ಒಂಟಿತನಕ್ಕೆ ಹೇಳಿ ಗುಡ್‌ಬೈ
Team Udayavani, Jan 30, 2018, 9:50 AM IST
ರಾಯಪುರ: ಇತ್ತೀಚೆಗಷ್ಟೇ ಬ್ರಿಟನ್ ಸರ್ಕಾರ ಏಕಾಂಗಿತನ ನಿವಾರಣೆಗಾಗಿಯೇ ಸಚಿವಾಲಯವೊಂದನ್ನು ಆರಂಭಿಸಿ, ಅದಕ್ಕೆ ಸಚಿವರನ್ನೂ ನೇಮಿಸಿತ್ತು. ಇದೀಗ ಛತ್ತೀಸ್‌ಗಢದ ರಾಯು³ರ ಜಿಲ್ಲಾಡಳಿತವು ಹಿರಿಯ ನಾಗರಿಕರಿಗೆ ಕಾಡುವ ಏಕಾಂಗಿತನವನ್ನು ಹೋಗಲಾಡಿಸಲು “ಬಾಪು ಕಿ ಕುಟೀರ್’ ಯೋಜನೆ ಆರಂಭಿಸಿದೆ. ವೃದ್ಧರಿಗೆ ತಮ್ಮದೇ ವಯೋಮಾನದವರ ಜೊತೆ ಮಾತನಾಡುತ್ತಾ, ಕ್ರಿಯಾಶೀಲವಾಗಿ ಸಮಯ ಕಳೆಯುತ್ತಾ ತಮಗಿರುವ ಒಂಟಿತನದಿಂದ ಹೊರಬರಲು ಸಹಾಯ ಮಾಡುವುದೇ ಈ ವಿನೂತನ ಯೋಜನೆಯ ಉದ್ದೇಶ.
ಉದ್ಯಾನಗಳು ಮತ್ತು ಇತರೆ ಪ್ರದೇಶಗಳಲ್ಲಿ ಆಕರ್ಷಕವಾಗಿರುವ 50 ಕುಟೀರಗಳನ್ನು ನಿರ್ಮಿಸಲಾಗುವುದು. ಅಲ್ಲಿ ವೃದ್ಧರು ಟಿವಿ ನೋಡುತ್ತಾ, ಆಟವಾಡುತ್ತಾ, ಹರಟೆ ಹೊಡೆಯುತ್ತಾ ಕಾಲ ಕಳೆಯಬಹುದು. ಇಲ್ಲಿಯ ಉದ್ಯಾನವೊಂದರಲ್ಲಿ ನಿರ್ಮಿಸಲಾಗಿರುವ ಮೊದಲ “ಬಾಪು ಕಾ ಕುಟೀರ್’ ಅನ್ನು ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಉದ್ಘಾಟಿಸಿದ್ದಾರೆ.
ಇವತ್ತಿನ ಸಮಾಜದಲ್ಲಿ ಜನರು ವೃದ್ಧಾಪ್ಯ ಆವರಿಸುತ್ತಿದ್ದಂತೆ ಒಂಟಿಯಾಗುತ್ತಾರೆ, ಆಗ ಅವರಿಗೆ ತಮ್ಮ ಭಾವನೆ ಹೊಂಚಿಕೊಳ್ಳಲು, ಸಮಯ ಕಳೆಯಲು ಅವರದೇ ವಯಸ್ಸಿನವರ ಅಗತ್ಯವಿರುತ್ತದೆ. ಇಲ್ಲಿಗೆ ಬಂದರೆ ಅವರಿಗೆ ಸ್ನೇಹಿತರು ದೊರಕುತ್ತಾರೆ. ಈ ಸುಸಜ್ಜಿತ ಕುಟೀರಗಳಲ್ಲಿ ಕೂಲರ್, ಟೀವಿ, 35 ಜನ ಒಟ್ಟಿಗೆ ಕುಳಿತುಕೊಳ್ಳಲು ಆಸನ, ಆಟವಾಡಲು ಕೇರಂ, ಚೆಸ್, ನಿಯತಕಾಲಿಕೆಗಳು, ವೃತ್ತ ಪತ್ರಿಕೆಗಳು ಇರುತ್ತವೆ ಎಂದು ರಾಯು³ರ ಜಿಲ್ಲಾಧಿಕಾರಿ ಒ.ಪಿ. ಚೌಧರಿ ಹೇಳಿದ್ದಾರೆ. ನಾವು ಕಟ್ಟಡ ಮತ್ತು ಸೌಲಭ್ಯಗಳನ್ನು ಒದಗಿಸುತ್ತೇವೆ. ಸ್ವಸಹಾಯ ಸಂಸ್ಥೆಗಳು, ಸಾಮಾಜಿಕ ಇದರ ನಿರ್ವಹಣೆ ನೋಡಿಕೊಳ್ಳುತ್ತವೆ. ನಾವು ಇನ್ನೂ ಹೆಚ್ಚಿನ ಸಂಘ ಸಂಸ್ಥೆಗಳ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.