ಸುಶಾಂತ್ಗೆ ಒತ್ತಾಯಪಡಿಸಿ ಡ್ರಗ್ಸ್ ನೀಡಲಾಗುತ್ತಿತ್ತು: ಸುಶಾಂತ್ ಸ್ನೇಹಿತ
ರಿಯಾ ಮತ್ತು ಆಕೆಯ ಬಳಗವು ಭಾರೀ ಪ್ರಮಾಣದಲ್ಲಿ ಡ್ರಗ್ ಅನ್ನು ಸುಶಾಂತ್ಗೆ ನೀಡುತ್ತಿತ್ತು.
Team Udayavani, Sep 8, 2020, 1:35 AM IST
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಹೊಸ ಬೆಳವಣಿಗೆಯೆಂಬಂತೆ, ರಿಯಾ ಮತ್ತು ಆಕೆಯ ಆತ್ಮೀಯ ಬಳಗವು ಸುಶಾಂತ್ಗೆ ಒತ್ತಾಯಪೂರ್ವಕವಾಗಿ ಡ್ರಗ್ ನೀಡುತ್ತಿದ್ದರು ಎಂದು ಸುಶಾಂತ್ರ ಸ್ನೇಹಿತರೊಬ್ಬರು ಸೋಮವಾರ ಹೇಳಿದ್ದಾರೆ.
ಸುಶಾಂತ್ರ ಹಣಕಾಸು ವ್ಯವಹಾರದಿಂದ ಹಿಡಿದು ಎಲ್ಲವನ್ನೂ ರಿಯಾ ನಿಯಂತ್ರಿಸುತ್ತಿದ್ದರು. ಸುಶಾಂತ್ ಡ್ರಗ್ ಸೇವಿಸುತ್ತಿರಲಿಲ್ಲ. ಅಲ್ಲದೆ, ಇತರರಿಗೂ ಅದನ್ನು
ಸೇವಿಸದಂತೆ ಸಲಹೆ ನೀಡುತ್ತಿದ್ದರು. ಆದರೆ, ರಿಯಾ ಮತ್ತು ಆಕೆಯ ಬಳಗವು ಭಾರೀ ಪ್ರಮಾಣದಲ್ಲಿ ಡ್ರಗ್ ಅನ್ನು ಸುಶಾಂತ್ಗೆ ನೀಡುತ್ತಿತ್ತು. ಅವರ ಮನೆಯಲ್ಲಿ ಸಾಕಷ್ಟು ಔಷಧಗಳು ಇದ್ದಿದ್ದನ್ನೂ ನಾನು ನೋಡಿದ್ದೇನೆ. ನಾನು ಈ ಕುರಿತ ಮಾಹಿತಿಯನ್ನು ಸಿಬಿಐಗೆ ನೀಡಿದ್ದೇನೆ ಎಂದೂ ಅವರು ಹೇಳಿರುವುದಾಗಿ ಟೈಮ್ಸ್
ನೌ ವರದಿ ಮಾಡಿದೆ.
ಇದೇ ವೇಳೆ, ಸತತ 2ನೇ ದಿನವೂ ರಿಯಾ ಎನ್ಸಿಬಿ ಮುಂದೆ ಹಾಜರಾಗಿದ್ದು, ಸೋಮವಾರವೂ ಸತತ ತನಿಖೆ ಎದುರಿಸಿದ್ದಾರೆ. ಅವರು ತನಿಖೆಯಲ್ಲಿ ಸೂಕ್ತ ಸಹಕಾರ ನೀಡುತ್ತಿದ್ದಾರೆ ಎಂದು ಎನ್ಸಿಬಿ ಹೇಳಿದೆ.
ಭಾನುವಾರವಷ್ಟೇ ಸತತ 6 ಗಂಟೆಗಳ ಕಾಲ ಅವರು ತನಿಖೆ ಎದುರಿಸಿದ್ದರು. ಸುಶಾಂತ್ ಸೋದರಿ ವಿರುದ್ಧ ಕೇಸ್: ಸುಶಾಂತ್ ಆತ್ಮಹತ್ಯೆಗೆ
ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ರಿಯಾ ಸೋಮವಾರ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಸುಶಾಂತ್ಗೆ ಔಷಧ ನೀಡುವಾಗ “ನಕಲು ಮಾಡಿದಂತಹವೈದ್ಯರ ಚೀಟಿ’ಯನ್ನು ಸಿದ್ಧಪಡಿಸಲಾಗಿತ್ತು ಎಂದು ರಿಯಾ ಆರೋಪಿಸಿದ್ದಾರೆ.
ಈ ನಡುವೆ, ಸುಶಾಂತ್ಗೆ ವಿಷವುಣಿಸಲಾಗಿತ್ತೇ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಏಮ್ಸ್ ವೈದ್ಯರ ತಂಡ ಪರೀಕ್ಷೆ ಆರಂಭಿಸಿದೆ. ಮುಂದಿನ 10 ದಿನಗಳಲ್ಲಿ ಈ ಕುರಿತು ವರದಿ ನೀಡಲಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.