ರಾವತ್ ಪತ್ನಿಗೂ ಸಮನ್ಸ್
Team Udayavani, Aug 4, 2022, 10:54 PM IST
ಮುಂಬಯಿ: ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧ ಬಂಧಿತರಾಗಿರುವ ಶಿವಸೇನೆ ಸಂಸದ ಸಂಜಯ್ ರಾವತ್ ಅವರ ಇ.ಡಿ. ಕಸ್ಟಡಿ ಅವಧಿಯನ್ನು ವಿಶೇಷ ಕೋರ್ಟ್ ಗುರುವಾರ ಆ.8ರವರೆಗೂ ವಿಸ್ತರಿಸಿ ಆದೇಶ ನೀಡಿದೆ.
ಇನ್ನೊಂದೆಡೆ, ರಾವತ್ ಪತ್ನಿ ವರ್ಷಾ ರಾವತ್ ಅವರಿಗೂ ಇ.ಡಿ. ಸಮನ್ಸ್ ಜಾರಿ ಮಾಡಿದೆ. ಸದ್ಯದಲ್ಲೇ ಅವರೂ ವಿಚಾರಣೆಗೆ ಹಾಜರಾಗಲಿದ್ದು, ಪತಿ ರಾವತ್ ಹಾಗೂ ಇತರೆ ಆರೋಪಿಗಳ ಮುಖಾಮುಖೀ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಗುರುವಾರ ಕೋರ್ಟ್ಗೆ ಹಾಜರಾದ ಸಂಜಯ್ ರಾವತ್ ಅವರು, “ನನ್ನನ್ನು ಕೇಂದ್ರ ತನಿಖಾ ಸಂಸ್ಥೆಯು ಒಂದೇ ಒಂದು ಕಿಟಕಿಯೂ ಇಲ್ಲದ, ಗಾಳಿ-ಬೆಳಕು ಆಡದ ಕೊಠಡಿಯಲ್ಲಿಟ್ಟಿದೆ’ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ತನಿಖಾ ಸಂಸ್ಥೆಯಿಂದ ವಿವರಣೆ ಕೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.