ವ್ಯಾಪಾರಸ್ಥರಿಗೆ “ಭದ್ರತಾ ವಲಯ’ ಸೃಷ್ಟಿ
Team Udayavani, Oct 19, 2019, 5:39 AM IST
ಶ್ರೀನಗರ: ಪಂಜಾಬ್‌ನ ಇಬ್ಬರು ಹಣ್ಣು ವ್ಯಾಪಾರಿಗಳು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರಿಂದ ಹತ್ಯೆ ಗೀಡಾದ ಬೆನ್ನಲ್ಲೇ ಜಿಲ್ಲೆಯಲ್ಲಿ “ಭದ್ರತಾ ವಲಯ’ ಸೃಷ್ಟಿಸಲಾಗಿದೆ. ಒಟ್ಟು 8ರಿಂದ 9 ವಲಯಗಳನ್ನು ಸೃಷ್ಟಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಕೇಂದ್ರಗಳಿಗೆ ಬಂದು ಜಮ್ಮು ಮತ್ತು ಕಾಶ್ಮೀರ ಮತ್ತು ರಾಜ್ಯದ ಹೊರ ಭಾಗಗಳ ಹಣ್ಣುಗಳ ವ್ಯಾಪಾರಸ್ಥರು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಪೊಲೀಸ್, ಸಿಆರ್‌ಪಿಎಫ್ ಮತ್ತು ಅರೆ ಸೇನಾಪಡೆಗಳಿಂದ ಕೂಡಿದ ವಲಯದಲ್ಲಿ ಮತ್ತು ಪ್ರಧಾನ ರಸ್ತೆಯ ಭಾಗದಲ್ಲಿಯೇ ಈ ವಲಯಗಳು ಇರಲಿವೆ ಎಂದು ಹಿರಿಯ ಅಧಿ ಕಾರಿ ತಿಳಿಸಿದ್ದಾರೆ. ಉಗ್ರರು ನಡೆಸಿದ ದಾಳಿ ಯಿಂದ ಹಣ್ಣಿನ ವರ್ತಕರಲ್ಲಿ ಭೀತಿ ಉಂಟಾ ಗಿದ್ದು ಸಹಜ. ಉಗ್ರರ ದಾಳಿ ಭೀತಿಯಿಂದ ಪಿರ್ ಕಿ ಗಲಿಯಲ್ಲಿ 600 ಮಂದಿ ಟ್ರಕ್‌ಗಳಲ್ಲಿ ಹಣ್ಣುಗಳ ವ್ಯಾಪಾರಸ್ಥರು ಮತ್ತು ಮಾಲೀಕರು ರಕ್ಷಣೆಗಾಗಿ ಕಾಯುತ್ತಿದ್ದಾರೆ.
ಮಾಜಿ ಪೊಲೀಸ್ ಕೃತ್ಯ
ಇತ್ತೀಚೆಗೆ ಕಾಶ್ಮೀರದಲ್ಲಿ ಇಬ್ಬರು ನಾಗರಿಕರನ್ನು ಹತ್ಯೆಗೈದ ಕುಕೃತ್ಯ ಎಸಗಿದ್ದು ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರರು ಎಂದು ತಿಳಿದುಬಂದಿದೆ. 2017 ರಲ್ಲಿ ಎಸ್‌ಪಿಒ ಸೈಯದ್ ನವೀದ್ ಮುಷ್ತಾಕ್ ಸೇವೆ ತ್ಯಜಿಸಿ ಉಗ್ರ ಸಂಘಟನೆ ಸೇರಿದ್ದ. ಈತ ಈಗ ಹಿಜ್ಬುಲ್‌ನ ಜಿಲ್ಲಾ ಕಮಾಂಡರ್ ಆಗಿದ್ದಾನೆ. ಈತ ರಾಹಿಲ್ ಮಗ್ರಯ್ ಜೊತೆ ಸೇರಿ ಇಬ್ಬರು ಹೊರ ರಾಜ್ಯದ ಸೇಬು ವರ್ತಕರನ್ನು ಹತ್ಯೆಗೈದಿದ್ದ. ಅಲ್ಲದೆ, ಒಂದು ಸೇಬು ಟ್ರಕ್‌ಗೂ ಬೆಂಕಿ ಹಚ್ಚಿದ್ದ. ಈತನ ಚಿತ್ರಗಳಿರುವ ಪೋಸ್ಟರ್ ಅನ್ನು ಶೋಪಿಯಾನ್ ಜಿಲ್ಲೆಯಲ್ಲಿ ಪೊಲೀಸರು ಅಂಟಿಸಿದ್ದು, ಈತನ ಬಗ್ಗೆ ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.