ಅ.31ರಿಂದ SBI ATM ವಿದ್‌ಡ್ರಾ ಮಿತಿ 20,000 ರೂ.ಗೆ ಕಡಿತ: ವರದಿ
Team Udayavani, Oct 1, 2018, 11:22 AM IST
ಮುಂಬಯಿ : ಹಬ್ಬದ ಋತು ಆರಂಭಕ್ಕೆ ಮುನ್ನವೇ, ಇದೇ ಅಕ್ಟೋಬರ್ 31ರಿಂದ ಜಾರಿಗೆ ಬರುವಂತೆ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ ಗ್ರಾಹಕರು ಎಟಿಎಂ ನಿಂದ ಹಣ ವಿದ್ ಡ್ರಾ ಮಾಡುವ ಈಗಿನ ಗರಿಷ್ಠ 40,000 ರೂ. ಮೊತ್ತದ ಮಿತಿಯನ್ನು 20,000 ರೂ. ಗೆ ಇಳಿಸಲಿದೆ ಎಂದು ವರದಿಗಳು ತಿಳಿಸಿವೆ.
ಎಟಿಎಂ ಗಳಲ್ಲಿ ಅಕ್ರಮವಾಗಿ ಹಣ ಲಪಟಾಯಿಸುವ ಪ್ರಕರಣಗಳ ಹೆಚ್ಚುತ್ತಿರುವ ಬಗ್ಗೆ ಗ್ರಾಹಕರಿಗೆ ಅಸಂಖ್ಯ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಜನರು ಕ್ಯಾಶ್‌ಲೆಸ್ ವ್ಯವಹಾರದಲ್ಲಿ ಗಮನಾರ್ಹವಾಗಿ ತೊಡಗಿಕೊಳ್ಳಬೇಕು ಎಂಬ ಕಾರಣಕ್ಕೆ ಎಟಿಎಂ ವಿದ್‌ಡ್ರಾವಲ್ ಗರಿಷ್ಠ ಮಿತಿಯನ್ನು ಅರ್ಧದಷ್ಟು ಇಳಿಸುವ ನಿರ್ಧಾರಕ್ಕೆ ಎಸ್‌ಬಿಐ ಬಂದಿರುವುದಾಗಿ ಮೂಲಗಳು ತಿಳಿಸಿವೆ.
ಈ ವಿಷಯವನ್ನು ಬ್ಯಾಂಕಿನ ಗ್ರಾಹಕರಿಗೆ ಈಗಿಂದಲೇ ತಿಳಿಸುವಂತೆ ಎಸ್‌ಬಿಐ ಕಾರ್ಯಾಲಯಗಳಿಗೆ ಪ್ರಧಾನ ಕಚೇರಿಯಿಂದ ಸೂಚನೆ ಬಂದಿರುವುದಾಗಿ ವರದಿಗಳು ತಿಳಿಸಿವೆ. ಹಬ್ಬದ ಋತು ಆರಂಭಕ್ಕೆ ಮುನ್ನವೇ ಎಸ್‌ಬಿಐ ತನ್ನ ಎಟಿಎಂ ಗಸಿಷ್ಠ ವಿದ್‌ಡ್ರಾವಲ್ ಮಿತಿಯನ್ನು ಅರ್ಧದಷ್ಟು ಇಳಿಸಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆ ಇಂದು ತಿಳಿಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.