Savarkar ಅವಮಾನ ಕೇಸ್: ರಾಹುಲ್ಗೆ ಪುಣೆ ಕೋರ್ಟ್ ಬೇಲ್
Team Udayavani, Jan 11, 2025, 12:44 AM IST
ಪುಣೆ: ಸಾವರ್ಕರ್ಗೆ ಅವಮಾನ ಪ್ರಕರಣದಲ್ಲಿ ಪುಣೆಯ ವಿಶೇಷ ನ್ಯಾಯಾಲಯವು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಜಾಮೀನು ನೀಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ರಾಹುಲ್ ಗಾಂಧಿ ಕೋರ್ಟ್ಗೆ ಹಾಜರಾಗಿದ್ದರು. ರಾಹುಲ್ ಪರ ವಾದ ಮಂಡಿಸಿದ್ದ ವಕೀಲ ಮಿಲಿಂದ್ ಪವಾರ್ ಅವರು, ಕೋರ್ಟ್ ಮುಂದೆ ಹಾಜರಾಗುವುದಕ್ಕೆ ವಿನಾಯ್ತಿಯೊಂದಿಗೆ ಕೋರ್ಟ್ ರಾಹುಲ್ಗೆ ಜಾಮೀನು ನೀಡಿದೆ. ಫೆ.18ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ ಎಂದು ಹೇಳಿದರು. 2023ರಲ್ಲಿ ಲಂಡನ್ನಲ್ಲಿ ರಾಹುಲ್ ಭಾಷಣ ಮಾಡುವಾಗ ಸಾವರ್ಕರ್ಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಅವರ ಮೊಮ್ಮಗ ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ನಲ್ಲಿ ದಾಖಲಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.