ಇಂಧನ ಉಳಿತಾಯ ಮಾಡಿ ಆರ್ಬಿಟರ್ ಆಯಸ್ಸು ಹೆಚ್ಚಳ
Team Udayavani, Sep 12, 2019, 5:34 AM IST
ನವದೆಹಲಿ: ಸಾಮಾನ್ಯವಾಗಿ ಒಂದು ವರ್ಷ ಚಂದ್ರನ ಕಕ್ಷೆಯಲ್ಲಿ ಸುತ್ತುವ ನಿರೀಕ್ಷೆಯಿದ್ದ ಚಂದ್ರಯಾನ 2 ಆರ್ಬಿಟರ್‌ನ ಆಯಸ್ಸನ್ನು ಇಸ್ರೋ ವಿಜ್ಞಾನಿಗಳು 7 ವರ್ಷಗಳವರೆಗೆ ಹೆಚ್ಚಳ ಮಾಡಿದ್ದಾರೆ. ಆರ್ಬಿಟರ್‌ನಲ್ಲಿ ಇನ್ನೂ 500 ಕಿಲೋ ಇಂಧನ ಉಳಿದಿರುವುದರಿಂದಾಗಿ 7 ವರ್ಷ ಆರ್ಬಿಟರ್ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ.
ಭೂಮಿಯ ಕಕ್ಷೆಗೆ ಆರ್ಬಿಟರ್ ಅನ್ನು ಜಿಎಸ್‌ಎಲ್ವಿ ಕಳುಹಿಸಿದ ನಂತರ ಒಂದೊಂದೇ ಹಂತದಲ್ಲಿ ಕಕ್ಷೆ ಬದಲಿಸಿಕೊಂಡು ಚಂದ್ರನ ಕಕ್ಷೆಗೆ ತಲುಪಿದೆ. ಪ್ರತಿ ಬಾರಿ ಕಕ್ಷೆ ಬದಲಿಸುವಾಗಲೂ ಆರ್ಬಿಟರ್‌ನಲ್ಲಿ ಇರುವ ಇಂಧನವನ್ನೇ ಬಳಸಲಾಗಿದೆ. ಆದರೆ ಪ್ರತಿ ಬಾರಿಯೂ ಕನಿಷ್ಠ ಅಗತ್ಯ ಇಂಧನ ಬಳಸಲಾಗಿದೆ. ಅಲ್ಲದೆ, ಯಾವುದೇ ಸಮಸ್ಯೆಯಿಲ್ಲದೇ ಆರ್ಬಿಟರ್ ಚಂದ್ರನ ಕಕ್ಷೆ ಸೇರಿರುವುದರಿಂದ ಹೆಚ್ಚು ಇಂಧನ ಬಳಸುವ ಅಗತ್ಯ ಇಸ್ರೋ ವಿಜ್ಞಾನಿಗಳಿಗೆ ಉಂಟಾಗಿಲ್ಲ. ಉಡಾವಣೆಗೂ ಮುನ್ನ ಇದರಲ್ಲಿ 1697 ಕಿಲೋ ಇಂಧನವನ್ನು ತುಂಬಿಸಲಾಗಿತ್ತು. ಈಗ ಇದರಲ್ಲಿ ಸುಮಾರು 500 ಕಿಲೋ ಇಂಧನವಿದೆ. ಹೀಗಾಗಿ ಇದು ಒಟ್ಟು 7 ವರ್ಷಗಳವರೆಗೆ ಕೆಲಸ ಮಾಡಬಹುದು ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.
ಸಂಪರ್ಕ ತಪ್ಪಿದ್ದು 400 ಮೀ. ದೂರದಲ್ಲಿ! ಸೆ.7ರಂದು ಚಂದ್ರಯಾನ 2 ಚಂದ್ರನ ಮೇಲೆ ಇಳಿಯುತ್ತಿದ್ದಾಗ ಸಂಪರ್ಕ ತಪ್ಪಿರುವುದು ತಿಳಿದೇ ಇದೆ. ಆದರೆ ಚಂದ್ರನಿಂದ 2.1 ಕಿಮೀ ಎತ್ತರದಲ್ಲಿರುವಾಗ ಇಸ್ರೋ ಸಂಪರ್ಕವನ್ನು ವಿಕ್ರಮ್ ಲ್ಯಾಂಡರ್ ಕಳೆದುಕೊಂಡಿತು ಎಂದು ಎಲ್ಲರೂ ಭಾವಿಸಿದ್ದಾರೆ. ವಾಸ್ತವವಾಗಿ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದು, 335 ಮೀ. ಎತ್ತರದಲ್ಲಿ ಇದ್ದಾಗ ಎಂಬುದು ಇಸ್ರೋ ಪ್ರಕಟಿಸಿರುವ ಇಸ್‌ಟ್ರಾಕ್‌ನ ಮಾನಿಟರುಗಳ ವರದಿ ಪರಿಶೀಲಿಸಿದಾಗ ತಿಳಿದುಬರುತ್ತದೆ. ಆದರೆ 2.1 ಕಿ.ಮೀ ದೂರದವರೆಗೂ ಎಲ್ಲವೂ ಸರಿ ಇತ್ತು. ನಂತರದಲ್ಲಿ ನಮ್ಮ ಸಂಪರ್ಕವನ್ನು ವಿಕ್ರಮ್ ಕಡಿದುಕೊಂಡಿತು ಎಂದು ಅದೇ ದಿನ ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ ಹಿನ್ನೆಲೆಯಲ್ಲಿ ಈ ಗೊಂದಲ ನಿರ್ಮಾಣವಾಗಿದೆ. ಮಾನಿಟರ್‌ನ ಚಿತ್ರಣ ಗಮನಿಸಿದರೆ, 2.1 ಕಿ.ಮೀವರೆಗೆ ಸರಿಯಾಗಿಯೇ ಸಾಗುತ್ತಿದ್ದ ಲ್ಯಾಂಡರ್ ಅಲ್ಲಿಂದ ಪಥದಲ್ಲಿ ವ್ಯತ್ಯಯ ತೋರಿಸಿದೆ. ಆದರೆ 335 ಮೀ. ಬಳಿ ಇದು ತನ್ನ ಸಂಪರ್ಕ ಕಡಿದುಕೊಂಡಿರುವುದು ತಿಳಿದು ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.