ರಿಯಾದ್‌ನಿಂದಲೇ ಬಂದ ಸಲ್ಮಾನ್
Team Udayavani, Feb 20, 2019, 12:30 AM IST
ಇಸ್ಲಾಮಾಬಾದ್‌ನಿಂದಲೇ ಸೌದಿ ಅರೇಬಿಯಾ ಭಾವೀ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಭಾರತ ಪ್ರವಾಸ ಆರಂಭ ಮಾಡುವುದು ಬೇಡ ಎಂದು ಭಾರತ ಆಕ್ಷೇಪಿಸಿದ್ದರಿಂದ ಅವರು, ಪಾಕ್‌ನಿಂದ ರಿಯಾದ್‌ಗೆ ತೆರಳಿ, ಅಲ್ಲಿಂದ ಹೊಸದಿಲ್ಲಿಗೆ ಆಗಮಿಸಿದ್ದಾರೆ. ಭಾನುವಾರ ಪಾಕಿಸ್ಥಾನಕ್ಕೆ ಆಗಮಿಸಿ ಸೋಮವಾರ ಅವರು ಸ್ವದೇಶಕ್ಕೆ ಮರಳಿದ್ದರು. ಪುಲ್ವಾಮಾ ಘಟನೆಗೆ ಪಾಕಿಸ್ಥಾನದ ಜೈಶ್-ಎ-ಮೊಹಮ್ಮದ್ ಹೊಣೆ ಹೊತ್ತಿದ್ದರಿಂದ ದೊರೆ ಪಾಕ್‌ನಿಂದ ನೇರ ಬರುವುದು ಬೇಡ ಎಂದು ಕೇಂದ್ರ ಸರಕಾರ ತಿಳಿಸಿತ್ತು. ಬುಧವಾರ ಹೊಸದಿಲ್ಲಿಯಲ್ಲಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯೋಧರ ಸಾವಿನ ಪ್ರಕರಣ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಇದರ ಜತೆಗೆ 2 ದೇಶಗಳ ನಡುವೆ ರಕ್ಷಣಾ ಕ್ಷೇತ್ರದಲ್ಲಿನ ಬಾಂಧವ್ಯ ವೃದ್ಧಿ, ನೌಕಾಪಡೆಯ ಜಂಟಿ ಸಮರಾಭ್ಯಾಸ, ತೈಲ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.