“ಚಿಟ್” ಮೋಸ ನಡೆಯದು

ಮಹತ್ವದ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ

Team Udayavani, Jul 30, 2019, 5:42 AM IST

a-29

ನವದೆಹಲಿ: ಶಾರದಾ ಚಿಟ್ ಫ‌ಂಡ್‌ ಮತ್ತು ಇತರ ಗುರುತರ ಹಗರಣಗಳ ಬಳಿಕ ಜನರು ಹೂಡಿಕೆ ಮಾಡಿದ್ದನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಕಾನೂನಿಗೆ ಸಂಸತ್‌ನ ಸಮ್ಮತಿ ಸೋಮವಾರ ಸಿಕ್ಕಿದೆ. ಕಾನೂನಿನ ನಿಯಂತ್ರಣ ಮೀರಿ ವಹಿವಾಟು ನಡೆಸುವ ಸಂಸ್ಥೆಗಳ ಹಣಕಾಸು ಚಟುವಟಿಕೆಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಸಿದ್ಧಗೊಂಡಿರುವ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ವಿಧೇಯಕ 2019ಕ್ಕೆ ರಾಜ್ಯಸಭೆ ಧ್ವನಿಮತದಿಂದ ಅಂಗೀಕಾರ ನೀಡಿದೆ. ಜು.24ರಂದು ಲೋಕಸಭೆಯಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿತ್ತು.

ರಾಜ್ಯಸಭೆಯಲ್ಲಿ ವಿಧೇಯಕ ಮೇಲಿನ ಚರ್ಚೆಗೆ ಉತ್ತರ ವಾಗಿ ಮಾತನಾಡಿದ ವಿತ್ತ ಖಾತೆ ಸಹಾಯಕ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌, ಸದಸ್ಯರೆಲ್ಲರೂ ವಿಧೇಯಕಕ್ಕೆ ಬೆಂಬಲ ನೀಡಿ ‘ಆಶೀರ್ವದಿಸಬೇಕು’ ಎಂದು ಮನವಿ ಮಾಡಿದ್ದರು.

ವಿಧೇಯಕದಲ್ಲಿನ ಅಂಶಗಳ ಬಗ್ಗೆ ಮಾತನಾಡಿದ ಸಚಿವ ಸಿಂಗ್‌, ಠೇವಣಿ ಪಡೆದು ವಂಚಿಸಿದರೆ ಸೆಕ್ಷನ್‌ 3ರ ಅನ್ವಯ 1 ರಿಂದ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಅಂಶ ರಾಜ್ಯ ಸರ್ಕಾರಗಳಿಗೆ ಜನರ ಠೇವಣಿ ರಕ್ಷಿಸುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲು ಅಧಿಕಾರ ನೀಡುತ್ತದೆ ಎಂದಿದ್ದಾರೆ. ಇದೇ ಮೊದಲ ಬಾರಿಗೆ ಠೇವಣಿ ಸಂಗ್ರಹಿಸಿದ ಕಂಪನಿಗಳ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಠೇವಣಿ ಪಡೆದುಕೊಂಡು ವಂಚಿಸಿದರೆ ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಜತೆಗೆ ಸಂಬಂಧಿತ ಪ್ರಾಧಿಕಾರ ಆಸ್ತಿ ಮುಟ್ಟುಗೋಲು ವಿಚಾರಕ್ಕೆ ಸಂಬಂಧಿಸಿದಂತೆ ಅದೇ ರಾಜ್ಯದಲ್ಲಿನ ಕೋರ್ಟ್‌ಗೇ ಮನವಿ ಮಾಡಿಕೊಳ್ಳಬೇಕಾಗುತ್ತದೆ.

ನಿಗದಿತ ಅವಧಿ: ಠೇವಣಿ ವಂಚನೆ ಪ್ರಕರಣ ಸಂಬಂಧ ನಿಗದಿತ ಕೋರ್ಟ್‌ಗಳು, ದೂರು ಸ್ವೀಕರಿಸಿದ 180 ದಿನಗಳ ಒಳಗಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಸಂಸದ ಅಮರ್‌ ಸಿಂಗ್‌ ಮಾತನಾಡಿ, ಜನಪ್ರಿಯ ಸಿನಿಮಾ ತಾರೆಯರು ಮತ್ತು ಇತರ ಗಣ್ಯರು ಹೆಚ್ಚಿನ ಶುಲ್ಕ ಪಡೆದು ಕೆಲ ಠೇವಣಿ ಯೋಜನೆಗಳಿಗೆ ರಾಯಭಾರಿಗಳಾಗಿದ್ದಾರೆ ಎಂದರು. ಅದಕ್ಕೆ ಉತ್ತರಿಸಿದ ಸಚಿವ ಸಿಂಗ್‌ ಸರ್ಕಾರ ಅಂತರ್‌ ಸಚಿವಾಲಯದ ಸಮಿತಿ ರಚಿಸಿದ್ದು, ಠೇವಣಿ ಸ್ವೀಕಾರಕ್ಕೆ ಸಂಬಂಧಿಸಿದ ಹಾಲಿ ಇರುವ ನಿಯಮಗಳಲ್ಲಿ ಕೈಗೊಳ್ಳಬೇಕಾದ ಆಡಳಿತಾತ್ಮಕ, ಕಾನೂನಾತ್ಮಕ ಬದಲಾವಣೆಗೆ ಸೂಚಿಸಲಾಗಿದೆ ಎಂದರು.

ವಿಧೇಯಕ ಅಂಗೀಕಾರ: ಭಾರತೀಯ ವೈದ್ಯಕೀಯ ಮಂಡಳಿ ಸ್ಥಾನದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವ ವಿಧೇಯಕವನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ವೈದ್ಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ ಪ್ರತ್ಯೇಕ ನೀಟ್ ಬದಲು, ಅಂತಿಮ ವರ್ಷದ ಎಂಬಿಬಿಎಸ್‌ ಪ್ರವೇಶ ಪರೀಕ್ಷೆಯನ್ನೇ ಪರಿಗಣಿಸುವ ಮಹತ್ವದ ಕ್ರಮಕ್ಕೂ ಅವಕಾಶ ಮಾಡಿಕೊಡಲಾಗಿದೆ. ಎಕ್ಸಿಟ್ ಪರೀಕ್ಷೆ ಮತ್ತು ವಿಧೇಯಕದಲ್ಲಿನ ಇತರ ವಿಚಾರಗಳಿಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

293 ಅಣೆಕಟ್ಟುಗಳಿಗೆ ಸೆಂಚುರಿ: ದೇಶದಲ್ಲಿರುವ ಸರಿ ಸುಮಾರು 293 ಅಣೆಕಟ್ಟುಗಳು 100 ವರ್ಷಕ್ಕಿಂತ ಹಳೆಯವು ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಅಣೆಕಟ್ಟು ಸುರಕ್ಷತಾ ವಿಧೇಯಕ ಮಂಡಿಸಿ ಅವರು ಮಾತನಾಡಿದರು. ವಿಧೇಯಕದಲ್ಲಿ ಪ್ರಸ್ತಾಪ ಮಾಡಿದಂತೆ ರಾಷ್ಟ್ರೀಯ ಅಣೆಕಟ್ಟು ಸುರಕ್ಷಾ ಪ್ರಾಧಿಕಾರ ರಚಿಸಿ ಅವುಗಳ ರಕ್ಷಣೆ, ನಿರ್ವಹಣೆ ಮಾಡಲಾಗುತ್ತದೆ. ಜತೆಗೆ ರಾಜ್ಯಗಳ ನಡುವಿನ ಬಿಕ್ಕಟ್ಟು ಪರಿಹಾರದ ಹೊಣೆಯೂ ಅದಕ್ಕೆ ಸಿಗಲಿದೆ.

ಕ್ಷಮೆ ಕೇಳಿದ ಅಜಂ ಖಾನ್‌

ಬಿಜೆಪಿ ಸಂಸದೆ, ಡೆಪ್ಯುಟಿ ಸ್ಪೀಕರ್‌ ರಮಾ ದೇವಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್‌ ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ಸೋಮವಾರ ಲೋಕಸಭೆ ಕಲಾಪ ಶುರುವಾಗುತ್ತಲೇ, ಸ್ಪೀಕರ್‌ ಓಂ ಬಿರ್ಲಾ ಅವರು ಖಾನ್‌ಗೆ ಕ್ಷಮೆ ಕೋರುವಂತೆ ಸೂಚಿಸಿದರು. ಈ ವೇಳೆ ಖಾನ್‌, ‘ಒಂಬತ್ತು ಬಾರಿ ಶಾಸಕ, ನಾಲ್ಕು ಬಾರಿ ಸಚಿವ, ಒಂದು ಬಾರಿ ರಾಜ್ಯಸಭೆ ಸದಸ್ಯನಾಗಿದ್ದ ತಮಗೆ ಸಂಸದೀಯ ನಡಾವಳಿ ಗೊತ್ತಿದೆ. ಇದರ ಹೊರತಾಗಿಯೂ ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ, ಕ್ಷಮೆ ಕೋರುತ್ತೇನೆ’ ಎಂದರು. ಖಾನ್‌ ಹೇಳಿಕೆಯ ಕೆಲವು ಶಬ್ದಗಳು ಕೇಳದೇ ಇದ್ದುದರಿಂದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಕ್ಷಮೆ ಕೇಳುವ ವಾಕ್ಯಗಳನ್ನು ಮತ್ತೂಮ್ಮೆ ಪುನರಾವರ್ತಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಸದನದಲ್ಲಿ 2 ಬಾರಿ ಸ್ಪೀಕರ್‌ ಆ ಮಾತುಗಳನ್ನು ಪುನರಾವರ್ತಿಸುವಂತೆ ಹೇಳಿದರು.

ಕಣ್ಣೀರು ಹಾಕಿದ ನಾಯ್ಡು

ಕೇಂದ್ರದ ಮಾಜಿ ಸಚಿವ ಎಸ್‌.ಜೈಪಾಲ್ ರೆಡ್ಡಿ ಅವರಿಗೆ ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಕಣ್ಣೀರು ಹಾಕಿದ ಘಟನೆ ನಡೆದಿದೆ. 1990ರ ಏಪ್ರಿಲ್ನಿಂದ 1996ರ ಏಪ್ರಿಲ್ ಮತ್ತು 1997ರ ಸೆಪ್ಟೆಂಬರ್‌ನಿಂದ 1998ರ ಮಾರ್ಚ್‌ ನಲ್ಲಿ ರೆಡ್ಡಿ ಅವರು ಅವಿಭಜಿತ ಆಂಧ್ರಪ್ರದೇಶದಿಂದ ರಾಜ್ಯಸಭೆ ಸದಸ್ಯರಾಗಿದ್ದರು. ರೆಡ್ಡಿ ನಿಧನರಾಗಿರುವ ಬಗ್ಗೆ ಸಂತಾಪ ಸೂಚಕ ನಿರ್ಣಯ ಓದುತ್ತಿರುವಾಗಲೇ, ಸಭಾಪತಿ ವೆಂಕಯ್ಯ ನಾಯ್ಡುಗೆ ದುಃಖ ಉಕ್ಕಿ ಬಂತು. ‘ಎಸ್‌.ಜೈಪಾಲ್ ರೆಡ್ಡಿ ನಿಧನದಿಂದ ದೇಶ ಅಪ್ರತಿಮ ಸಂಸದೀಯಪಟುವನ್ನು ಕಳೆದುಕೊಂಡಿದೆ. ಅವರು ಉತ್ತಮ ವಾಗ್ಮಿ ಮತ್ತು ಆಡಳಿತಗಾರ’ ಎಂದು ಕೊಂಡಾಡಿದರು.

ಟಾಪ್ ನ್ಯೂಸ್

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

ನ.23ರ ಬಳಿಕ ಝಾರ್ಖಂಡಲ್ಲಿ ಸೊರೇನ್‌ ಸರಕಾರಕ್ಕೆ ವಿದಾಯ: ಅಮಿತ್‌ ಶಾ

Amit Shah: ನ.23ರ ಬಳಿಕ ಝಾರ್ಖಂಡಲ್ಲಿ ಸೊರೇನ್‌ ಸರಕಾರಕ್ಕೆ ವಿದಾಯ

ಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶ

Flight: ಪ್ರಯಾಣಿಕನಿಂದಲೇ ಬಾಂಬ್‌ ಬೆದರಿಕೆ: ವಿಮಾನ ಭೂಸ್ಪರ್ಶ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.