ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಸೌದಿ ಅರೇಬಿಯಾದ ರಾಜಕುಮಾರ
Team Udayavani, Oct 23, 2022, 9:00 PM IST
ನವದೆಹಲಿ: ಸೌದಿಯ ರಾಜಕುಮಾರ ಹಾಗೂ ಸೌದಿ ಅರೇಬಿಯಾದ ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಮುಂದಿನ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ನವೆಂಬರ್ ಮಧ್ಯದಲ್ಲಿ ಇಂಡೋನೇಷ್ಯಾದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದು, ಅದಕ್ಕೆ ತೆರಳುವಾಗ ಭಾರತಕ್ಕೆ ಬರಲಿದ್ದಾರೆ. ಅದಕ್ಕೆಂದು ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ನಲ್ಲೇ ವಿದೇಶಾಂಗ ಸಚಿವರ ಮೂಲಕ ಆಮಂತ್ರಣ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊಹಮ್ಮದ್ ಅವರು ನ.14ರ ಬೆಳಗ್ಗೆ ಭಾರತಕ್ಕೆ ಬಂದಿಳಿಯಲಿದ್ದು, ಸಂಜೆ ವೇಳೆಗೆ ಇಂಡೋನೇಷ್ಯಾಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.