ಭಾರತಕ್ಕೆ ತೈಲ ರಫ್ತು: ನಂ.2 ಸ್ಥಾನಕ್ಕೇರಿದ ಸೌದಿ
Team Udayavani, Sep 16, 2022, 7:30 AM IST
ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧಾನಂತರ ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚಿದೆ. ಕಳೆದ ಮೂರು ತಿಂಗಳಲ್ಲಿ ಭಾರತಕ್ಕೆ ಗರಿಷ್ಠ ತೈಲ ರಫ್ತು ಮಾಡುವ ದೇಶಗಳಲ್ಲಿ ರಷ್ಯಾಕ್ಕೆ 2ನೇ ಸ್ಥಾನವಿತ್ತು. ಇದೀಗ ಸೌದಿ ಅರೇಬಿಯ ರಷ್ಯಾವನ್ನು ಸಣ್ಣ ಅಂತರದಿಂದ ಹಿಂದಿಕ್ಕಿ 2ನೇ ಸ್ಥಾನಕ್ಕೆ ಬಂದಿದೆ.
ಕಳೆದ ತಿಂಗಳಲ್ಲಿ ಪ್ರತೀ ದಿನ ಭಾರತ 8,63,950 ಬ್ಯಾರೆಲ್ ತೈಲವನ್ನು ಸೌದಿ ಅರೇಬಿಯಿಂದ ತರಿಸಿಕೊಂಡಿದೆ. ಅಂದರೆ ಆಮದು ಪ್ರಮಾಣ ಶೇ.4.8ರಷ್ಟು ಏರಿದೆ. ಅದೇ ರಷ್ಯಾದಿಂದ ಕಳೆದ ತಿಂಗಳು ಪ್ರತೀ ದಿನ 8,55,950 ಬ್ಯಾರೆಲ್ ತೈಲವನ್ನು ತರಿಸಿಕೊಳ್ಳಲಾಗಿದೆ. ಇಲ್ಲಿ ಆಮದು ಪ್ರಮಾಣ ಶೇ.2.4ರಷ್ಟು ಇಳಿಕೆಯಾಗಿದೆ.
ಆದರೆ ಅಗ್ರಸ್ಥಾನವನ್ನು ಇರಾಕ್ ಉಳಿಸಿಕೊಂಡಿದೆ. ಈ ದೇಶವೇ ಭಾರತಕ್ಕೆ ಗರಿಷ್ಠ ತೈಲವನ್ನು ರಫ್ತು ಮಾಡುವುದು. ಉಕ್ರೇನ್ ಮೇಲೆ ದಾಳಿ ಶುರು ಮಾಡಿದ ನಂತರ ರಷ್ಯಾದ ಮೇಲೆ ಜಾಗತಿಕವಾಗಿ ನಿಷೇಧ ಹೇರಲಾಗಿತ್ತು. ಅದರಿಂದ ಆ ದೇಶ ಸಂಪೂರ್ಣವಾಗಿ ಕುಸಿದುಹೋಗಿತ್ತು. ಭಾರತ, ಚೀನಾ ಆಮದು ಮಾಡಿಕೊಳ್ಳುವ ತೈಲದಿಂದ ಅದು ಇನ್ನೂ ಆರ್ಥಿಕವಾಗಿ ಜೀವಂತವಾಗುಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.