ಅಯೋಧ್ಯೆಯಲ್ಲಿ CM ಯೋಗಿ ಅದಿತ್ಯನಾಥ್ ಬೃಹತ್ ದೀಪೋತ್ಸವ
Team Udayavani, Oct 18, 2017, 6:50 PM IST
ಅಯೋಧ್ಯೆ : ಬೆಳಕಿನ ಹಬ್ಬ ದೀಪಾವಳಿಯ ಅತೀ ದೊಡ್ಡ ಅಚರಣೆಯ ರೂಪದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಸರಯೂ ನದೀ ತಟದಲ್ಲಿ ಬೃಹತ್ ದೀಪೋತ್ಸವವನ್ನು ಆಚರಿಸಿದರು.
ದೀಪಾವಳಿಯ ಮುನ್ನಾ ದಿನ ಎರಡು ಸಾವಿರಕ್ಕೂ ಅಧಿಕ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಎರಡು ಲಕ್ಷ ದೀಪಗಳನ್ನು ಉರಿಸಿರುವುದನ್ನು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸೇರ್ಪಡೆಗೊಳಿಸಲು ಅಯೋಧ್ಯಾ ನಗರಿ ಈಗ ಕಾತರದಿಂದ ಕಾಯುತ್ತಿದೆ.
ಇಂದು ಬೃಹತ್ ದೀಪೋತ್ಸವಕ್ಕೆ ಚಾಲನೆ ನೀಡಲು ಯೋಗಿ ಆದಿತ್ಯನಾಥ್ ಅವರು ನಿಗದಿತ ವೇಳೆಗೆ ಒಂದು ತಾಸು ಮುನ್ನವೇ ಅಯೋಧ್ಯಾ ನಗರಿಗೆ ಆಗಮಿಸಿದರು. ವಿಶ್ವ ದಾಖಲೆಯಾಗಿ ದೀಪೋತ್ಸವವನ್ನು ಅಚರಿಸುವ ಸಂಭ್ರಮೋಲ್ಲಾಸ ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಆಗಸವನ್ನು ಮುಟ್ಟುವಂತಿತ್ತು.
ಆಯೋಧ್ಯೆಯು ಮಾನವತೆಯ ಪುಣ್ಯಭೂಮಿಯಾಗಿದೆ. ರಾಮ ರಾಜ್ಯ ಪೌರಾಣಿಕ ಪರಿಕಲ್ಪನೆಯ ಮೂಲಕ ಮಾನವತೆ ಎಂದರೇನು ಎಂಬುದನ್ನು ನಾವು ಇಡಿಯ ಜಗತ್ತಿಗೆ ಕಲಿಸಿದವರಾಗಿದ್ದೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಭಗವಾನ್ ಶ್ರೀರಾಮನನ್ನು ವಿರೋಧಿಸುವವರು ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವ ನಮ್ಮ ಯತ್ನಗಳನ್ನು ತಡೆಯಲಾರರು ಎಂದು ಯೋಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.