ಉದ್ಘಾಟಿಸಿದ ನೈಟ್ ಕ್ಲಬ್ ವಿರುದ್ಧವೇ ತಿರುಗಿ ಬಿದ್ದ ಮಹಾರಾಜ್!
Team Udayavani, Apr 17, 2018, 9:57 AM IST
ಲಕ್ನೋ: ನೈಟ್ ಕ್ಲಬ್ ಉದ್ಘಾಟಿಸಿ ವಿವಾದಕ್ಕೆ ಸಿಲುಕಿದ್ದ ಬಿಜೆಪಿ ಉರಿ ನಾಲಗೆಯ ಸಂಸದ ಸಾಕ್ಷಿ ಮಹಾರಾಜ್ ಅವರು ಇದೀಗ ತಾನು ಉದ್ಘಾಟಿಸಿದ ನೈಟ್ ಕ್ಲಬ್ ವಿರುದ್ಧವೇ ತಿರುಗಿ ಬಿದ್ದಿದ್ದು ತನ್ನನ್ನು ಸುಳ್ಳು ಹೇಳಿ ಕಾರ್ಯಕ್ರಮಕ್ಕೆ ಕರೆಯಲಾಗಿತ್ತು ಎಂದು ಹೊಸ ಕತೆ ಕಟ್ಟಿದ್ದಾರೆ.
ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಹಾರಾಜ್ ‘ನನಗೆ ನೈಟ್ ಕ್ಲಬ್ ಬಗ್ಗೆ ತಿಳಿದಿರಲಿಲ್ಲ. ರೆಸ್ಟೋರೆಂಟ್ ಉದ್ಘಾಟನೆಗೆಂದು ಕರೆದು ಮೋಸ ಮಾಡಲಾಗಿದೆ. ನನ್ನ ಕ್ಷೇತ್ರದ ವಕೀಲರಾದ ರಜ್ಜನ್ ಸಿಂಗ್ ಚೌಹಾನ್ ಅವರು ಕರೆದಿದ್ದರು. ನನಗೆ ಮಾಧ್ಯಮದಲ್ಲಿ ವಿಚಾರ ನೋಡಿಯೇ ನೈಟ್ ಕ್ಲಬ್ ವಿಚಾರ ತಿಳಿಯಿತು. ನಾನು ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿತ್ತು. ಅವಸರವಸರದಲ್ಲಿ 2-3 ನಿಮಿಷಗಳ ಒಳಗೆ ರಿಬ್ಬನ್ ಕತ್ತರಿಸಿ ನಾನು ತೆರಳಿದೆ’ಎಂದು ಸ್ಪಷ್ಟನೆ ನೀಡಿದ್ದಾರೆ.
‘ನಾನು ರೆಸ್ಟೋರೆಂಟ್ ಪರವಾನಿಗೆ ಬಗ್ಗೆ ಕೇಳಿದಾಗ ನೀಡಿರಲಿಲ್ಲ. ಅದು ಸಂಪೂರ್ಣವಾಗಿ ಆಕ್ರಮವಾಗಿ ನಡೆಯುತ್ತಿದೆ ಎಂದು ನನಗೆ ಗೊತ್ತಾಗಿದೆ. ಈ ಕುರಿತು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಭಾನುವಾರ ಆಲಿಗಂಜ್ ಪ್ರದೇಶದಲ್ಲಿನ ಸಂಕೀರ್ಣವೊಂದರಲ್ಲಿ “ಲಟಸ್ ಮೀಟ್’ ಎನ್ನುವ ಹೆಸರಿನ ನೈಟ್ ಕ್ಲಬ್ ಉದ್ಘಾಟನೆ ಮಾಡಿದ್ದರು. ಈ ವಿಚಾರ ಸಾಮಾಜಿಕ ತಾಣಗಳು, ಮಾಧ್ಯಮಗಳಲ್ಲಿ ಪ್ರಸಾರವಾಗಿ ಬಿಜೆಪಿಗೆ ಮುಜುಗರಕ್ಕೀಡು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Delhi: ಕೇಜ್ರಿವಾಲ್ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
MUST WATCH
ಹೊಸ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.