ಕ್ಲೈಮ್ಯಾಕ್ಸ್.. ಕೊನೆಗೂ “ಚಿನ್ನಮ್ಮ” ಜೈಲುಪಾಲು
Team Udayavani, Feb 14, 2017, 11:48 AM IST
ಸುಮಾರು 21 ವರ್ಷಗಳ ಕಾಲ ವಿಚಾರಣೆ ನಡೆದಿದ್ದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಜಯಲಲಿತಾ, ವಿಕೆ ಶಶಿಕಲಾ ಸೇರಿದಂತೆ ನಾಲ್ವರನ್ನು ದೋಷಮುಕ್ತಗೊಳಿಸಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಮಂಗಳವಾರ ರದ್ದುಗೊಳಿಸಿ, ಬೆಂಗಳೂರು ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಪ್ರಕರಣದಲ್ಲಿ ಶಶಿಕಲಾ, ಸುಧಾಕರನ್ ಹಾಗೂ ಇಳವರಸಿ ದೋಷಿ ಎಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಶಶಿಕಲಾ ನಟರಾಜನ್ ಗೆ 4 ವರ್ಷ(ಇದರಲ್ಲಿ ಜಾಮೀನು ಪಡೆಯುವ ಮುನ್ನ ಶಶಿಕಲಾ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರಿಂದ ಇನ್ನುಳಿದ 3.4ವರ್ಷ ಶಿಕ್ಷೆ ಅನುಭವಿಸಬೇಕಾಗಿದೆ) ಜೈಲುಶಿಕ್ಷೆ, 10 ಕೋಟಿ ರೂಪಾಯಿ ದಂಡ ವಿಧಿಸಿದೆ. ಇದರಿಂದ ತಮಿಳುನಾಡಿನ ರಾಜ್ಯ ರಾಜಕಾರಣದಲ್ಲಿ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಡುವೆ ನಡೆಯುತ್ತಿದ್ದ ಹೈಡ್ರಾಮಾಕ್ಕೆ ತೆರೆಬಿದ್ದಂತಾಗಿದೆ. ಅಲ್ಲದೇ ಇನ್ಮುಂದೆ 10 ವರ್ಷಗಳ ಕಾಲ ಯಾವುದೇ ಪಕ್ಷದ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಸುಪ್ರೀಂ ತೀರ್ಪಿನ ಅನ್ವಯ ಶಶಿಕಲಾ, ಸುಧಾಕರನ್, ಇಳವರಸಿ 4 ವರ್ಷಗಳ ಜೈಲುಶಿಕ್ಷೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆಯಬೇಕಾಗಿದೆ. ಇದು ನ್ಯಾಯಕ್ಕೆ ಸಿಕ್ಕ ಗೆಲುವು ಎಂದು ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಅಂತಿಮವಾಗಿ ಧರ್ಮಕ್ಕೆ ಗೆಲುವು ಸಿಗುತ್ತದೆ ಎಂದು ವಿಕೆ ಶಶಿಕಲಾ ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ತೀರ್ಪಿನ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಪನ್ನೀರ್ ಸೆಲ್ವಂ ಸಿಎಂ ಪಟ್ಟದಲ್ಲಿ ಕುಳಿತುಕೊಳ್ಳಬಾರದು ಎಂಬ ಹಠಕ್ಕೆ ಬಿದ್ದಿರುವ ಶಶಿಕಲಾ ಜೈಲಿಗೆ ಹೋಗುವ ಮುನ್ನ ಪನ್ನೀರ್ ಸೆಲ್ವಂ ಅವರನ್ನು ಎಐಎಡಿಎಂಕೆ ಪಕ್ಷದಿಂದಲೇ ಉಚ್ಚಾಟಿಸಿ, ಲೋಕೋಪಯೋಗಿ ಸಚಿವ ಇ.ಪಳನಿಸ್ವಾಮಿಯನ್ನು ಶಾಸಕಾಂಗ ಪಕ್ಷದ ನೂತನ ನಾಯಕನ್ನಾಗಿ ಆಯ್ಕೆ ಮಾಡಿರುವ ಬೆಳವಣಿಗೆ ಮೂಲಕ ತಮಿಳುನಾಡಿನ ರಾಜಕೀಯದ ಹೈಡ್ರಾಮಾ ಮುಂದುವರಿದಂತಾಗಿದೆ. ಮತ್ತೊಂದೆಡೆ ಸರ್ಕಾರ ರಚನೆಗಾಗಿ ಓ ಪನ್ನೀರ್ ಸೆಲ್ವಂ ರಾಜ್ಯಪಾಲರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.