![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 28, 2022, 2:12 PM IST
ಕೇರಳ: ಪತ್ರಕರ್ತೆಯೊಬ್ಬರಿಗೆ ನಟನೊಬ್ಬ ಅಸಭ್ಯವಾಗಿ ನಿಂದಿಸಿದ ಪ್ರಕರಣ ಸುದ್ದಿಯಲ್ಲಿರುವಾಗಲೇ ಮಲಯಾಳಂ ಸಿನಿಮಾರಂಗದಲ್ಲಿ ಮತ್ತೊಂದು ಘಟನೆ ನಡೆದಿದೆ.
ಸಿನಿತಾರೆಯರು ತಮ್ಮ ಚಿತ್ರದ ಪ್ರಮೋಷನ್ ಗಾಗಿ ಮಾಲ್, ಥಿಯೇಟರ್ ಗೆ ಹೋಗುವಾಗ, ಅಭಿಮಾನಿಗಳು, ಫೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಮಂಗಳವಾರ ಕೇರಳದ ಕೋಜಿಕೋಡ್ ಮಾಲ್ ವೊಂದರಲ್ಲಿ “ಸ್ಯಾಟರ್ ಡೇ ನೈಟ್” ಎನ್ನುವ ಸಿನಿಮಾ ಪ್ರಚಾರದಲ್ಲಿ ಖ್ಯಾತ ನಟ, ನಟಿಯರು ಭಾಗಿಯಾಗಿದ್ದರು.
ಮೆಚ್ಚಿನ ಕಲಾವಿದರನ್ನು ನೋಡಲು ಅಭಿಮಾನಿಗಳು, ಪ್ರೇಕ್ಷಕರು ಮುಗಿಬಿದ್ದಿದ್ದು, ಅವರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ಗದ್ದಲದ ನಡುವೆ ನಟಿಯರಿಬ್ಬರಿಗೆ ಯಾರೋ ಅಪರಿಚಿತರು ಮೈ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಕೆಟ್ಟ ಅನುಭವದ ಬಗ್ಗೆ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಟಿ, “ ಸಿನಿಮಾದ ಪ್ರಚಾರ ಮುಗಿದ ಬಳಿಕ ನಾವು ಹೊರಡುತ್ತಿದ್ದೆವು. ಜನಸಂದಣಿ ನಡುವೆ ಯಾರೋ ನನ್ನ ಸಹ ನಟಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅದು ಯಾರೆಂದು ಆ ಕ್ಷಣದಲ್ಲಿ ಅರಿಯಲು ಸಾಧ್ಯವಾಗಿಲ್ಲ. ಏಕೆಂದರೆ ಅಲ್ಲಿ ತುಂಬಾ ಜನರಿದ್ದರು” ಎಂದಿದ್ದಾರೆ.
ಮತ್ತೊಬ್ಬ ನಟಿಯೂ ಈ ಬಗ್ಗೆ ಹೇಳಿದ್ದು, ನನ್ನ ಸಹ ನಟಿಯ ಬಳಿಕ, ನನ್ನ ಜತೆಗೂ ಈ ರೀತಿಯ ಅಸಭ್ಯ ವರ್ತನೆ ನಡೆಯಿತು. ನಾನು ಸಿಟ್ಟಿನಲ್ಲಿ ಪ್ರತಿಕ್ರಿಯಿಸಿದೆ. ಆತನಿಗೆ ಹೊಡೆಯಲು ಹೋದದ್ದನ್ನು. ನೀವು ವಿಡಿಯೋದಲ್ಲಿ ಜನ ಸಂದಣಿಯನ್ನು ನೋಡಬಹುದು. ಯಾರಿಗೂ ಕೂಡ ಈ ರೀತಿಯ ಅನುಭವವಾಗಬಾರದು. ಈ ರೀತಿಯ ಮಹಿಳೆಯರ ಮೇಲಿನ ಕಿರುಕುಳ ಸಹಿಸ ತಕ್ಕದ್ದಲ್ಲ ಎಂದಿದ್ದಾರೆ.
“ಸ್ಯಾಟರ್ ಡೇ ನೈಟ್” ಪ್ರಚಾರದಲ್ಲಿ ಖ್ಯಾತ ನಟರಾದ ನಿವಿನ್ ಪೌಲಿ ಮತ್ತು ಅಜು ವರ್ಗೀಸ್ ಕೂಡ ಭಾಗಿಯಾಗಿದ್ದರು. ಚಿತ್ರವನ್ನು ರೋಶನ್ ಆಂಡ್ರ್ಯೂಸ್ ಅವರು ನಿರ್ದೇಶಿಸಿದ್ದಾರೆ. ಸಾನಿಯಾ ಐಯಪ್ಪನ್ ಮತ್ತು ಗ್ರೇಸ್ ಆಂಟೋನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಿರುಕುಳ ನೀಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.