ಚೆಕ್ ಪಾವತಿಗೂ ಎಸ್‌ಬಿಐ ಶುಲ್ಕ
Team Udayavani, Apr 19, 2017, 3:45 AM IST
ಮುಂಬೈ: ಕಡ್ಡಾಯ ಕನಿಷ್ಠ ಬ್ಯಾಲೆನ್ಸ್, ಎಟಿಎಂನಲ್ಲಿ ಹಣದ ವಹಿವಾಟಿಗೆ ಮಿತಿ, ಹೆಚ್ಚುವರಿ ವಹಿವಾಟಿಗೆ ದಂಡ ಮತ್ತಿತರ ಹೊಸ ನಿಯಮಗಳನ್ನು ಘೋಷಿಸಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾವು ಗ್ರಾಹಕರ ಅಸಮಾಧಾನಕ್ಕೆ ಗುರಿಯಾಗಿರುವುದು ಗೊತ್ತೇ ಇದೆ. ಇದೀಗ, ಎಸ್‌ಬಿಐನ ಅಂಗವಾದ ಎಸ್‌ಬಿಐ ಕಾರ್ಡ್ ತನ್ನ ಗ್ರಾಹಕರಿಗೆ ಹೊಸ ಶಾಕ್ ನೀಡಿದೆ.
ಇನ್ನು ಮುಂದೆ ಚೆಕ್ ಮೂಲಕ ಮಾಡುವ ಪಾವತಿಗೂ ಶುಲ್ಕ ವಿಧಿಸಲು ಎಸ್‌ಬಿಐ ಕಾರ್ಡ್ ಸಂಸ್ಥೆ ನಿರ್ಧರಿಸಿದೆ. ಅದರಂತೆ, 2 ಸಾವಿರ ರೂ.ಗಳಿಗಿಂತ ಕಡಿಮೆ ಮೊತ್ತದ ಚೆಕ್‌ಗಳನ್ನು ಡ್ರಾಪ್ ಬಾಕ್ಸ್‌ಗೆ ಹಾಕಿದರೆ, ಅದಕ್ಕೆ 100 ರೂ. ಶುಲ್ಕ ವಿಧಿಸುವುದಾಗಿ ಇದೇ ಮೊದಲ ಬಾರಿಗೆ ಸಂಸ್ಥೆ ಘೋಷಿಸಿದೆ.
ಚೆಕ್‌ಗಳ ಬಳಕೆಯನ್ನು ಕಡಿಮೆಗೊಳಿಸುವುದೇ ಇದರ ಉದ್ದೇಶ ಎಂದೂ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್‌ಬಿಐ ಕಾರ್ಡ್ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಜಸುಜಾ, “ಬಾಕ್ಸ್‌ಗಳಲ್ಲಿ ಭಾರೀ ಸಂಖ್ಯೆಯ ಚೆಕ್‌ಗಳನ್ನು ಹಾಕಲಾಗುತ್ತದೆ. ಅವುಗಳನ್ನೆಲ್ಲ ಕ್ಲಿಯರ್ ಮಾಡುವಾಗ ವಿಳಂಬ ಪಾವತಿ ಶುಲ್ಕಗಳ ಸಮಸ್ಯೆ ತಲೆದೋರುತ್ತದೆ. ಇವುಗಳನ್ನು ತಪ್ಪಿಸುವ ಉದ್ದೇಶದಿಂದ ಚೆಕ್ ಪಾವತಿಯನ್ನೇ ಕಡಿಮೆಗೊಳಿಸಲು ಯತ್ನಿಸುತ್ತಿದ್ದೇವೆ,’ ಎಂದಿದ್ದಾರೆ.
ಜತೆಗೆ, ಶೇ.8ರಷ್ಟು ಮಂದಿ ಚೆಕ್ ಪಾವತಿಯ ಮೊರೆಹೋಗುತ್ತಾರೆ. ಆ ಪೈಕಿ ಶೇ.6ರಷ್ಟು ಮಂದಿ 2 ಸಾವಿರ ರೂ.ಗಳಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುತ್ತಾರೆ. ಹಾಗಾಗಿ, ಉಳಿದ ಶೇ.2ರಷ್ಟು ಮಂದಿಯ ಮೇಲಷ್ಟೇ ಈ ಹೆಚ್ಚುವರಿ ಶುಲ್ಕದ ಪರಿಣಾಮ ಬೀರಲಿದೆ ಎಂದೂ ಹೇಳಿದ್ದಾರೆ ಜಸುಜಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.