನ್ನೇ ಹೊಣೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದರು. ಇದಕ್ಕೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ, ಟೀಕೆ, ಪ್ರತಿರೋಧ ವ್ಯಕ್ತವಾಗಿತ್ತು.
ಭಾರತದ ಮೇಲೆ ದಾಳಿ ನಡೆಸುವ ಉಗ್ರರಿಗೆ ಪಾಕಿಸ್ಥಾನ ರಕ್ಷಣೆ ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ಭಾರತ ಆರೋಪಿಸುತ್ತಿದ್ದಂತೆಯೇ ಸಿಧು, ‘ಭಯೋತ್ಪಾದಕರ ಕೃತ್ಯಗಳಿಗೆ ಪಾಕಿಸ್ಥಾನವನ್ನು ದೂರಬಾರದು’ ಎಂದು ಹೇಳಿದ್ದರು.
ಪುಲ್ವಾಮಾ ಹೇಳಿಕೆಯನ್ನು ಅನುಸರಿಸಿ ಸಿಧು ಅವರನ್ನು ಮೊತ್ತ ಮೊದಲಾಗಿ ಕಪಿಲ್ ಶರ್ಮಾ ಅವರು ತಮ್ಮ ಜನಪ್ರಿಯ ಕಪಿಲ್ ಕಾಮಿಡಿ ಶೋ ದಿಂದ ಕಿತ್ತು ಹಾಕಿದ್ದರು.
ಕರ್ತಾರ್‌ಪುರ ಕಾರಿಡಾರ್ ಯೋಜನೆಗೆ ಪಾಕ್ ಕಡೆಯಿಂದ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಹೋಗಿದ್ದಾಗಲೂ ಸಿಧು ಪಾಕ್ ನಲ್ಲಿ ತಾವೆಷ್ಟು ಜನಪ್ರಿಯ ವ್ಯಕ್ತಿ ಎಂಬುದನ್ನು ಬಿಂಬಿಸಿಕೊಂಡಿದ್ದರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು, “ಸಿಧು ಪಾಕಿಸ್ಥಾನದಲ್ಲಿ ಚುನಾವಣೆಗೆ ನಿಂತರೂ ಗೆಲ್ಲುತ್ತಾರೆ’ ಎಂದು ಪ್ರಧಾನಿ ಮೋದಿಗೆ ಟಾಂಗ್ ನೀಡುವ ರೀತಿಯಲ್ಲಿ ಹೇಳಿದ್ದರು.
ಇದಕ್ಕೂ ಮೊದಲು ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಖಾಸಗಿ ಆಹ್ವಾನ ಪಡೆದಿದ್ದ ಸಿಧು, ಆ ಕಾರ್ಯಕ್ರಮದಲ್ಲಿ ಪಾಕ್ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಅವರನ್ನು ತಬ್ಬಿಕೊಂಡು ವಿವಾದ ಸೃಷ್ಟಿಸಿದ್ದರು.
ಪಂಜಾಬ್ ಅಸೆಂಬ್ಲಿಯಲ್ಲಿ ಇಂದು ಬಿಜೆಪಿ ಮತ್ತು ಅಕಾಲಿ ದಳ ಶಾಸಕರು, ಸಚಿವ ಸಿಧು ಕುಳಿತಿರುವಲ್ಲಿಗೆ ತೆರಳಿ ಅವರನ್ನು ಸಚಿವ ಪದದಿಂದ ಕಿತ್ತು ಹಾಕುವಂತೆ ಘೋಷಣೆ ಕೂಗಿದರು.
ಪ್ರಕಾಶ್ ಸಿಂಗ್ ಬಾದಲ್ ಅವರು “ಸಿಧು ಅವರನ್ನು ಕಾಂಗ್ರೆಸ್ ಪಕ್ಷದಿಂದಲೇ ಕಿತ್ತು ಹಾಕಬೇಕು; ಪುಲ್ವಾಮಾ ವಿಷಯದಲ್ಲಿ ರಾಷ್ಟ್ರ ವಿರೋಧಿ ಹೇಳಿಕೆ ನೀಡಿರುವ ಅವರ ವಿರುದ್ಧ ಕೇಸು ದಾಖಲಾಗಬೇಕು’ ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
MUST WATCH
ಹೊಸ ಸೇರ್ಪಡೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.